Astrology: ಮಾರ್ಚ್‌ ಸ್ಥಾನ ಬದಲಿಸಲಿರುವ ಈ 5 ಗ್ರಹಗಳು ಈ ರಾಶಿಯವರ ಲೈಫ್ ನಲ್ಲಿ ದುಡ್ದಿಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ; ಇನ್ನು ಹಣಕ್ಕಾಗಿ ಅಳಬೇಕಿಲ್ಲ!

Astrology: ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ ತಿಂಗಳಲ್ಲಿ ಸಾಕಷ್ಟು ಬದಲಾವಣೆಗಳು ನಡೆಯಲಿವೆ. ಮೊದಲಿಗೆ ಮಾರ್ಚ್ 7 ರಂದು ಮೀನ ರಾಶಿಯಲ್ಲಿ ಬುಧ ಗ್ರಹದ ಚಲನೆ ನಡೆಯಲಿದೆ. ಇದಾದ ನಂತರ ಅದೇ ದಿನ ಕುಂಭ ರಾಶಿಯಲ್ಲಿ ಶುಕ್ರ ಚಲನೆ ಮಾಡಲಿದ್ದು ಅದಾಗಲೇ ಕುಂಭ ರಾಶಿಯಲ್ಲಿ ಸೂರ್ಯ ಹಾಗೂ ಶನಿ ಗ್ರಹಗಳಿದ್ದಾರೆ. ಮಾರ್ಚ್ ಹದಿನಾಲ್ಕನೇ ತಾರೀಕಿನಂದು ಮೀನ ರಾಶಿಗೆ ಸೂರ್ಯ ಪರಿಚಲನೆ ಮಾಡುವ ಮೂಲಕ ಈಗಾಗಲೇ ಅಲ್ಲಿರುವ ಬುಧ ಗ್ರಹದ ಜೊತೆಗೆ ಸಂಯೋಗ ಮಾಡಲಿದೆ. ಇದೇ ರೀತಿ ಇನ್ನು ಸಾಕಷ್ಟು ಸಂಯೋಗಗಳು ನಡೆಯಲಿದ್ದು ಇದರಿಂದಾಗಿ ಯಾವೆಲ್ಲ ರಾಶಿಯವರಿಗೆ ಲಾಭ ಉಂಟಾಗಲಿದೆ ಎಂಬುದನ್ನು ತಿಳಿಯೋಣ ಬನ್ನಿ.

 ವೃಷಭ ರಾಶಿ (Taurus)

ಈ ಸಂದರ್ಭದಲ್ಲಿ ವೃಷಭ ರಾಶಿಯವರು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಶಿಕ್ಷಕರಿಂದ ಉತ್ತಮವಾದ ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದಾರೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲಿದ್ದಾರೆ. ಹೊಸ ಕೆಲಸವನ್ನು ಹುಡುಕುತ್ತಿರುವಂತಹ ನಿರುದ್ಯೋಗಿಗಳಿಗೆ ಮಾರ್ಚ್ ತಿಂಗಳಲ್ಲಿ ಯಾವುದೇ ಅನುಮಾನವಿಲ್ಲದೆ ಕೆಲಸ ಸಿಗಲಿದೆ. ಹಣ ಸಂಪಾದಿಸುವುದಕ್ಕೆ ಖಂಡಿತವಾಗಿ ಬಹು ಮೂಲಗಳನ್ನು ನೀವು ಮಾರ್ಚ್ ತಿಂಗಳಲ್ಲಿ ಪಡೆದುಕೊಳ್ಳುವಿರಿ. ಸಾಕಷ್ಟು ಮೂಲಗಳ ಕಾರಣದಿಂದಾಗಿ ಆರ್ಥಿಕ ವಿಚಾರದಲ್ಲಿ ನೀವು ಯಾವುದೇ ರೀತಿ ಸಮಸ್ಯೆ ಪಡಬೇಕಾದ ಅಗತ್ಯವಿಲ್ಲ.

 ಕರ್ಕ ರಾಶಿ (Cancer)

ಶೈಕ್ಷಣಿಕ ವಿಚಾರದಲ್ಲಿ ವಿದೇಶಕ್ಕೆ ಹೋಗಬೇಕೆನ್ನುವ ಕರ್ಕ ರಾಶಿಯವರ ಬಹುದಿನಗಳ ಕನಸು ಮಾರ್ಚ್ ತಿಂಗಳಲ್ಲಿ ಈಡೇರಲಿದೆ. ಹಿಂದೆಂದಿಗಿಂತ ಹಣಕಾಸಿನ ವಿಚಾರದಲ್ಲಿ ಕರ್ಕ ರಾಶಿಯವರು ಮಾರ್ಚ್ ತಿಂಗಳಲ್ಲಿ ಸಬಲರಾಗಲಿದ್ದಾರೆ. ಲಾಭವನ್ನು ನೀಡುವಂತಹ ಹೂಡಿಕೆಗಳಲ್ಲಿ ನೀವು ಹಣವನ್ನು ಹೂಡಿಕೆ ಮಾಡುವುದಕ್ಕೆ ಪ್ರಾರಂಭಿಸಬಹುದಾಗಿದೆ. ಜೀವನದಲ್ಲಿ ಜಂಟಿ ಆಗಲು ನೋಡುತ್ತಿರುವಂತಹ ವ್ಯಕ್ತಿಗಳು ಈ ಸಂದರ್ಭದಲ್ಲಿ ಉತ್ತಮ ಜೋಡಿಯನ್ನು ಆಯ್ಕೆ ಮಾಡಿಕೊಳ್ಳಲಿದ್ದೀರಿ.

