Relationship: ಇಲ್ಲಿ  ಮದುವೆಗೂ ಮುಂಚೆನೇ ತಾಯಿ ಆಗೋದು ಕಾಮನ್; ಮಕ್ಕಳು ಮಾಡಿಕೊಂಡು ನಂತರ ಮದುವೆ ಆಗ್ಭುದಂತೆ; ಅದೂ ಹಳ್ಳಿಯಲ್ಲಿ ಗೊತ್ತಾ?

Relationship: ಇತ್ತೀಚಿನ ದಿನಗಳಲ್ಲಿ ಭಾರತದ ಜನರು ತಮ್ಮ ದೈನಂದಿನ ಜೀವನ ಕ್ರಮದಲ್ಲಿ ವೆಸ್ಟರ್ನ್ ಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಹೊಸತಾಗಿರುವಂತಹ ವಿಚಾರವೇನಲ್ಲ ಬಿಡಿ. ಮೊದಲೆಲ್ಲ ಮನೆಯವರ ಒಪ್ಪಿಗೆಯ ಮೇಲೆ ಮದುವೆಯಾಗುತ್ತಿದ್ದ ಜೋಡಿಗಳು ನಂತರ ಕ್ರಮೇಣವಾಗಿ ವೆಸ್ಟರ್ನ್ ಸಿನಿಮಾಗಳನ್ನು ನೋಡುತ್ತಾ ಪ್ರೀತಿಸಿ ಮನೆಯವರ ವಿರೋಧದ ನಡುವೆ ಮನೆ ಬಿಟ್ಟು ಓಡಿ ಹೋಗಿ ಮದುವೆ ಆಗೋದನ್ನ ಪ್ರಾರಂಭಿಸುತ್ತಾರೆ.

ಅದಾದ ನಂತರ ಈಗ ಒಂದು ಹೆಜ್ಜೆ ಮುಂದೆ ಹೋಗಿ ಮದುವೆಗೂ ಮುಂಚೆ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಇರುತ್ತಾರೆ ಇಲ್ಲವೇ ಮದುವೆ ಆಗದೇನೆ ಜೀವನಪೂರ್ತಿ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಇರ್ತಾರೆ. ಇದೇ ರೀತಿಯ ಒಂದು ವಿಚಾರದ ಬಗ್ಗೆ ಇವತ್ತಿನ ಈ ಆರ್ಟಿಕಲ್ ಮೂಲಕ ನಿಮಗೆ ಹೇಳೋದಕ್ಕೆ ಹೊರಟಿರೋದು.

ಇನ್ನು ಇಲ್ಲಿ ಮದುವೆ ಆಗೋದಕ್ಕೆ ಮುಂಚೇನೆ ತಾಯಿ ಆಗ್ತಾರೆ ಅನ್ನೋ ಸುದ್ದಿ ಕೇಳಿ ಬರ್ತಾ ಇದ್ದು ಇದು ಬೇರೆ ಯಾವುದು ಅಮೆರಿಕ ದೇಶದಲ್ಲಿ ಅಲ್ಲ ಬದಲಾಗಿ ನಮ್ಮ ಭಾರತ ದೇಶದಲ್ಲಿ ನಡೆಯುತ್ತಿರೋ ವಿಚಾರದ ಬಗ್ಗೆ ಹೇಳುವುದಕ್ಕೆ ಹೊರಟಿರೋದು. ಹೌದು ಈ ಘಟನೆಗಳು ನಡೆದಿರೋದು ಹಾಗೂ ನಡೀತಾ ಇರೋದು ರಾಜಸ್ಥಾನದಲ್ಲಿ ಹಾಗೂ ಗುಜರಾತ್ ನಲ್ಲಿ. ಗರಾಸಿಯ ಬುಡಕಟ್ಟು ಜನಾಂಗದ ಮಹಿಳೆಯರು ಮದುವೆಗೂ ಮುಂಚೆನೇ ತಾಯಿ ಆಗ್ತಾರೆ ಅನ್ನೋದಾಗಿ ಸುದ್ದಿ ಇದೆ.

