Jupiter Transit 2024: ಗುರು ಗೃಹ ರಾಶಿ ಬದಲಾವಣೆ ಈ ಮೂರು ರಾಶಿಯವರು ಅದೃಷ್ಟವನ್ನೇ ಬದಲಾಯಿಸುತ್ತದೆ; ನಿಮಗಂತೂ  ಬಂಪರ್ ಲಾಟರಿ.

Jupiter Transit 2024: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರದಲ್ಲಿ ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಾವಣೆ ಮಾಡುವಂತಹ ಬೃಹಸ್ಪತಿ ಎಂದು ಕರೆಸಿಕೊಳ್ಳುವ ಗುರುರಾಶಿಯ ಬಗ್ಗೆ ಇವತ್ತಿನ ಈ ಲೇಖನದಲ್ಲಿ ಮಾತನಾಡಲು ಹೊರಟಿದ್ದೇವೆ. ಸದ್ಯದ ಮಟ್ಟಿಗೆ ಗುರು ಸತಾಯ ನಕ್ಷತ್ರದಲ್ಲಿ ಚಲನೆ ಮಾಡುತ್ತಿದ್ದು, ಮಾರ್ಚ್ ತಿಂಗಳಿನಿಂದ ಇದು ಪೂರ್ವಭಾದ್ರ ನಕ್ಷತ್ರಕ್ಕೆ ತನ್ನ ಸ್ಥಾನ ಪಲ್ಲಟವನ್ನು ಮಾಡಲಿದೆ. ಈ ಪರಿಣಾಮ ಎನ್ನುವುದು 12 ರಾಶಿಗಳ ಮೇಲೆ ಬಿದ್ದರೂ ಕೂಡ ವಿಶೇಷವಾಗಿ ಈ ಮೂರು ರಾಶಿಯವರ ಮೇಲೆ ಅದೃಷ್ಟದ ಪರಿಣಾಮವನ್ನು ಬೀರಲಿದೆ. ಹಾಗಿದ್ರೆ ಬನ್ನಿ ಈ ವಿಶೇಷವಾದ ಸ್ಥಾನಪಲ್ಲಟದ ಮೂಲಕ ಗುರುವಿನ ಆಶೀರ್ವಾದದಿಂದಾಗಿ ಅದೃಷ್ಟವನ್ನು ಸಂಪಾದನೆ ಮಾಡಲಿರುವ ಆ ಮೂರು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.

 ಸಿಂಹ ರಾಶಿ(Leo)

ಕಳೆದ ಸಾಕಷ್ಟು ಸಮಯಗಳಿಂದಲೂ ಅರ್ಧಕ್ಕೆ ಉಳಿಸಿಕೊಂಡಿರುವಂತಹ ಕೆಲಸವನ್ನು ಈ ಸಂದರ್ಭದಲ್ಲಿ ಪೂರ್ತಿಗೊಳಿಸಲಿದ್ದಾರೆ ಹಾಗೂ ಕಷ್ಟಪಟ್ಟು ದುಡಿದರೆ ಉತ್ತಮ ಪ್ರತಿಫಲವನ್ನು ಪಡೆದುಕೊಳ್ಳಲಿದ್ದಾರೆ. ವಿದೇಶಕ್ಕೆ ಹೋಗಬೇಕು ಎನ್ನುವಂತಹ ನಿಮ್ಮ ಕನಸು ಈ ವರ್ಷ ಪೂರ್ತಿಯಾಗಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಜನೆ ಆಸಕ್ತಿಯನ್ನು ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕಲಿದೆ. ಯಾವುದೇ ಕೆಲಸ ಮಾಡುವುದಕ್ಕೆ ಹೊರಟರು ನಿಮ್ಮ ಕುಟುಂಬದ ಸಂಪೂರ್ಣ ಬೆಂಬಲ ನಿಮ್ಮ ಮೇಲೆ ಇದೆ. ನೀವು ಮಾಡುವಂತಹ ಕೆಲಸದ ಮೂಲಕ ನೀವು ಸಮಾಜದಲ್ಲಿ ನಿಮ್ಮದೇ ಆದಂತಹ ಗೌರವವನ್ನು ಸಂಪಾದನೆ ಮಾಡಲಿದ್ದೀರಿ.