 ಸಿಂಹ ರಾಶಿ (Leo)

ಪಾರ್ಟ್ನರ್ಶಿಪ್ ಕೆಲಸ ಮಾಡುತ್ತಿದ್ದರೆ ಅದರಲ್ಲಿ ಲಾಭ ಪಡೆಯವುದರಲ್ಲಿ ಯಾವುದೇ ಅನುಮಾನವಿಲ್ಲ. ಸಿಂಹ ರಾಶಿಯವರು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಸೂರ್ಯನ ಅನುಗ್ರಹದ ಕಾರಣದಿಂದಾಗಿ ಸಿಂಹ ರಾಶಿಯವರಿಗೆ ಈ ಸಂದರ್ಭದಲ್ಲಿ ಬೇಕಾಗುವ ಎಲ್ಲಾ ನೆಮ್ಮದಿ ಸುಖ ಶಾಂತಿ ಸಿಗಲಿದೆ. ಹಣವನ್ನು ದುಡಿಯೋದಕ್ಕೆ ನಿಮಗೆ ಸಾಕಷ್ಟು ಮಾರ್ಗಗಳು ತೆರೆದುಕೊಳ್ಳಲಿವೆ ಹಾಗೂ ಅನಾರೋಗ್ಯದ ಸಮಸ್ಯೆಯಿಂದ ಕೂಡ ನೀವು ಹೊರಬರಲಿದ್ದೀರಿ.

 ಕನ್ಯಾ ರಾಶಿ (Virgo)

ಮಾರ್ಚ್ ತಿಂಗಳಿನಲ್ಲಿ ನೀವು ಮಾಡುವಂತಹ ದುಡಿಮೆಯಲ್ಲಿ ಆದಾಯವನ್ನು ಹೆಚ್ಚಿನದಾಗಿ ಪಡೆದುಕೊಳ್ಳಲಿದ್ದೀರಿ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಕುಟುಂಬದಿಂದ ಉತ್ತಮವಾದ ಬೆಂಬಲವನ್ನು ಪಡೆಯುವ ಕಾರಣದಿಂದಾಗಿ ಯಶಸ್ಸನ್ನು ಹೊಂದಲಿದ್ದೀರಿ. ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಿಂದ ಸಮಾಜದಲ್ಲಿ ನಿಮ್ಮ ಗೌರವ ಕೂಡ ಹೆಚ್ಚಾಗಲಿದೆ. ಹಣದ ವಿಚಾರದಲ್ಲಿ ಶುಕ್ರ ದೆಸೆ ನಿಮಗೆ ಚೆನ್ನಾಗಿದೆ.

 ವೃಶ್ಚಿಕ ರಾಶಿ (Scorpion)

ಈ ಸಂದರ್ಭದಲ್ಲಿ ವೃಶ್ಚಿಕ ರಾಶಿ ಅವರಿಗೆ ನೀಡಿರುವಂತಹ ಕೆಲಸವನ್ನು ಸರಿಯಾದ ಸಮಯಕ್ಕೆ ಅವರು ಯಶಸ್ವಿಯಾಗಿ ಪೂರ್ತಿ ಗೊಳಿಸಬಹುದಾಗಿದೆ. ಹಣದ ವಿಚಾರದಲ್ಲಿ ಮಾರ್ಚ್ ತಿಂಗಳು ವೃಶ್ಚಿಕ ರಾಶಿ ಅವರಿಗೆ ಸಂಪೂರ್ಣವಾದ ಲಾಭ ನೀಡಲಿದೆ. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿ ಮಾಡುವಂತಹ ಮನಸ್ಸು ಅಥವಾ ಯೋಜನೆ ನಿಮ್ಮ ಬಳಿ ಇದ್ದರೆ ಮಾರ್ಚ್ ತಿಂಗಳು ನಿಮಗೆ ಹೇಳಿ ಮಾಡಿಸಿದ ಸಮಯ ಆಗಿದೆ. ಈ ತಿಂಗಳು ನಿಮಗೆ ಯಾವುದೇ ಕೆಲಸ ನೀಡಿದರೂ ಕೂಡ ನೀವು ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದೀರಿ. ಹಣದ ವಿಚಾರದಲ್ಲಿ ಕೂಡ ಮಾರ್ಚ್ ತಿಂಗಳು ನಿಮಗೆ ಪೂರಕವಾಗಿರಲಿದೆ.

Comments are closed.