IPL 2024: ಚೆನ್ನೈ ತಂಡಕ್ಕೆ ಬಿಗ್ ಶಾಕ್- ನಾವೇ ಎಲ್ಲಾ ನಂದೇ ಎಲ್ಲಾ ಎನ್ನುತ್ತಿದ್ದ ತಂಡಕ್ಕೆ ಏನಾಗಿದೆ ಗೊತ್ತೇ?

IPL 2024: ಸ್ನೇಹಿತರೆ ಈ ಬಾರಿಯ ಐಪಿಎಲ್ (IPL 2024) ಅನ್ನೋದು ಮಾರ್ಚ್ 22 ರಿಂದ ಪ್ರಾರಂಭ ಆಗಲಿದೆ ಅನ್ನೋದು ಐಪಿಎಲ್ ಅಧ್ಯಕ್ಷರಿಂದ ಈಗಾಗಲೇ ಮಾಹಿತಿ ಹೊರ ಬಂದಿದೆ. ಇನ್ನು ಈ ಬಾರಿ ಐಪಿಎಲ್ ನ ಷೆಡ್ಯೂಲ್ ಅನ್ನು ಬಹಿರಂಗಪಡಿಸಿಲ್ಲ ಇದಕ್ಕೆ ಕಾರಣ, ಈ ಬಾರಿಯ ಚುನಾವಣೆಯಾಗಿದೆ. ಚುನಾವಣೆಯ ದಿನಾಂಕಗಳನ್ನು ಸರಿಯಾಗಿ ನೋಡಿಕೊಂಡು ಐಪಿಎಲ್ ಮ್ಯಾಚ್ ಷೆಡ್ಯೂಲ್ ಅನ್ನು ಬಹಿರಂಗಪಡಿಸಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ಆದರೆ ಈ ಬಾರಿಯ ಐಪಿಎಲ್ (IPL 2024) ಪ್ರಾರಂಭ ಆಗುವುದಕ್ಕಿಂತ ಮುಂಚೇನೆ ಹಾಲಿ ಚಾಂಪಿಯನ್ ಆಗಿರುವಂತಹ ಚೆನ್ನೈ ಸೂಪರ್ ಕಿಂಗ್ (Chennai Super Kings) ತಂಡಕ್ಕೆ  ಆಘಾತಕಾರಿ ವಿಚಾರ ಸಿಕ್ಕಿದೆ. ಕಳೆದ ಬಾರಿ ತಂಡದ ಪರವಾಗಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನವನ್ನು ತೋರ್ಪಡಿಸಿದ್ದ ಶಿವಂ ದುಬೆ ಈ ಬಾರಿಯ ಐಪಿಎಲ್ ನಿಂದ ಹೊರಗುಳಿವ ಸಾಧ್ಯತೆ ದಟ್ಟವಾಗಿದೆ. ಅಸ್ಸಾಂ ವಿರುದ್ಧದ ರಣಜಿ ಪಂದ್ಯದಲ್ಲಿ ಶಿವಂ ದುಬೆ ಇಂಜುರಿಯಾಗಿರುವ ಕಾರಣದಿಂದಾಗಿ ಮುಂಬೈ ತಂಡದಿಂದ ಹೊರಗುಳಿದಿದ್ದು ಮುಂದಿನ ತಿಂಗಳು ಪ್ರಾರಂಭವಾಗಲಿರುವಂತಹ ಐಪಿಎಲ್ ನಿಂದ ಕೂಡ ಅವರು ಹೊರಗೆ ಉಳಿಯುವ ಸಾಧ್ಯತೆ ಇದೆ ಎಂಬುದಾಗಿ ಬಲ್ಲಮೂಲಗಳು ತಿಳಿಸಿವೆ.