 ಕರ್ಕ ರಾಶಿ (Cancer)

ಕೆಲಸ ಮಾಡುವಂತಹ ಕ್ಷೇತ್ರದಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳನ್ನು ಕರ್ಕ ರಾಶಿಯವರು ನಿವಾರಣೆ ಮಾಡಿಕೊಳ್ಳಲಿದ್ದಾರೆ. ವ್ಯಾಪಾರ ಮಾಡ್ತಾ ಇದ್ರೆ ಅಲ್ಲಿ ಕಂಡುಬರುವಂತಹ ಎಲ್ಲ ಸಮಸ್ಯೆಗಳನ್ನು ನೀವು ದೂರ ಮಾಡಿಕೊಳ್ಳಲಿದ್ದೀರಿ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವಂತಹ ಉದ್ಯೋಗಿಗಳಿಗೆ ವರಿಷ್ಠ ಅಧಿಕಾರಿಗಳಿಂದ ಶಹಬಾಸ್ ಗಿರಿ ದೊರಕಲಿದೆ. ಬೇರೆಯವರ ಬಾಕಿ ಉಳಿಸಿಕೊಂಡಿರುವಂತಹ ಕೆಲಸ ಹಾಗೂ ದುಡ್ಡು ಎರಡನ್ನು ಕೂಡ ಹಿಂದಿರುಗಿಸಲಿದ್ದೀರಿ. ಹಣ ಗಳಿಸುವುದಕ್ಕೆ ಬೇರೆ ಬೇರೆ ಆದಾಯದ ಮೂಲಗಳು ಕೂಡ ತೆರೆದುಕೊಳ್ಳಲಿವೆ. ಶೇರ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಕೂಡ ಲಾಭ ಕಟ್ಟಿಟ್ಟ ಬುತ್ತಿಯಾಗಿದೆ. ಒಂದು ವೇಳೆ ಯಾರಾದರೂ ಹೆಣ್ಣು ಮಕ್ಕಳು ಮದುವೆ ಆಗದೆ ಉಳಿದುಕೊಂಡಿದ್ದಾರೆ ಅವರಿಗೆ ಮದುವೆ ಆಗೋದಕ್ಕೆ ಅವರು ಮನಸ್ಸಿಗೆ ಇಷ್ಟ ಆಗುವಂತಹ ಹುಡುಗ ಸಿಗಲಿದ್ದಾನೆ.

 ಮಿಥುನ ರಾಶಿ (Gemini)

ಈ ಸಮಯದಲ್ಲಿ ವಿಶೇಷವಾಗಿ ಮಿಥುನ ರಾಶಿಯವರಿಗೆ ಅದೃಷ್ಟದ ಸಾತ್ ಸಿಗಲಿದೆ ಹಾಗೂ ದುಡಿಯೋದಕ್ಕೆ ಸಾಕಷ್ಟು ಹಣದ ಆದಾಯದ ಮೂಲಗಳು ಕೂಡ ಸಿಗಲಿವೆ. ರಾಜಕೀಯ ಕ್ಷೇತ್ರದವರಿಗೆ ಒಳ್ಳೆಯ ಸ್ಥಾನಮಾನಗಳು ಸಿಗಲಿವೆ. ಕಚೇರಿಯಲ್ಲಿ ಕೆಲಸ ಮಾಡುವಂತಹ ಉದ್ಯೋಗಿಗಳಿಗೆ ಸಾಕಷ್ಟು ಲಾಭ ಸಿಗಲಿದೆ. ಕುಟುಂಬದ ಜೊತೆಗೆ ಸಂತೋಷದ ಕ್ಷಣವನ್ನು ಕಳೆಯಬೇಕು ಎನ್ನುವುದಾಗಿ ಕಾಯುತ್ತಿರುವವರಿಗೆ ಅದು ಕೂಡ ಪ್ರಾಪ್ತಿಯಾಗಲಿದೆ. ಹೊಸ ವ್ಯಾಪಾರವನ್ನು ಪ್ರಾರಂಭ ಮಾಡುವಂತಹ ಇಚ್ಛೆ ಇದ್ದರೆ ಹೇಳಿ ಮಾಡಿಸಿದ ಸಮಯವಾಗಿದೆ. ಉದ್ಯೋಗದಲ್ಲಿ ಪ್ರಮೋಷನ್ ಕೂಡ ಸಿಗಲಿದೆ.

Comments are closed.