Astrology: 18 ವರ್ಷಗಳಿಂದ ಕಷ್ಟದಲ್ಲಿದ್ದ ಈ ರಾಶಿಗಳಿಗೆ ಕೊನೆಗೂ ಅದೃಷ್ಟ ಶುರು- ಇನ್ನು ಮುಂದಿದೆ ಹಣದ ಮಳೆ. ಮುಟ್ಟಿದೆಲ್ಲಾ ಚಿನ್ನ!

Astrology: ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿದುಬಂದಿರುವ ವಿಚಾರದಲ್ಲಿ ಬರೋಬ್ಬರಿ 18 ವರ್ಷಗಳ ನಂತರ ಬುಧ ಹಾಗೂ ರಾಹು ಒಂದೇ ರಾಶಿಯಲ್ಲಿ ಸಂಯೋಗವನ್ನು ಹೊಂದಿದ್ದಾರೆ. ಇದರಿಂದಾಗಿ ಐದು ರಾಶಿಯವರಿಗೆ ಒಳ್ಳೆಯ ಅದೃಷ್ಟ ಸಂಪಾದನೆ ಆಗಲಿದ್ದು ಬನ್ನಿ ಆ ಐದು ಅದೃಷ್ಟವಂತ ರಾಶಿ ಅವರು ಯಾರೆಲ್ಲ ಎಂಬುದನ್ನು ತಿಳಿಯೋಣ.

 ವೃಷಭ ರಾಶಿ (Taurus)

ಈ ವಿಶೇಷ ಯೋಗದ ಹಾಗೂ ಸಂಯೋಗದ ಕಾರಣದಿಂದಾಗಿ ವೃಷಭ ರಾಶಿಯವರಿಗೆ ತಾವು ಮಾಡುತ್ತಿರುವಂತಹ ಕೆಲಸದ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯ ಫಲಿತಾಂಶವನ್ನು ಪಡೆದುಕೊಳ್ಳಲಿದ್ದಾರೆ. ಆದಾಯ ಸಾಕಷ್ಟು ಬೇರೆಬೇರೆ ಮೂಲಗಳಿಂದ ಹರಿದು ಬರಲಿದ್ದು ನಿಮ್ಮ ಕೈನಲ್ಲಿ ಹಣ ಹೆಚ್ಚಾಗಿ ಕಂಡುಬರಲಿದೆ. ಉದ್ಯಮ ಕ್ಷೇತ್ರದಲ್ಲಿ ಇರುವಂತಹ ಉದ್ಯಮಿಗಳಿಗೆ ಲಾಭ ಕೂಡ ಈ ಸಂದರ್ಭದಲ್ಲಿ ಹೆಚ್ಚಾಗಲಿದೆ. ಕುಟುಂಬದ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುವ ಅವಕಾಶ ಸಿಗಲಿದೆ.

 ಕರ್ಕ ರಾಶಿ (Cancer)

ಸಾಕಷ್ಟು ಸಮಯಗಳಿಂದ ಸಂಪೂರ್ಣಗೊಳ್ಳಬೇಕಾಗಿರುವಂತಹ ಕೆಲಸ ಈ ಸಂದರ್ಭದಲ್ಲಿ ಪೂರ್ತಿಯಾಗಲಿದೆ. ಆರ್ಥಿಕ ಲಾಭಗಳು ಸಿಗುವಂತಹ ಕೆಲಸಗಳು ಕೂಡ ನಿಮಗೆ ಈ ಸಂದರ್ಭದಲ್ಲಿ ಸಿಗಲಿದೆ. ದೂರ ಪ್ರಯಾಣವನ್ನು ಮಾಡುವಂತಹ ಸಾಧ್ಯತೆ ಇರುತ್ತದೆ ಆದರೆ ಇದರಿಂದಲೂ ಕೂಡ ನಿಮಗೆ ಲಾಭ ಕಟ್ಟಿಟ್ಟ ಬುತ್ತಿ ಆಗಿದೆ. ಸಂಗಾತಿಯ ಜೊತೆಗೆ ನಿಮ್ಮ ಸಂಬಂಧ ಮಧುರವಾಗಿರುತ್ತದೆ.

