PM Svanidhi Yojana: ಆಧಾರ್ ಬಳಸಿ ಟಕ್ ಟಕ್ ಅಂತ ಸರ್ಕಾರನೇ ಸಾಲ ಕೊಡುತ್ತೆ – 50 ಸಾವಿರ ಮಾತ್ರ ಜಾಸ್ತಿ ಕೇಳ್ಬೇಡಿ

PM Svanidhi Yojana: ಬಡ ಹಾಗೂ ಮಾಧ್ಯಮ ವರ್ಗದ ಜನರಿಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸರ್ಕಾರ ಸಹಾಯ ಆಗಲಿ ಎನ್ನುವ ಕಾರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿರುವುದು ನಿಮಗೆಲ್ಲ ತಿಳಿದಿದೆ. ಅದೇ ರೀತಿಯಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ನಷ್ಟವನ್ನು ಮಾಡಿಕೊಂಡಿರುವಂತಹ ಸಾಕಷ್ಟು ವ್ಯಾಪಾರಿಗಳಿಗೆ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಅಥವಾ ಹೊಸ ವ್ಯಾಪಾರವನ್ನು ಪ್ರಾರಂಭಿಸಲು ಪ್ರಧಾನಮಂತ್ರಿ ಸ್ವ ನಿಧಿ ಯೋಜನೆ ಅಡಿಯಲ್ಲಿ ಆರ್ಥಿಕ ಸಹಾಯವನ್ನು ನೀಡುವಂತಹ ಯೋಜನೆಯನ್ನು ಕೂಡ ಪ್ರಾರಂಭಿಸಲಾಗಿದೆ.

ನೀವೆಲ್ಲರೂ ನೋಡಿರೋ ಹಾಗೆ ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಷ್ಟವನ್ನು ಮಾಡಿಕೊಂಡಿದ್ದು ಬೀದಿ ಬದಿಯ ವ್ಯಾಪಾರಿಗಳು. ಲಾಕ್ಡೌನ್ ನಲ್ಲಿ ಜಾರಿಗೆ ತಂದಿದ್ದ ಈ ಯೋಜನೆಯನ್ನು ಈಗಾಗಲೇ ವಿಸ್ತರಿಸಲಾಗಿದೆ. ಜನರಿಂದ ಈ ಯೋಜನೆಗೆ ಉತ್ತಮವಾದ ಪ್ರತಿಕ್ರಿಯೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಇದನ್ನು ಮುಂದುವರಿಸಲಾಗಿದೆ. ಇನ್ನು ಈ ಯೋಜನೆ ಅಡಿಯಲ್ಲಿ ಬೀದಿ ಬದಿಯ ವ್ಯಾಪಾರಿಗಳು ಅಂದ್ರೆ ಹಣ್ಣು ಹೂ ತರಕಾರಿ ವ್ಯಾಪಾರ ಮಾಡುವಂತಹ ವ್ಯಾಪಾರಿಗಳು ಹಾಗೂ ಫಾಸ್ಟ್ ಫುಡ್ ಅಂಗಡಿಗಳನ್ನು ಮಾಡುವಂತಹ ಚಿಕ್ಕಪುಟ್ಟ ವ್ಯಾಪಾರಿಗಳು ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ನೀವು ಕೂಡ ಈ ರೀತಿ ಚಿಕ್ಕ ಪುಟ್ಟ ಬೀದಿ ವ್ಯಾಪಾರಿಗಳ ಕ್ಯಾಟಗರಿಯಲ್ಲಿ ಕಾಣಿಸಿಕೊಂಡರೆ ನೀವು ಕೂಡ ಪ್ರಧಾನಮಂತ್ರಿ ಸ್ವನಿಧಿ ಯೋಜನೆ (PM Svanidhi Yojana) ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

 ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳುವುದು ಹೇಗೆ?