ಈಗ ತಿಳಿದು ಬಂದಿರುವಂತಹ ಲೇಟೆಸ್ಟ್ ಮಾಹಿತಿಗಳ ಪ್ರಕಾರ ಒಂದು ವೇಳೆ ಈಗಾಗಲೇ ಆಗಿರುವಂತಹ ಇಂಜುರಿಯಿಂದ ಶಿವಂ ದುಬೆ ಚೇತರಿಸಿಕೊಂಡರು ಕೂಡ ಚೆನ್ನೈ ತಂಡದ ಪರವಾಗಿ ಐಪಿಎಲ್ (IPL 2024)  ನಲ್ಲಿ ಕೆಲವೊಂದು ಆರಂಭಿಕ ಪಂದ್ಯಗಳಿಗೆ ಕಾಣಿಸಿಕೊಳ್ಳುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಅವರು ಐಪಿಎಲ್ ಪ್ರಾರಂಭ ಆಗುವುದಕ್ಕಿಂತ ಮುಂಚೆ ಫಿಟ್ ಆಗ್ತಾರೆ ಅನ್ನೋದು ಕೂಡ ಅನುಮಾನ ಎಂಬುದಾಗಿ ತಿಳಿದು ಬಂದಿದೆ. ಕೇವಲ ಚೆನ್ನೈ ಮಾತ್ರವಲ್ಲದೆ ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಮುಂಬೈ ತಂಡದ ಪರವಾಗಿ ಕೂಡ ಅವರು ಸದ್ಯದ ಮಟ್ಟಿಗೆ ಆಡೋದು ಅನುಮಾನವಾಗಿದೆ. ಹೀಗಾಗಿ ಮುಂಬೈ ತಂಡಕ್ಕೆ ಕೂಡ ಇದು ದೊಡ್ಡ ನಷ್ಟವಾಗಿದೆ.

ಕಳೆದ ಬಾರಿಯ ಚಾಂಪಿಯನ್ ಆಗಿರುವ ಕಾರಣಕ್ಕಾಗಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಕೂಡ ಕಪ್ ಗೆಲ್ಲುವಂತಹ ಫೇವರೆಟ್ ತಂಡದ ರೀತಿಯಲ್ಲಿ ಕಣಕ್ಕಿಳಿಯಲಿದೆ. ಈ ಸಂದರ್ಭದಲ್ಲಿ ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟ್ಸ್ಮನ್ ಆಗಿರುವಂತಹ ಶಿವಂ ದುಬೆ ಅವರ ಅನುಪಸ್ಥಿತಿ ತಂಡಕ್ಕೆ ಭಾರಿ ನಷ್ಟವನ್ನು ತಂದು ಒದಗಿಸುವುದರಲ್ಲಿ ಯಾವುದೇ ಅನುಮಾನವೇ ಎಂಬುದಾಗಿ ಕ್ರಿಕೆಟ್ ಪಂಡಿತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಐಪಿಎಲ್ (IPL 2024) ನಲ್ಲಿ ಶಿವಂ ದುಬೆ ಆಡ್ತಾರ ಅಥವಾ ಅವರ ಬದಲಿಗೆ ಧೋನಿ ರಿಪ್ಲೇಸ್ಮೆಂಟ್ ಹುಡುಕುತ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.

ಆದರೆ ಖಂಡಿತವಾಗಿ ಆಕ್ರಮಣಕಾರಿ ಬ್ಯಾಟಿಂಗ್ ವಿಚಾರಕ್ಕೆ ಬಂದ್ರೆ ಚೆನ್ನೈ ಸೂಪರ್ ಕಿಂಗ್ ತಂಡ ಶಿವಂ ದುಬೆರವರ ಅನುಪಸ್ಥಿತಿಯನ್ನು ಅನುಭವಿಸುವುದು ಸತ್ಯ. ಇತ್ತೀಚಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಕೂಡ ಅವರು ಆಯ್ಕೆಯಾಗಿದ್ದು ಅಲ್ಲಿ ಕೂಡ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿಸಿದ್ರು. ಈಗಾಗಲೇ ಕ್ರಿಕೆಟ್ ಅಭಿಮಾನಿಗಳು ಅವರನ್ನು ಈ ಜನರೇಶನ್ ನ ಯುವರಾಜ್ ಸಿಂಗ್ ಅನ್ನೋದಾಗಿ ಕೂಡ ಕರೆಯೋದಕ್ಕೆ ಪ್ರಾರಂಭಿಸಿದ್ದಾರೆ.

Comments are closed.