CIBIL Score: ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದು, ಎಲ್ಲೆಲ್ಲೂ ಸಾಲ ಸಿಗ್ತಿಲ್ವಾ? ಸಿಕ್ಕ ಸಾಲಕ್ಕೆ ಬಡ್ಡಿ ಹೆಚ್ಚಾ? ಈ ಒಂದು ಕೆಲಸ ಮಾಡಿ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳಿ!

CIBIL Score: ಸ್ನೇಹಿತರೆ ಒಂದು ವೇಳೆ ನಮಗೆ ಯಾವುದೇ ರೀತಿಯಲ್ಲಿ ಸಾಲದ ಅವಶ್ಯಕತೆ ಇದ್ದರೆ ನಾವು ಬ್ಯಾಂಕಿನಲ್ಲಿ ಹೋಗಿ ಪರ್ಸನಲ್ ಲೋನ್ (Personal Loan)  ಪಡೆದುಕೊಳ್ಳುತ್ತೇವೆ. ಪರ್ಸನಲ್ ಲೋನ್ ಅತ್ಯಂತ ಅಸುರಕ್ಷಿತ ಸಾಲ ಆಗಿರುತ್ತದೆ ಹೀಗಾಗಿ ಬ್ಯಾಂಕಿನವರು ಸಿಬಿಲ್ ಸ್ಕೋರ್ (CIBIL Score) ಚೆನ್ನಾಗಿದ್ರೆ ಮಾತ್ರ ಪರ್ಸನಲ್ ಲೋನ್ ಅನ್ನು ನೀಡುತ್ತಾರೆ. ಇಲ್ಲವಾದರೆ ಸಾಕಷ್ಟು ಬ್ಯಾಂಕ್ಗಳಲ್ಲಿ ಪರ್ಸನಲ್ ಲೋನ್ ಸಿಗೋದಿಲ್ಲ ಅನ್ನೋದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಾಗಿರುತ್ತದೆ.

 CIBIL score ಕಡಿಮೆ ಇರೋ ಕಾರಣಕ್ಕೆ ಬ್ಯಾಂಕಿನಿಂದ ಲೋನ್ ಸಿಕ್ತಿಲ್ಲ

ಸಿಬಿಲ್ ಸ್ಕೋರ್ (CIBIL Score) ಎನ್ನುವುದು ಒಬ್ಬ ಸಾಲ ಪಡೆದುಕೊಳ್ಳುವಂತಹ ವ್ಯಕ್ತಿಯ ಮರುಪಾವತಿ ಮಾಡುವಂತಹ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತದೆ. ಉತ್ತಮವಾದ ಸಿಬಿಲ್ ಸ್ಕೋರ್ ಇದ್ರೆ ಆತ ಪಡೆದುಕೊಂಡಿರುವಂತಹ ಸಾಲವನ್ನು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಕಟ್ಟುವಂತಹ ಸಾಮರ್ಥ್ಯವನ್ನು ಹೊಂದಿದ್ದಾನೆ ಹಾಗೂ ಈ ಹಿಂದೆ ಕೂಡ ಪಡೆದುಕೊಂಡಿರುವಂತಹ ಸಾಲವನ್ನು ಸರಿಯಾದ ರೀತಿಯಲ್ಲಿ ಕಟ್ಟಿದ್ದಾನೆ ಎನ್ನುವುದಾಗಿ ಅರ್ಥವಾಗಿರುತ್ತದೆ. ಹೀಗಾಗಿ ಬ್ಯಾಂಕಿನವರು ಕೂಡ ಪರ್ಸನಲ್ ಲೋನ್ಗಳಂತಹ ಸಾಲವನ್ನು ನೀಡುವ ಸಂದರ್ಭದಲ್ಲಿ ಸಿಬಿಲ್ ಸ್ಕೋರ್ (CIBIL Score) ಚೆನ್ನಾಗಿದ್ರೆ ಮಾತ್ರ ನೋಡಿಕೊಂಡು ಸಾಲ ನೀಡುತ್ತಾರೆ. NBFC ಹಾಗೂ ಪ್ರತಿಯೊಂದು ಬ್ಯಾಂಕಿಂಗ್ ಸಂಸ್ಥೆಗಳು ಸಿಬಿಲ್ ಸ್ಕೋರ್ ಅಂದ್ರೆ ಅವರ ಕ್ರೆಡಿಟ್ ಹಿಸ್ಟರಿಯನ್ನು ನೋಡಿದೆ ಸಾಲ ಕೊಡಬೇಕಾ ಬೇಡವಾ ಅನ್ನೋ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಸಿಬಿಲ್ ಸ್ಕೋರ್ ಚೆನ್ನಾಗಿಲ್ಲದಿದ್ರೂ ಸಿಗುತ್ತೆ  ವಯಕ್ತಿಕ ಸಾಲ; ತುರ್ತು ಸಾಲ ನೀಡುತ್ತೆ ಈ ಕಂಪನಿ!