ಸರ್ಕಾರ ಈ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ 50,000ಗಳ ವರೆಗೆ ಸಾಲವನ್ನು ನೀಡುತ್ತದೆ. ಆದರೆ ಈ ಸಾಲವನ್ನು ನೀವು ಪಡೆದುಕೊಳ್ಳುವುದಕ್ಕಿಂತ ಮುಂಚೆ ಇದನ್ನು ಕಟ್ಟೋದಕ್ಕೆ ನಿಮ್ಮಲ್ಲಿ ಅರ್ಹತೆ ಇದೆ ಅನ್ನೋದನ್ನ ಸಾಬೀತುಪಡಿಸಿಕೊಳ್ಳಬೇಕಾಗಿರುತ್ತದೆ. ಇದೇ ಕಾರಣಕ್ಕಾಗಿ ಮೊದಲಿಗೆ 10,000 ನಂತರ 20,000 ಅದಾದ್ಮೇಲೆ 50,000ಗಳ ಸಾಲವನ್ನು ನೀಡಲಾಗುತ್ತೆ. ಪ್ರತಿ ಬಾರಿ ಸಾಲ ಪಡೆದುಕೊಂಡ ನಂತರ ನೀವು ನಿರ್ದಿಷ್ಟ ಸಮಯದ ಒಳಗಡೆ ಸಾಲವನ್ನು ತೀರಿಸಿದಲ್ಲಿ ಮಾತ್ರ ಮುಂದಿನ ಹಂತದ ಸಾಲವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯನ್ನು ಪ್ರತಿಯೊಬ್ಬರು ಇಷ್ಟಪಡುವುದಕ್ಕೆ ಮತ್ತೊಂದು ಕಾರಣ ಏನಂದ್ರೆ ಸರ್ಕಾರದಿಂದ ಈ ಸಾಲದ ಮೇಲೆ ಸಹಾಯಧನವನ್ನು ಪಡೆದುಕೊಳ್ಳಬಹುದು.

 ಬೇಕಾಗಿರೋ ಡಾಕ್ಯುಮೆಂಟ್ಸ್

ಈ ವಿಶೇಷವಾದ ಯೋಜನೆ ಅಡಿಯಲ್ಲಿ ನೀವು ಸಾಲ ಪಡೆದುಕೊಳ್ಳುವುದಕ್ಕೆ ಬೇರೆ ಡಾಕ್ಯೂಮೆಂಟ್ ಅಗತ್ಯ ಇರುವುದಿಲ್ಲ ಪ್ರಮುಖವಾಗಿ ಆಧಾರ್ ಕಾರ್ಡ್ ಅನ್ನು ನೀವು ನೀಡಬೇಕಾಗಿರುತ್ತದೆ. ಪಡೆದುಕೊಂಡು ಸಾಲವನ್ನು ವರ್ಷದ ಒಳಗೆ ಪಾವತಿ ಮಾಡಿದ್ರೆ ಮುಂದಿನ ಹಂತದ ಸಾಲವನ್ನು ಪಡೆದುಕೊಳ್ಳುವುದಕ್ಕೆ ನೀವು ಅರ್ಹತೆಯನ್ನು ಪಡೆದು ತೇರ್ಗಡೆ ಆಗುತ್ತೀರಿ. ಇನ್ನು ಈ ಯೋಜನೆ ಅಡಿಯಲ್ಲಿ ನೀವು ಸರ್ಕಾರಿ ಬ್ಯಾಂಕುಗಳಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಅಡಿಯಲ್ಲಿ ಹಣವನ್ನು ಅರ್ಜಿದಾರರ ಖಾತೆಗೆ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಕೂಡ ಯಾವುದೇ ರೀತಿಯ ಸಮಸ್ಯೆಗಳು ಕಂಡುಬರುವುದಿಲ್ಲ ಯಾಕೆಂದರೆ ಹಣವನ್ನು ಸಂಪೂರ್ಣವಾಗಿ ಡಿಜಿಟಲ್ ಮಾರ್ಗದಲ್ಲಿ ವರ್ಗಾವಣೆ ಮಾಡಲಾಗುತ್ತದೆ. ಈ ಮೂಲಕ ತಮ್ಮ ವ್ಯಾಪಾರವನ್ನು ಪ್ರಾರಂಭಿಸಬೇಕು ಅಥವಾ ವಿಸ್ತರಣೆ ಮಾಡಬೇಕು ಎನ್ನುವುದಾಗಿ ಕನಸು ಕಾಣುವಂತಹ ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಸರ್ಕಾರ ಅವರಿಗೆ ಬೇಕಾಗಿರುವಂತಹ ಸಾಲರೂಪದ ಹಣವನ್ನು 50,000ಗಳವರೆಗೂ ಕೂಡ ನೀಡುವುದಕ್ಕೆ ಸಿದ್ಧವಾಗಿ ನಿಂತಿರುತ್ತದೆ.

Comments are closed.