Property Registration Rules: ಆಸ್ತಿ ರಿಜಿಸ್ಟ್ರೇಷನ್ ನಲ್ಲಿ ಭಾರಿ ಬದಲಾವಣೆಯನ್ನು ಜಾರಿಗೆ ತಂದ ಸರ್ಕಾರ; ಪೇಪರ್ ಆಧಾರಿತ ಆಸ್ತಿ ನೋಂದಣಿಗೆ ಯಾವ ವಾಲ್ಯೂನೂ ಇಲ್ಲ!

Property Registration Rules: ಸ್ನೇಹಿತರೆ ಇತ್ತೀಚಿಗೆ ಅಷ್ಟೇ ಕಂದಾಯ ಸಚಿವರಾಗಿರುವಂತಹ ಕೃಷ್ಣಭೈರೇಗೌಡ ಅವರು ಅಂಗೀಕೃತ ರೂಪದಲ್ಲಿರುವಂತಹ ನೋಂದಣಿ ತಿದ್ದುಪಡಿ (Property Registration Rules) ವಿಧೇಯಕ ಗಳನ್ನು ಅಂಗೀಕರಿಸಿದ್ದಾರೆ. 2024ನೇ ಸಾಲಿನ ನೋಂದಣಿ ತಿದ್ದುಪಡಿ ವಿಧೇಯಕಗಳನ್ನು ಕಂದಾಯ ಸಚಿವರಾಗಿರುವಂತಹ ಕೃಷ್ಣಭೈರೇಗೌಡ ಅವರು ವಿಧಾನಸಭೆಯಲ್ಲಿ ಇತ್ತೀಚಿಗಷ್ಟೇ ಮಂಡಿಸಿದ್ದಾರೆ. ಬನ್ನಿ ಇದರ ಬಗ್ಗೆ ಪರಿಪೂರ್ಣವಾಗಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಇದರಲ್ಲಿ ತಿಳಿಸಿರುವ ಅಂತಹ ಮಾಹಿತಿಗಳ ಪ್ರಕಾರ ಇನ್ಮುಂದೆ ಯಾವುದೇ ರೀತಿಯ ಆಸ್ತಿ ರಿಜಿಸ್ಟ್ರೇಷನ್ ಅನ್ನು ಡಿಜಿಟಲ್ ರೂಪದಲ್ಲಿ ಮಾಡಿಸಿಕೊಳ್ಳಬೇಕು ಎಂಬುದಾಗಿ ಕಡ್ಡಾಯವಾಗಿ ಹೇಳಲಾಗಿದೆ. ಪೇಪರ್ ನಲ್ಲಿ ಆಸ್ತಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ಹೆಚ್ಚಿನ ನಷ್ಟ ಆಗುತ್ತಿದೆ ಎಂಬುದಾಗಿ ಇದರ ಮೂಲಕ ಪ್ರತಿಪಾದಿಸಲಾಗಿದೆ. ಇದೇ ಕಾರಣಕ್ಕಾಗಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ ಎನ್ನುವಂತಹ ಸ್ಪಷ್ಟ ಮಾಹಿತಿಯನ್ನು ನೀಡಲಾಗಿದೆ.

ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದು, ಎಲ್ಲೆಲ್ಲೂ ಸಾಲ ಸಿಗ್ತಿಲ್ವಾ? ಸಿಕ್ಕ ಸಾಲಕ್ಕೆ ಬಡ್ಡಿ ಹೆಚ್ಚಾ? ಈ ಒಂದು ಕೆಲಸ ಮಾಡಿ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳಿ!

ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಆಸ್ತಿಯ ನೋಂದಣಿ ಪ್ರಕ್ರಿಯೆಯನ್ನು ಪೇಪರ್ ಅಂದರೆ ಕಾಗದ ಮೂಲಕ ಮಾಡುವಂತಹ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗುತ್ತಿರುವ ಕಾರಣದಿಂದಾಗಿ ಸರ್ಕಾರ ಈ ನಿಯಮವನ್ನು ಕೈ ತೆಗೆದುಕೊಂಡಿದೆ. ಇ ನೋಂದಾವಣಿಯ ಮೂಲಕ ಪ್ರತಿಯೊಬ್ಬರ ತಮ್ಮ ಆಸ್ತಿಯನ್ನು ರಿಜಿಸ್ಟ್ರೇಷನ್ ಮಾಡಿಸುವಂತಹ ಕೆಲಸಗಳನ್ನು ಇನ್ಮುಂದೆ ಮಾಡಬೇಕು ಎಂಬುದಾಗಿ ಈ ಮೂಲಕ ತೀರ್ಮಾನಿಸಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ ಎನ್ನುವ ಕಾರಣಕ್ಕಾಗಿ ಈ ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಸರ್ಕಾರದ ಹೊಸ ನಿಯಮಗಳ ಪ್ರಕಾರ ಸಬ್ ರಿಜಿಸ್ಟರ್ ಆಫೀಸ್ ಗಳಲ್ಲಿ ಆಸ್ತಿ ರಿಜಿಸ್ಟ್ರೇಷನ್ ಮಾಡಿಸುವಂತಹ ಕೆಲಸವನ್ನು ಇ ನೋಂದಾವಣಿಯ ಮೂಲಕ ರಿಜಿಸ್ಟ್ರೇಷನ್ ಮಾಡಿಸುವಂತಹ ಕೆಲಸವನ್ನು ಮಾಡಲಾಗುತ್ತದೆ. ಕೇವಲ ಇಷ್ಟು ಮಾತ್ರವಲ್ಲದೆ ಇನ್ನೂ ಕೆಲವೊಂದು ಕಾರಣಗಳಿಗಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ ಎನ್ನುವುದಾಗಿ ಮಂತ್ರಿಗಳು ತಿಳಿಸಿದ್ದಾರೆ. ಉದಾಹರಣೆಗೆ ಕಾನೂನು ಬಹಿರವದಂತಹ ಆಸ್ತಿ ನೋಂದಾವಣೆ ಪ್ರಕ್ರಿಯೆಯನ್ನು ತಡೆಯುವ ಕಾರಣಕ್ಕಾಗಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ ಎಂಬುದನ್ನು ಕೂಡ ನಾವಿಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ.

ಇನ್ಮುಂದೆ ಬಿಡಿಎ ಖಾತೆ ಅಥವಾ ಇ ಖಾತೆ ಇದ್ದರೆ ಮಾತ್ರ ನೋಂದಾವಣೆ ಆಗೋದು ಅನ್ನೋದಾಗಿ ಕಟ್ಟು ನಿಟ್ಟಿನ ಕಾನೂನು ನಿಯಮಗಳನ್ನು ಜಾರಿಗೆ ತರಲಾಗಿದೆ. ಕಂದಾಯ ಸಚಿವರಾಗಿರುವಂತಹ ಕೃಷ್ಣಬೈರೇಗೌಡ ರವರು ಹೇಳಿರುವ ಮಾಹಿತಿಗಳ ಪ್ರಕಾರ ಇನ್ಮುಂದೆ ಸರ್ಕಾರದ ಬೊಕ್ಕಸಕ್ಕೆ ಕಾಗದ ರಿಜಿಸ್ಟ್ರೇಷನ್ ಪ್ರಕ್ರಿಯೆಯಿಂದ ಆಗುತ್ತಿರುವಂತಹ ನಷ್ಟವನ್ನು ತಪ್ಪಿಸಲು ಹಾಗೂ ಅಕ್ರಮ ಆಸ್ತಿಗಳ ನೋಂದಾವಣೆ ಪ್ರಕ್ರಿಯೆಯನ್ನು ತಡೆಯುವ ಕಾರಣಕ್ಕಾಗಿ ಇ ನೋಂದಾವಣಿಯ ಪ್ರಕ್ರಿಯೆ ಮೂಲಕ ಒಂದು ಸಮಾಧಾನಕರ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.

Comments are closed.