Ayodhya: ಇನ್ನು ಮುಂದೆ ರಾಮ ಮಂದಿರ ಪ್ರತಿ ದಿನ ಒಂದು ಗಂಟೆ ಬಂದ್- ಯಾಕೆ ಗೊತ್ತೇ??

Ayodhya: ನಮಸ್ಕಾರ ಸ್ನೇಹಿತರೆ, ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಯೋಧ್ಯೆಯಲ್ಲಿ ಇಡೀ ದೇಶದಲ್ಲಿ ಅತ್ಯಂತ ದೊಡ್ಡ ಅಯೋಧ್ಯಾ (Ayodhya) ರಾಮಮಂದಿರ (Rama mandir) ವನ್ನು ಜನವರಿ 22ರಂದು ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾಗಿರುವಂತಹ ಶ್ರೀ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ್ದಾರೆ. ಯಾವುದೇ ಬಿಡುವಿಲ್ಲದೆ ಇಷ್ಟು ದಿನ ಭಕ್ತಾಭಿಮಾನಿಗಳಿಗೆ ರಾಮಲಲ್ಲಾನ ದರ್ಶನ ಮಾಡುವುದಕ್ಕೆ ಅವಕಾಶವನ್ನು ನೀಡಲಾಗುತ್ತಿತ್ತು. ಲಕ್ಷಾಂತರ, ಸಾವಿರಾರು ಮಂದಿ ಪ್ರತಿದಿನ ರಾಮನ ದರ್ಶನಕ್ಕಾಗಿ ದೇಶದ ಮೂಲೆ ಮೂಲೆಯಿಂದ ಇಲ್ಲಿಗೆ ಬರುತ್ತಿದ್ದರು.

ಇತ್ತೀಚಿಗಷ್ಟೇ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಪ್ರಧಾನ ಅರ್ಚಕರು ತಿಳಿಸಿರುವಂತೆ ಇನ್ನು ಮುಂದೆ ಒಂದು ಗಂಟೆ ಸಮಯದಷ್ಟು ವಿರಾಮ ಇರುತ್ತದೆ ಎಂಬುದಾಗಿ ತಿಳಿದು ಬಂದಿದೆ. ಹೌದು ರಾಮನ ದರ್ಶನಕ್ಕಾಗಿ ಇನ್ನು ಮುಂದೆ ಅಯೋಧ್ಯೆ (Ayodhya) ಗೆ ಬರುವಂತಹ ಭಕ್ತಾಭಿಮಾನಿಗಳು ತಿಳಿದುಕೊಳ್ಳಬೇಕಾಗಿರುವ ವಿಚಾರ ಏನೆಂದರೆ ಒಂದು ಗಂಟೆಗಳ ಸಮಯದವರೆಗೆ ರಾಮನ ಮಂದಿರವನ್ನು ವಿರಾಮಕ್ಕಾಗಿ ಮುಚ್ಚಲಾಗುತ್ತದೆ ಎಂಬುದಾಗಿ ತಿಳಿದುಕೊಳ್ಳಬೇಕಾಗಿರುತ್ತದೆ. ಇದನ್ನು ಖುದ್ದಾಗಿ ರಾಮಮಂದಿರದ ಪ್ರಧಾನ ಅರ್ಚಕರೇ ಹೇಳಿಕೊಂಡಿದ್ದಾರೆ. ಬೆಳಗಿನ 4:00ಯಿಂದ ಪ್ರಾರಂಭಿಸಿ ರಾತ್ರಿವರೆಗೂ ಕೂಡ ರಾಮಮಂದಿರವನ್ನು ಭಕ್ತಾಭಿಮಾನಿಗಳಿಗೆ ದರ್ಶನಕ್ಕಾಗಿ ಕರೆಯಲಾಗುತ್ತಿತ್ತು ಆದರೆ ಈಗ ಒಂದು ಗಂಟೆಗಳ ವಿರಾಮವನ್ನು ನೀಡುವುದಕ್ಕೆ ನಿರ್ಧರಿಸಲಾಗಿದೆ.