 ಈ ಸಮುದಾಯದಲ್ಲಿ ಮದುವೆಯಾಗಿ ಎರಡು ದಿನದ ಹಬ್ಬವನ್ನು ಆಚರಿಸುತ್ತಾರೆ. ಆದರೆ ಮದುವೆ ಆಗೋದಕ್ಕಿಂತ ಮುಂಚೇನೆ ಆ ಸಂಗಾತಿಯ ಜೊತೆಗೆ ಇರುತ್ತಾರೆ. ಇಲ್ಲಿ ಗಂಡು ಹಾಗೂ ಹೆಣ್ಣಿಗೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವಂತಹ ಮುಕ್ತ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ ಹಾಗೂ ಇದಕ್ಕಾಗಿ ಒಂದು ಜಾತ್ರೆ ರೀತಿಯ ಮೇಳವನ್ನು ಆಚರಿಸುತ್ತಾರೆ. ಇಲ್ಲಿ ಅವರು ತಮಗೆ ಬೇಕಾಗಿರುವಂತಹ ಸಂಗಾತಿಯನ್ನು ಪರಸ್ಪರ ಆಯ್ಕೆ ಮಾಡುತ್ತಾರೆ. ಇಷ್ಟವಾದರೆ ಅವರ ಜೊತೆಗೆನೇ ಜೀವನ ನಡೆಸುವುದಕ್ಕೆ ಪ್ರಾರಂಭ ಮಾಡುತ್ತಾರೆ.

ಎಲ್ಲದಕ್ಕಿಂತ ವಿಶೇಷ ಅಂದ್ರೆ ಮದುವೆ ಆಗದೆ ಇದ್ರೂ ಕೂಡ ಪರಸ್ಪರ ಒಬ್ಬರನ್ನೊಬ್ಬರು ದೈಹಿಕವಾಗಿ ಸೇರಬಹುದಾಗಿದೆ. ಅದಾದ ನಂತರ ಇಬ್ಬರೂ ಕೂಡ ಮದುವೆ ಆಗೋದಕ್ಕೆ ಒಪ್ಪಿಗೆ ನೀಡಿದ್ರೆ ಮನೆಯವರು ಇವರ ಮದುವೆಯನ್ನು ಅದ್ದೂರಿಯಾಗಿ ಮಾಡ್ತಾರೆ ಅನ್ನೋದಾಗಿ ಸುದ್ದಿ ಕೇಳಿ ಬರುತ್ತೆ. ಈ ಬುಡಕಟ್ಟು ಸಮುದಾಯದ ಜನರು ಈ ಪದ್ಧತಿಯನ್ನು ಕಳೆದ ಸಾಕಷ್ಟು ವರ್ಷಗಳಿಂದಲೂ ಮುಂದುವರೆಸಿಕೊಂಡು ಬಂದಿದ್ದು ಈಗಲೂ ಕೂಡ ಇದೇ ಪದ್ಧತಿಯನ್ನು ಅನುಸರಿಸಿಕೊಂಡು ಅಲ್ಲಿನ ಬುಡಕಟ್ಟು ಜನಾಂಗದ ಯುವಕ ಹಾಗೂ ಯುವತಿಯರು ಜೀವನ ಮಾಡಿಕೊಂಡು ಬರುತ್ತಿದ್ದಾರೆ.

ಮದುವೆ ಆಗೋದಕ್ಕಿಂತ ಮುಂಚೆನೇ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಬದುಕುತ್ತಿರುವಂತಹ ಈ ಜೀವನಶೈಲಿಯನ್ನು ಕೆಲವರು ನೆಟ್ಟಿಗರು ಟೀಕಿಸುತ್ತಿರುವುದು ಕೂಡ ಕಂಡು ಬಂದಿದೆ. ಕೇವಲ ಪಟ್ಟಣದಲ್ಲಿ ಮಾತ್ರ ಇದ್ದಂತಹ ಈ ಪದ್ಧತಿಯನ್ನು ಈಗ ಬುಡಕಟ್ಟು ಜನಾಂಗದವರು ಕೂಡ ಮುಂದುವರಿಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಕೂಡ ಆಶ್ಚರ್ಯದ ವಿಚಾರವಾಗಿದೆ.

Comments are closed.