 ಸಿಬಿಲ್ ಸ್ಕೋರ್ (CIBIL Score) ಕಡಿಮೆ ಇದ್ರೆ ಹೆಚ್ಚು ಮಾಡಿಕೊಳ್ಳುವ ವಿಧಾನ.

1. ಈಗಾಗಲೇ ನೀವು ಕಟ್ಟುತ್ತಿರುವಂತಹ ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಿಕೊಳ್ಳಬಹುದಾಗಿದ್ದು ಇದರಿಂದಾಗಿ ನಿಮ್ಮ ಮುಂದಿನ ಸಾಲ ನೀಡುವ ಸಂಸ್ಥೆಗಳು ನಿಮಗೆ ಸಾಲ ನೀಡುವುದಕ್ಕೆ ನಂಬಿಕೆ ಇರುತ್ತೆ.

2. ನೀವು ಒಂದು ವೇಳೆ ಸಾಲಕ್ಕೆ ಹಾಗೂ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಅವುಗಳನ್ನು ನಿಲ್ಲಿಸಿ ಬಿಡಬೇಕು.

3. ಒಂದು ವೇಳೆ ನೀವು ಯಾವುದೇ ರೀತಿಯಲ್ಲಿ ಕ್ರೆಡಿಟ್ ಕಾರ್ಡ್ (CIBIL Score)  ಮೂಲಕ ಸಾಲವನ್ನು ಪಡೆದುಕೊಂಡಿದ್ದರೆ ಅದನ್ನು ಸರಿಯಾದ ಸೂಕ್ತ ಸಮಯಕ್ಕೆ ಹಣವನ್ನು ಪಾವತಿ ಮಾಡುವ ಮೂಲಕ ಆದರೆ ಸಾಲವನ್ನು ತೀರಿಸಿಕೊಳ್ಳಿ ಯಾಕೆಂದರೆ, ಕ್ರೆಡಿಟ್ ಕಾರ್ಡ್ ಮೂಲಕ ಪಡೆದುಕೊಂಡಿರುವಂತಹ ಸಾಲದ ಮೇಲೆ ಬಡ್ಡಿ ಹೆಚ್ಚಾಗಿರುತ್ತದೆ. ಹೀಗಾಗಿ ಒಂದೇ ಒಂದು ಕಂತನ್ನ ನೀವು ಮಿಸ್ ಮಾಡಿಕೊಂಡರೂ ಕೂಡ ನಿಮ್ಮ ಸಾಲದ ಹೊರೆ ಹೆಚ್ಚಾಗುತ್ತದೆ ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ ಗಣನೀಯವಾಗಿ ಕಡಿಮೆಯಾಗುತ್ತದೆ.

ಇದೇ ರೀತಿ ಯಾವುದೇ ರೀತಿಯ ಆರ್ಥಿಕ ಸಂಸ್ಥೆಗೆ ನೀವು ಹಣ ನೀಡುವುದು ಬಾಕಿ ಇದ್ದರೆ ಸರಿಯಾದ ರೀತಿಯಲ್ಲಿ ಕಟ್ಟಿ ಬಿಡಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಮಗೆ ಬೇಕಾಗಿರುವಂತಹ ಸಾಲ ನಿಮ್ಮ ಕ್ರೆಡಿಟ್ ಸ್ಕೋರ್ (CIBIL Score) ಕಡಿಮೆ ಆಗಿರುವ ಕಾರಣದಿಂದಾಗಿ ಸಿಗದೇ ಇರಬಹುದಾಗಿದೆ.

Comments are closed.