Job: ಜಾಸ್ತಿ ಬೇಡ 10 ನೇ ತರಗತಿ ಆಗಿದ್ರೆ ಅರ್ಜಿ ಹಾಕಿ- ಕೈತುಂಬಾ ಸಂಬಳ, ಸರ್ಕಾರೀ ನೌಕರಿ. ಪೋಸ್ಟ್ ಆಫೀಸ್ ಅರ್ಜಿ ಹಾಕಿ ಕೆಲಸ ಪಡೆಯಿರಿ

Job: ನಮಸ್ಕಾರ ಸ್ನೇಹಿತರೆ ಒಂದು ವೇಳೆ ನೀವು ಯಾವುದೇ ಕೆಲಸಕ್ಕಾಗಿ ಹುಡುಕುತ್ತಿದ್ದರೆ ಭಾರತೀಯ ಅಂಚೆ ಇಲಾಖೆಯಲ್ಲಿ 98 ಸಾವಿರಕ್ಕೂ ಅಧಿಕ ಖಾಲಿ ಹುದ್ದೆಗಳು ಇದ್ದು ನೀವು ಕೆಲಸಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲಕ್ಕಿಂತ ಮೆಚ್ಚಿ ಬೇಕಾಗಿರುವ ಮತ್ತೊಂದು ವಿಚಾರ ಏನಂದ್ರೆ? 10ನೇ ತರಗತಿ ಪಾಸ್ ಆಗಿರುವವರು ಕೂಡ ಈ ಕೆಲಸಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎನ್ನುವುದು ವಿಶೇಷವಾಗಿದೆ. ಆನ್ಲೈನ್ ಮೂಲಕ ಇದರ ಅರ್ಜಿ ಸಲ್ಲಿಸಬಹುದಾಗಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

 ಪೋಸ್ಟ್ ಆಫೀಸ್ ಕೆಲಸದ ಹುದ್ದೆಯ ವಿವರ

ಪೋಸ್ಟ್ ಆಫೀಸ್ ಕೆಲಸದಲ್ಲಿ ಖಾಲಿ ಇರುವಂತಹ ಹುದ್ದೆಗಳ ವಿವರದ ಬಗ್ಗೆ ಮಾತನಾಡುವುದಾದರೆ GDS, ಪೋಸ್ಟ್ ಮ್ಯಾನ್, ಪೋಸ್ಟಲ್ ಅಸಿಸ್ಟೆಂಟ್, ಎಂ ಟಿ ಎಸ್, ಮೇಲ್ ಗಾರ್ಡ್ ಹಾಗೂ ಸೋರ್ಟಿಂಗ್ ಅಸಿಸ್ಟೆಂಟ್ಗಳಂತಹ ಹುದ್ದೆ ಬಾಕಿ ಇವೆ.

1. ಕರ್ನಾಟಕ ರಾಜ್ಯದಲ್ಲಿ ಖಾಲಿ ಇರುವಂತ ಒಟ್ಟು ಹುದ್ದೆಗಳು 5731.

2. ಅದರಲ್ಲಿ ಖಾಲಿ ಇರುವಂತಹ ಎಂಟಿಎಸ್ ಹುದ್ದೆಗಳು 1,754.

3. ಖಾಲಿ ಇರುವಂತಹ ಪೋಸ್ಟ್ ಮ್ಯಾನ್ ಹುದ್ದೆಗಳು 3887.

4. ಖಾಲಿ ಇರುವಂತಹ ಮೆಲ್ ಗಾರ್ಡ್ ಹುದ್ದೆಗಳು 90.

 ಅರ್ಜಿ ಶುಲ್ಕ, ವಯೋಮಿತಿ ಹಾಗೂ ಆಯ್ಕೆ ವಿಧಾನ

ವಯೋಮಿತಿಯ ಬಗ್ಗೆ ಮಾತನಾಡುವುದಾದರೆ 18 ರಿಂದ 40 ವರ್ಷದ ಒಳಗಿನ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದೆ.

ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್‌ ವಿಭಾಗದ ಅಭ್ಯರ್ಥಿಗಳು ಶುಲ್ಕದ ರೂಪದಲ್ಲಿ ನೂರು ರೂಪಾಯಿಗಳ ಶುಲ್ಕವನ್ನು ಪಾವತಿ ಮಾಡಬೇಕಾಗಿರುತ್ತದೆ.  ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಮಹಿಳೆಯರು ಯಾವುದೇ ರೀತಿಯ ಶುಲ್ಕವನ್ನು ನೀಡಬೇಕಾದ ಅಗತ್ಯ ಇರುವುದಿಲ್ಲ.

ಓಬಿಸಿ ವಿಭಾಗದವರಿಗೆ ಮೂರು ವರ್ಷಗಳ ವಯೋಮಾನ್ಯತೆ ಸಡಿಲಿಕೆ. ಎಸ್ಸಿ ಎಸ್ಟಿ ವರ್ಗದ ಜನರಿಗೆ 5 ವರ್ಷಗಳ ಸಡಿಲಿಕೆ. ಕೊನೆದಾಗಿ ಪಿಡಬ್ಲ್ಯೂ ಅಭ್ಯರ್ಥಿಗಳಿಗೆ 10 ವರ್ಷದ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ನೂರು ಅಂಕಗಳ ಮೂರು ಗಂಟೆಯ ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸ್ಥಳೀಯ ಭಾಷೆಯಲ್ಲಿ ಹಿಡಿತವನ್ನು ಹೊಂದಿರುವುದು ಅತ್ಯಂತ ಕಡ್ಡಾಯವಾಗಿರುತ್ತದೆ. ಕಂಪ್ಯೂಟರ್ ಜ್ಞಾನ ಅಥವಾ ಕಲಿಕೆಯ ಹಿಡಿತವನ್ನು ಹೊಂದಿರಬೇಕು ಎಂಬುದಾಗಿ ಕೂಡ ಕಡ್ಡಾಯವಾಗಿ ಹೇಳಲಾಗಿದೆ. ಅಧಿಕೃತವಾಗಿ ಇದರ ಬಗ್ಗೆ ಪ್ರಕಟಣೆ ಮಾಡಿಲ್ಲ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಇದರ ಪ್ರಕಟಣೆ ಹೊರಬರುವುದು ನಿಶ್ಚಿತವಾಗಿದೆ.

ಒಂದು ವೇಳೆ ನೀವು ಕೂಡ ಸರ್ಕಾರಿ ಅಂಚೆ ಕಚೇರಿಯ ಕೆಲಸವನ್ನು ಮಾಡುವಂತಹ ಆಸಕ್ತಿಯನ್ನು ಹೊಂದಿದ್ದರೆ ಮುಂದಿನ ದಿನಗಳಲ್ಲಿ ಈ ಪ್ರಕಟಣೆ ಹೊರ ಬರುತ್ತಿದ್ದಂತೆ ನೀವು ಕೂಡ ಕೆಲಸಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಈ ಕೆಲಸವನ್ನು ನಿಮ್ಮದಾಗಿಸಿಕೊಳ್ಳಬಹುದಾದಂತಹ ಸಂಪೂರ್ಣಾವಕಾಶವಿದೆ. ಹೀಗಾಗಿ ನೀವು ಹಾಗೂ ಈ ರೀತಿಯ ಕೆಲಸದ ಅವಶ್ಯಕತೆ ಹೊಂದಿರುವಂತಹ ನಿಮ್ಮ ಸ್ನೇಹಿತರಿಗೆ ಇದನ್ನು ಶೇರ್ ಮಾಡಬಹುದಾಗಿದೆ.

Comments are closed.