Astrology: ಇನ್ನು ಶುರುವಾಗುತ್ತೆ ನೋಡಿ ಅದೃಷ್ಟ- ನಾಳೆ ಇಂದ ನಿಮ್ಮನ್ನು ಟಚ್ ಮಾಡೋರು ಇರಲ್ಲ, ಈ ರಾಶಿಗಳೇ ಕಿಂಗ್

Astrology: ನಮಸ್ಕಾರ ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರವರಿ 13ರಂದು ಸೂರ್ಯ ಕುಂಭ ರಾಶಿಗೆ ಈಗಾಗಲೇ ಆಗಮನ ಮಾಡಿದ್ದಾನೆ. ಇನ್ನು ಫೆಬ್ರವರಿ 20ರಂದು ಕುಂಭ ರಾಶಿಯಲ್ಲಿ ಬುಧ ತನ್ನ ಸಂಚಾರವನ್ನು ಪ್ರಾರಂಭಿಸಲಿದ್ದಾನೆ. ಈ ಸಂದರ್ಭದಲ್ಲಿ ಬುಧಾದಿತ್ಯ ಯೋಗ ಉಂಟಾಗಲಿದ್ದು ಯಾವೆಲ್ಲ ರಾಶಿಯವರಿಗೆ ಲಾಭ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ.

 ಮೇಷ ರಾಶಿ (Aries)

ಸಾಕಷ್ಟು ಸಮಯಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವಂತಹ ಮೇಷ ರಾಶಿಯವರಿಗೆ ಅವರ ಮನಸ್ಸಿಗೆ ಇಷ್ಟ ಆಗುವಂತ ಕೆಲಸ ಸಿಗಲಿದೆ. ಮಕ್ಕಳಿಂದ ಗುಡ್ ನ್ಯೂಸ್ ಕೇಳುವಂತಹ ಯೋಗ ನಿಮ್ಮದಾಗಲಿದೆ. ಸಾಕಷ್ಟು ಸಮಯಗಳಿಂದ ಮದುವೆಯಾಗದೆ ಕಂಕಣ ಭಾಗ್ಯಕ್ಕಾಗಿ ಎದುರು ನೋಡುತ್ತಿರುವವರಿಗೆ ಶುಭ ಸುದ್ದಿ ಕೇಳಿ ಬರಲಿದ್ದು ಇದೇ ವರ್ಷ ನಿಮ್ಮ ಮದುವೆಯಾಗಲಿದೆ. ನೀವು ಮಾಡುವ ಕೆಲಸದಲ್ಲಿ ನಿಮ್ಮ ಒಡಹುಟ್ಟಿದವರ ಬೆಂಬಲ ಇರಲಿದೆ.

 ಮಿಥುನ ರಾಶಿ (Gemini)

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಮಿಥುನ ರಾಶಿಯವರಿಗೆ ಆರ್ಥಿಕ ಲಾಭ ಸಿಗಲಿದೆ. ವಿದೇಶಕ್ಕೆ ಹೋಗಿ ವ್ಯಾಸಂಗವನ್ನು ಮಾಡುವಂತಹ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಇದೆ. ಈ ಸಂದರ್ಭದಲ್ಲಿ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ ದೊರಕಲಿದೆ. ಸ್ವಲ್ಪ ಮಟ್ಟಿಗಿನ ಕಠಿಣ ಪರಿಶ್ರಮ ಎನ್ನುವುದು ನಿಮಗೆ ಜೀವನದಲ್ಲಿ ರಾಜನ ರೀತಿಯಲ್ಲಿ ಜೀವನ ಮಾಡುವುದಕ್ಕೆ ಕಾರಣವಾಗಲಿದೆ. ಮಿಥುನ ರಾಶಿಯವರಿಗೆ ಸಂತೋಷದ ಜೀವನ ಕಾದಿದೆ.

 ಕರ್ಕ ರಾಶಿ (Cancer)

ಕರ್ಕ ರಾಶಿಯವರಿಗೆ ಈ ಶುಭ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಧನ ಲಾಭವನ್ನು ಪಡೆಯುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೂ ಜೀವನದಲ್ಲಿ ಶ್ರೀಮಂತಿಕೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆದುಕೊಳ್ಳುವಂತಹ ನಿಮ್ಮ ಪ್ರಯತ್ನ ಸಫಲವಾಗಲಿದೆ. ಒಂದು ವೇಳೆ ನೀವು ಈ ಸಂದರ್ಭದಲ್ಲಿ ಹಣವನ್ನು ಯಾವುದಾದರು ಕಡೆ ಹೂಡಿಕೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುವ ಯೋಚನೆ ಮಾಡಿದ್ರೆ ಲಾಭವನ್ನು ನಿಶ್ಚಿತ ರೂಪದಲ್ಲಿ ಪಡೆದುಕೊಳ್ಳಲಿದ್ದೀರಿ.

 ಸಿಂಹ ರಾಶಿ (Leo)

ಕೆಲಸದ ಕ್ಷೇತ್ರದಲ್ಲಿ ಸಿಂಹ ರಾಶಿಯವರು ಹೊಸ ಉತ್ತುಂಗವನ್ನು ತಲುಪಲಿದ್ದಾರೆ ಹಾಗೂ ಪ್ರಮೋಷನ್ ಮತ್ತು ಸಂಬಳದಲ್ಲಿ ಹೆಚ್ಚಳವನ್ನು ಕಾಣಲಿದ್ದಾರೆ. ಸಿಂಹ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಯಾವುದೇ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ನಿಮ್ಮ ಕೆಲಸದಲ್ಲಿ ನೀವು ಯಾವುದೇ ಸಮಸ್ಯೆ ಹಾಗೂ ಶತ್ರುಗಳನ್ನು ಕೂಡ ಇನ್ನು ಮುಂದೆ ಕಾಣಬೇಕಾದ ಅಗತ್ಯವಿರುವುದಿಲ್ಲ ದೇವರ ಕೃಪೆಯಿಂದಾಗಿ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗಲಿದೆ.

 ಮಕರ ರಾಶಿ (Capricorn)

ಇತ್ತೀಚಿಗಷ್ಟೇ ಮದುವೆ ಆಗಿರುವಂತಹ ನವ ಜೋಡಿಗಳು ಉತ್ತಮವಾದ ವೈವಾಹಿಕ ಸಂಬಂಧವನ್ನು ಈ ಸಂದರ್ಭದಲ್ಲಿ ಹೊಂದಿರುತ್ತಾರೆ. ಮಾಡುವಂತಹ ವ್ಯಾಪಾರ ಹಾಗೂ ವ್ಯವಹಾರದಲ್ಲಿ ಹಣವನ್ನು ಹೇರಳವಾಗಿ ಸಂಪಾದನೆ ಮಾಡಲಿದ್ದೀರಿ. ಈ ವಿಶೇಷವಾದ ಯೋಗದಿಂದಾಗಿ ನೀವು ಈಗಾಗಲೇ ಮಾಡಿರುವಂತಹ ಎಲ್ಲಾ ಹಳೆಯ ಸಾಲಗಳು ಕೂಡ ತೀರಲಿವೆ. ಮುಂದಿನ ದಿನಗಳಲ್ಲಿ ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಕಂಡುಬರುವುದಿಲ್ಲ.

Comments are closed.