 ಸಿಂಹ ರಾಶಿ (Leo)

ಈ ಸಂಯೋಗ ಎನ್ನುವುದು ಸಿಂಹ ರಾಶಿಯವರಿಗೆ ಸಾಕಷ್ಟು ಲಾಭವನ್ನು ತರುತ್ತದೆ ಹಾಗೂ ಆಸ್ತಿಪಾಸ್ತಿ ಮತ್ತು ದೊಡ್ಡ ಮಟ್ಟದಲ್ಲಿ ಹಣ ಸಂಪಾದನೆಯನ್ನು ಮಾಡುವಂತಹ ಅವಕಾಶ ನಿಮ್ಮಲ್ಲಿ ಕಂಡುಬರುತ್ತದೆ. ಕಳೆದ ಸಾಕಷ್ಟು ವರ್ಷಗಳಿಂದ ಒಂಟಿಯಾಗಿ ಇರುವಂತಹ ಸಿಂಹ ರಾಶಿಯವರಿಗೆ ಕಲ್ಯಾಣ ಯೋಗ ಹುಡುಕಿಕೊಂಡು ಬರಲಿದೆ. ನೀವು ಮಾಡುತ್ತಿರುವಂತಹ ಕೆಲಸದಲ್ಲಿ ಪ್ರಮೋಷನ್ ಸಿಗಲಿದ್ದು ವಯಕ್ತಿಕ ಜೀವನ ಸಂಪೂರ್ಣ ಸಂತೋಷವಾಗಿ ತುಂಬಿ ತುಳುಕಾಡಲಿದೆ.

 ವೃಶ್ಚಿಕ ರಾಶಿ (Scorpion)

ವಯಕ್ತಿಕ ಹಾಗೂ ಕೆಲಸದ ಜೀವನದಲ್ಲಿ ಇರುವಂತಹ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿವೆ. ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುವುದಕ್ಕೆ ಈ ವಿಶೇಷವಾದ ಯೋಗ ಪೂರಕವಾಗಿರಲಿದೆ. ವ್ಯಾಪಾರ ಮಾಡುವಂತಹ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ ಹಾಗೂ ಕೆಲಸದಲ್ಲಿರುವಂತಹ ಉದ್ಯೋಗಿಗಳಿಗೆ ಪ್ರಮೋಷನ್ ಮತ್ತು ಸಂಬಳದಲ್ಲಿ ಹೆಚ್ಚಳ ಕಂಡು ಬರಲಿದೆ. ನಿಮ್ಮ ಲವ್ ಲೈಫ್ ನಲ್ಲಿ ಕೂಡ ಸಕಾರಾತ್ಮಕ ಬೆಳವಣಿಗೆಗಳು ಕಂಡು ಬರಲಿವೆ. ನೀವು ಮಾಡುವಂತಹ ಸಾಮಾಜಿಕ ಕೆಲಸಗಳಿಂದಲೇ ಜನ ನಿಮ್ಮನ್ನು ಮೆಚ್ಚುತ್ತಾರೆ ಹಾಗೂ ಹೊಗಳುತ್ತಾರೆ.

 ಮೀನ ರಾಶಿ (Pisces)

ಈ ವಿಶೇಷವಾದ ಯೋಗ ಮೀನ ರಾಶಿಯವರ ಪ್ರತಿಯೊಂದು ಇಷ್ಟಾರ್ಥಗಳನ್ನು ಈಡೇರಿಸುವಂತಹ ಕೆಲಸವನ್ನು ಮಾಡುತ್ತದೆ. ನೀವು ನಿಮ್ಮ ಜೀವನದಲ್ಲಿ ತೆಗೆದುಕೊಳ್ಳುವಂತಹ ಯಾವುದೇ ದೊಡ್ಡ ನಿರ್ಧಾರಗಳು ಈ ಸಂದರ್ಭದಲ್ಲಿ ನಿಮಗೆ ಲಾಭದಾಯಕವಾಗಿ ಪರಿಣಮಿಸಲಿವೆ. ಉದ್ಯಮದಲ್ಲಿರುವಂತಹ ವ್ಯಕ್ತಿಗಳು ಈ ಸಂದರ್ಭದಲ್ಲಿ ಕೈತುಂಬ ಹಣ ಸಂಪಾದನೆ ಮಾಡಬಹುದಾಗಿದೆ. ಕೆಲಸ ಮಾಡುತ್ತಿರುವಂತಹ ಉದ್ಯೋಗಿಗಳು ಕೂಡ ಆದಾಯ ಸಂಪಾದನೆ ಹೆಚ್ಚಾಗಿ ಮಾಡುವುದಕ್ಕೆ ಅವಕಾಶಗಳು ಹುಡುಕಿಕೊಂಡು ಬರಲಿವೆ.

Comments are closed.