ಫೆಬ್ರವರಿ 20ನೇ ತಾರೀಕಿನಿಂದ 2095 ವರ್ಷಗಳ ವರೆಗೆ 6 ರಾಶಿಯವರ  ಅದೃಷ್ಟವೇ ಬದಲಾಗಲಿದೆ. ನಿಮ್ಮ ಶುಕ್ರದೆಸೆ ರಾಜಯೋಗದ ಬಗ್ಗೆ ಗುಟ್ಟು ಬಿಚ್ಚಿಟ್ಟ ಗುರೂಜಿ!

ಇದರ ಬಗ್ಗೆ ಮಾತನಾಡುತ್ತಾ “ರಾಮನಲ್ಲ ಐದು ವರ್ಷದ ಮಗುವಾಗಿದ್ದು ಇಷ್ಟು ಗಂಟೆಗಳ ಕಾಲ ಆತ ಎಚ್ಚರವಿರಲು ಹಾಗೂ ಒತ್ತಡವನ್ನು ನಿಭಾಯಿಸಲು ಸಾಧ್ಯ ಇರುವುದಿಲ್ಲ ಎನ್ನುವ ಕಾರಣಕ್ಕಾಗಿ ಮಧ್ಯಾಹ್ನ 12:30 ರಿಂದ 1.30ರವರೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುವುದು” ಎಂಬುದಾಗಿ ದೇವಸ್ಥಾನದ ಪ್ರಧಾನ ಅರ್ಚಕರು ಭಕ್ತಾಭಿಮಾನಿಗಳಿಗೆ ರಾಮಮಂದಿರ ಟ್ರಸ್ಟ್ ಮುಖಾಂತರ ಹೇಳಿಕೊಂಡಿದ್ದಾರೆ. ಇದು ಕೇವಲ ನೇರವಾಗಿ ಅಯೋಧ್ಯೆ (Ayodhya)ಗೆ ಬರುವಂತ ಭಕ್ತಾಭಿಮಾನಿಗಳಿಗೆ ಮಾತ್ರವಲ್ಲದೆ, ಆನ್ಲೈನ್ ನಲ್ಲಿ ಆರತಿ ಪಾಸ್ ಪಡೆದುಕೊಳ್ಳುವಂತಹ ಭಕ್ತಾಭಿಮಾನಿಗಳಿಗೆ ಕೂಡ ಅನ್ವಯ ಆಗುತ್ತದೆ ಹಾಗೂ ಈ ಸಮಯವನ್ನು ನೋಡಿಕೊಂಡು ಪಾಸ್ ಪಡೆದುಕೊಳ್ಳಿ ಎಂಬುದಾಗಿ ಹೇಳಲಾಗಿದೆ.

ಪ್ರತಿದಿನ ರಾಮಮಂದಿರಕ್ಕೆ 80,000ಕ್ಕೂ ಹೆಚ್ಚಿನ ಭಕ್ತಾಭಿಮಾನಿಗಳು ಆಗಮಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಭಕ್ತರನ್ನು ನಿಯಂತ್ರಣ ಮಾಡುವುದಕ್ಕೆ ಹಾಗೂ ಅವರಿಗೆ ಸುಲಲಿತವಾಗಿ ದರ್ಶನವನ್ನು ನೀಡುವ ಕಾರಣಕ್ಕಾಗಿ ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂಬುದಾಗಿ ಹೇಳಲಾಗಿದೆ. ಇನ್ನು ಮುಂದೆ ರಾಮನ ದರ್ಶನಕ್ಕಾಗಿ ಬರುವಂತಹ ಪ್ರತಿಯೊಬ್ಬ ಭಾರತೀಯ ಅಥವಾ ರಾಮಭಕ್ತ ಈ ವಿಚಾರವನ್ನು ತಿಳಿದುಕೊಂಡು ಸರಿಯಾದ ಸಮಯಕ್ಕೆ ದರ್ಶನಕ್ಕಾಗಿ ಬರಬೇಕಾಗಿದೆ. ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಕೂಡ ರಾಮಮಂದಿರದ ಟ್ರಸ್ಟ್ ತೆಗೆದುಕೊಂಡಿರುವಂತಹ ಈ ನಿರ್ಧಾರಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ. ರಾಮಮಂದಿರ ಟ್ರಸ್ಟ್ ತೆಗೆದುಕೊಂಡಿರುವಂತಹ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡೋ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.