Government Scheme: ನಿಮ್ಮ ಇಬ್ಬರೂ ಹೆಣ್ಣುಮಕ್ಕಳಿಗೆ ಈ ಯೋಜನೆಯಲ್ಲಿ ಸಿಗತ್ತೆ 2 ಲಕ್ಷ ರೂ.!

Government Scheme: ಸ್ನೇಹಿತರೆ ದೇಶದಲ್ಲಿ ಸರ್ಕಾರಗಳು ಮಹಿಳೆಯರನ್ನು ಸಮಾಜದಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಬೇಕು ಎನ್ನುವ ಕಾರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಮಹಿಳೆಯರ ಪರವಾಗಿ ಪ್ರತಿಬಾರಿ ಬಿಡುಗಡೆ ಮಾಡುತ್ತಲೇ ಇದ್ದಾರೆ. ಪ್ರಮುಖವಾಗಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವುದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖ ಉದ್ದೇಶವಾಗಿದೆ. ಇದೇ ರೀತಿ ಜಾರಿಗೆ ತಂದಿರುವಂತಹ ಒಂದು ಯೋಜನೆಯ ಬಗ್ಗೆ ಇವತ್ತಿನ ಈ ಲೇಖನಿಯಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಕೊನೆವರೆಗೂ ಲೇಖನಿಯನ್ನು ಓದಿ.

ಇದಪ್ಪ ಅದೃಷ್ಟ ಅಂದ್ರೆ – 10 ಸಾವಿರದಿಂದ 7 ಲಕ್ಷ ಹಣ ಪಡೆಯುವ ಪೋಸ್ಟ್ ಆಫೀಸ್ ನ ಯೋಜನೆ. ಹೇಗೆ ಗೊತ್ತೇ?

ಕುಟುಂಬದವರು ಸಾಕಷ್ಟು ಬಾರಿ ನೀವು ಹೇಳಿರುವುದನ್ನು ಗಮನಿಸಬಹುದು, ಹೆಚ್ಚಾಗಿ ಹೆಣ್ಣು ಮಕ್ಕಳಾದರೆ ಸಾಕೋದು ಕಷ್ಟ ಆಗುತ್ತೆ ಅನ್ನೋದಾಗಿ. ಈ ಮಾತು ಇನ್ಮುಂದೆ ಬರಬಾರದು ಅನ್ನೋ ಕಾರಣಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇನ್ನು ಯಾವುದೇ ಕಾರಣಕ್ಕೂ ಕೂಡ ಹೆಣ್ಣು ಮಗಳು ಮನೆಗೆ ಹೊರ ಆಗಬಾರದು ಎನ್ನುವ ಕಾರಣಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು ವಿಶೇಷವಾಗಿ ಮದುವೆಯಾಗುವ ಸಂದರ್ಭದಲ್ಲಿ ಹಣದ ಹೊರೆಯಾಗಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ಈ ಯೋಜನೆಯ ಮೂಲಕ ಆರ್ಥಿಕ ಸಹಾಯವನ್ನು ಮಾಡಲು ಹೊರಟಿದೆ. ಈ ಯೋಜನೆ ಜಾರಿಗೆ ಬಂದ ಸಾಕಷ್ಟು ವರ್ಷಗಳೇ ಕಳೆದಿದ್ದರೂ ಕೂಡ ಸಾಕಷ್ಟು ಜನರಿಗೆ ಇದರ ಮಾಹಿತಿ ತಿಳಿದಿಲ್ಲ. ಒಂದು ವೇಳೆ ನಿಮ್ಮ ಮನೆಯಲ್ಲಿ ಕೂಡ ಹೆಣ್ಣು ಮಕ್ಕಳು ಇದ್ದರೆ ಇವತ್ತೇ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.

 ಭಾಗ್ಯಲಕ್ಷ್ಮಿ ಯೋಜನೆಯ ವಿವರ

ಯೋಜನೆಯಲ್ಲಿ ಹೆಣ್ಣು ಮಕ್ಕಳು ಹುಟ್ಟಿದ ತಕ್ಷಣ ನೀವು ಹೋಗಿ ಅರ್ಜಿ ಸಲ್ಲಿಸಿದರೆ 50,000 ಮೌಲ್ಯದ ಬಾಂಡ್ ಅನ್ನು ನೀಡುತ್ತಾರೆ. ಮಗಳ ಮದುವೆಯಾಗುವ ಸಂದರ್ಭದಲ್ಲಿ ಈ ಬಾಂಡ್ ಅನ್ನು ಹೋಗಿ ತೋರಿಸಿದರೆ ಸರ್ಕಾರದ ಕಡೆಯಿಂದ ನಿಮಗೆ ಎರಡು ಲಕ್ಷ ರೂಪಾಯಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಮದುವೆ ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಸರ್ಕಾರದಿಂದ ಪಡೆದುಕೊಂಡಂತಾಗುತ್ತದೆ. ಮದುವೆಗೆ ಸಾಕಷ್ಟು ಹಣ ಖರ್ಚಾಗುತ್ತೆ. ಈ ಸಂದರ್ಭದಲ್ಲಿ ಈ ಸಹಾಯ ನಿಜಕ್ಕೂ ಕೂಡ ಪರಿಣಾಮ ಬೀರುತ್ತೆ.

 ಯೋಜನೆಯಲ್ಲಿ ಫಲಾನುಭವಿಗಳಾಗಲು ಬೇಕಾಗಿರುವ ಡಾಕ್ಯುಮೆಂಟ್ ಗಳು

1. ಹೆತ್ತವರ ಆಧಾರ್ ಕಾರ್ಡ್ ಜೊತೆಗೆ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.

2. ಮಗು ಹಾಗೂ ಹೆತ್ತವರ ಪಾಸ್ಪೋರ್ಟ್ ಸೈಜ್ ಫೋಟೋ.

3. ಹೆಣ್ಣು ಮಗುವಿನ ಬರ್ತ್ ಸರ್ಟಿಫಿಕೇಟ್ ಹಾಗೂ ಅಡ್ರೆಸ್ ಪ್ರೂಫ್. ಇದರ ಜೊತೆಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಕೂಡ ಬೇಕಾಗಿರುವುದು ಅಗತ್ಯವಾಗಿದೆ.

ನಿಮ್ಮ ಹೆಣ್ಣು ಮಗು ಜನನ ಹೊಂದಿದ ತಕ್ಷಣ ನಿಮ್ಮ ಹತ್ತಿರದ ಅಂಗನವಾಡಿಗೆ ಹೋಗಿ ಭಾಗ್ಯಲಕ್ಷ್ಮಿ ಬಾಂಡ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಮಗಳು ಮದುವೆಯ ವಯಸ್ಸಿಗೆ ಬಂದ ನಂತರ ಅಂದರೆ 21 ವರ್ಷದ ನಂತರವಷ್ಟೇ ನೀವು ಈ ಎರಡು ಲಕ್ಷ ರೂಪಾಯಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಕೂಡ ಹೆಣ್ಣು ಮಗಳ ಜನನ ಆಗಿದ್ರೆ ನೀವು ಕೂಡ ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.

Comments are closed.