Meena: ದೇವ್ರೇ ಮೀನಾರವರು ಎರಡು ಗಂಟೆಗೆ 13 ಲಕ್ಷ ಕೇಳಿದ್ರಂತೆ- ಕೊಟ್ಟು ಕೊನೆಗೆ ಏನಾಯ್ತು ಗೊತ್ತೇ?

Meena: ಸ್ನೇಹಿತರೆ ತಮಿಳು ಚಿತ್ರರಂಗದ ಖ್ಯಾತ ನಟಿಯಾಗಿರುವಂತಹ ಮೀನಾ (Meena) ಅವರು ಕಳೆದ ಸಾಕಷ್ಟು ವರ್ಷಗಳಿಂದಲೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ನಟಿಸಿಕೊಂಡು ಬಂದಿದ್ದು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚಿಗಷ್ಟೇ ಅವರ ಪತಿ ಮರಣ ಹೊಂದಿದ್ದ ಸಂದರ್ಭದಲ್ಲಿ ಅವರು ಎರಡನೇ ಮದುವೆ ಆಗ್ತಾರೆ ಅನ್ನೋದಾಗಿ ಸುದ್ದಿ ಆಗಿತ್ತು. ಅದಾದ್ಮೇಲೆ ಈಗ ಅವರ ಬಗ್ಗೆ ಮತ್ತೊಂದು ಸುದ್ದಿ ಕೇಳಿ ಬರ್ತಾ ಇತ್ತು ಅದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ನಿಮ್ಮ ಅದೃಷ್ಟವನ್ನೇ ಬದಲಾಯಿಸಲಿರುವ ಭಯಂಕರ ಭಾನುವಾರ; ಈ 8 ರಾಶಿಯವರಿಗೆ 22ವರ್ಷ ರಾಜಯೋಗ!

ಹೌದು, ಈ ಸುದ್ದಿ ಹೊರಗೆ ಬರುವುದಕ್ಕೆ ಕಾರಣ ಆಗ್ತಿರೋದು ಬೈಲ್ವಾನ್ ರಂಗನಾಥ್ ಎನ್ನುವಂತಹ ಮಾಧ್ಯಮ ಪ್ರತಿನಿಧಿ. ಸಾಕಷ್ಟು ಕಲಾವಿದರ ಬಗ್ಗೆ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವಂತಹ ಇವರು ಸಾಕಷ್ಟು ಕಲಾವಿದರ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದಾರೆ. ಇವರೇ ಹೇಳಿರುವ ಪ್ರಕಾರ ಮೀನಾ (Meena)  ಅವರು ಗಂಡನನ್ನು ಕಳೆದುಕೊಂಡ ನಂತರ ಧನುಷ್ ಅವರನ್ನು 2ನೇ ಮದುವೆಯಾಗುವುದಕ್ಕೆ ಸಿದ್ಧರಾಗಿದ್ರಂತೆ. ಅದಕ್ಕೆ ಪೂರಕ ಆಗಿರುವಂತೆ ಧನುಷ್ ರವರು ಕೂಡ ತಮ್ಮ ಪತ್ನಿ ಆಗಿರುವಂತಹ ಐಶ್ವರ್ಯ ರಜನಿಕಾಂತ್ ಅವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದರು. ಇದೇ ಕಾರಣಕ್ಕಾಗಿ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಸೋಶಿಯಲ್ ಮೀಡಿಯಾದಲ್ಲಿ ಹಾಗೆ ಸುದ್ದಿಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದ ಈ ಸುದ್ದಿಗಳಿಗೆ ತೆರೆ ಎಳೆಯುವಂತಹ ಪ್ರಯತ್ನವನ್ನು ಮಾಡಿದಂತಹ ನಟಿ ಮೀನಾ (Meena) ರವರು ಇಂದಿಗೂ ನನ್ನ ಗಂಡನನ್ನು ಕಳೆದುಕೊಂಡಿದ್ದೇನೆ ಅನ್ನೋದನ್ನ ನಂಬಲು ಸಾಧ್ಯವಾಗ್ತಿಲ್ಲ. ಸದ್ಯದ ಮಟ್ಟಿಗೆ ಉತ್ತಮ ಸಿನಿಮಾಗಳಲ್ಲಿ ನಟಿಸಿ, ಜನರಿಗೆ ಉತ್ತಮವಾದ ಪಾತ್ರಗಳನ್ನ ತೋರ್ಪಡಿಸುವ ಪ್ರಯತ್ನ ಮಾಡುತ್ತೇನೆ ಅನ್ನುವುದಾಗಿ ಹೇಳಿಕೊಂಡಿದ್ದರು. ಈಗ ಬೈಲ್ವಾನ್ ರಂಗನಾಥ್ ಮೀನಾ ಅವರ ಮೇಲೆ ಮತ್ತೊಂದು ಆರೋಪವನ್ನು ಮಾಡಿದ್ದು ಸಂದರ್ಶನಕ್ಕಾಗಿ ಮೀನಾ (Meena) ಯೂಟ್ಯೂಬ್ ಚಾನೆಲ್ ನಿಂದ ದೊಡ್ಡಮಟ್ಟದ ಹಣವನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ಹೇಳಿದ್ದಾರೆ.

ಈ ಮಾಹಿತಿಯಲ್ಲಿ ಅವರು ತಿಳಿಸಿರುವ ಪ್ರಕಾರ ಯೂಟ್ಯೂಬ್ ಚಾನೆಲ್ ಒಂದಕ್ಕೆ ಮೀನಾ ಅವರನ್ನು ಸಂದರ್ಶನಕ್ಕೆ ಕರೆಯಲಾಗಿತ್ತಂತೆ. ಆ ಸಂದರ್ಭದಲ್ಲಿ ಮೀನಾ ಅವರು ಎರಡು ಗಂಟೆ ಸಂದರ್ಶನಕ್ಕಾಗಿ ಭರ್ಜರಿ 13 ಲಕ್ಷ ರೂಪಾಯಿಗಳ ಸಂಭಾವನೆಯನ್ನು ಅವರಿಂದ ಪಡೆದುಕೊಂಡಿದ್ದಾರೆ ಅನ್ನೋದಾಗಿ ಕೇಳಿ ಬಂದಿದೆ. ರಂಗನಾಥ್ ರವರ ಈ ಆರೋಪಕ್ಕೆ ಮೀನಾ (Meena) ಅವರು ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಆದರೆ ಮುಂದಿನ ದಿನಗಳಲ್ಲಿ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ. ಕೇವಲ ಒಂದು ಯೂಟ್ಯೂಬ್ ಚಾನೆಲ್ ಸಂದರ್ಶನಕ್ಕಾಗಿ 13 ಲಕ್ಷ ರೂಪಾಯಿಗಳ ಸಂಭಾವನೆಯನ್ನು ಮೀನಾ ಪಡೆದುಕೊಂಡಿದ್ದರೆ ಅದರ ಬಗ್ಗೆ ನಿಮ್ಮ ಅಭಿಪ್ರಾಯ ಏನಾಗಿರುತ್ತಿತ್ತು ಅನ್ನೋದನ್ನ ಕಾಮೆಂಟ್ ಮೂಲಕ ಹೇಳಬಹುದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ವೈರಲ್ ಆಗುತ್ತಿರುವ ಈ ವಿಚಾರದ ಬಗ್ಗೆ ನೆಟ್ಟಿಗರು ಸೆಲೆಬ್ರಿಟಿಗಳಿಗೆ ಇಷ್ಟೆಲ್ಲ ಹಣವನ್ನ ಕೇವಲ ಯೂಟ್ಯೂಬ್ ಇಂಟರ್ವ್ಯೂಗಾಗಿ ನೀಡಬೇಕಾ ಅನ್ನೋದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

Comments are closed.