Chetan Ahimsa: ಮತ್ತೆ ಬಂದ ಚೇತನ್- ಈ ಬಾರಿ ಶಾಲೆಗಳಲ್ಲಿ ಪ್ರಾರ್ಥನೆ ಬೇಡ ಅಂತೇ. ಯಾಕೆ ಅಂತೇ ಗೊತ್ತೇ?

Chetan Ahimsa: ಕನ್ನಡ ಚಿತ್ರರಂಗದ ಒಂದು ಕಾಲದ ಖ್ಯಾತ ನಟ ಆಗಿದ್ದ ಚೇತನ್ (Chetan Ahimsa) ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳಿಂದಾಗಿ ಸುದ್ದಿಯಾಗುತ್ತಿದ್ದಾರೆ. ಅಮೆರಿಕಾದ ಪೌರತ್ವವನ್ನು ಹೊಂದಿರುವಂತಹ ಇವರು ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಸಾಕಷ್ಟು ಕಾರಣಗಳಿಗಾಗಿ ಸುದ್ದಿ ಆಗುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಬೀದರ್ ಗೆ ಹೋಗಿದ್ದ ಸಂದರ್ಭದಲ್ಲಿ ಶಾಲೆಯಲ್ಲಿ ಮಾಡಬಾರದು ಅನ್ನೋ ಹೇಳಿಕೆ ನೀಡುವ ಮೂಲಕ ಈಗ ಸುದ್ದಿಯಾಗಿದ್ದು ಇದನ್ನೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೂಡ ಮತ್ತೊಮ್ಮೆ ರೀ ಶೇರ್ ಮಾಡಿದ್ದಾರೆ.

 ಅಷ್ಟಕ್ಕೂ ಚೇತನ್ ಹೇಳಿದ್ದೇನು?

ಶಾಲೆಯಲ್ಲಿ ನಮಗೆ ಪ್ರಾರ್ಥನೆ ಅಗತ್ಯವಿಲ್ಲ ನಿಮ್ಮ ನಂಬಿಕೆ ಹಾಗೂ ಮೂಢನಂಬಿಕೆಗಳು ನಿಮ್ಮ ಮನೆಯಲ್ಲಿ ಇರಲಿ ಎನ್ನುವ ಹಾಗೆ ಹೇಳಿದ್ದಾರೆ. ಶಾಲೆಯಲ್ಲಿ ವೈಜ್ಞಾನಿಕತೆಯ ಪಾಠವನ್ನು ಮಕ್ಕಳಿಗೆ ಕಲಿಸಬೇಕೆ ವಿನಃ, ಈ ರೀತಿ ಮೌಢ್ಯತೆಗಳನ್ನು ತುಂಬುವಂತಹ ಪೂಜೆ ಹಾಗೂ ಪ್ರಾರ್ಥನೆಯನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ. ವೈಜ್ಞಾನಿಕತೆಯೇ ಇಂದಿನ ಸತ್ಯ, ಎಂದು ಬೀದರ್ ನಲ್ಲಿ ನಡೆದಿರುವಂತಹ ಕಾರ್ಯಕ್ರಮ ಒಂದರಲ್ಲಿ ಚೇತನ್ ಅಹಿಂಸಾ (Chetan Ahimsa) ಅವರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೊರ ಹಾಕಿ ಸ್ಟೇಟ್ಮೆಂಟ್ ನೀಡಿದ್ದಾರೆ.

ಶನಿ ದೇವನಿಂದ ಅದೃಷ್ಟ ಶುರು- ಈ ರಾಶಿಗಳಿಗೆ ಮಾತ್ರ- ಶನಿ ದೇವನನ್ನು ನೆನೆಯುತ್ತ ನಿಮ್ಮ ಭವಿಷ್ಯ ತಿಳಿಯಿರಿ.

ಬೀದರ್ ನಲ್ಲಿ ಒಂದು ಕಾಲದಲ್ಲಿ ಬಹುಮನಿ ಸಾಮ್ರಾಜ್ಯ ಹಾಗೂ ವಿಜಯನಗರ ಸಾಮ್ರಾಜ್ಯ ಆಡಳಿಕೆಯನ್ನು ನಡೆಸುತ್ತಿದ್ದರು. ಇದನ್ನ ಯಾರು ಗೆಲ್ತಿದ್ರೋ ಅವರೇ ರಾಜ್ಯಭಾರ ನಡೆಸುತ್ತಿದ್ದರು. ಇಂದು ನಾವು ಇಲ್ಲಿ ಸಮಾನತೆಯನ್ನು ಹರಡಬೇಕಾಗಿದೆ ಅನ್ನೋದಾಗಿ ಚೇತನ್ ಅಹಿಂಸಾ (Chetan Ahimsa) ಹೇಳಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಸತಿ ಶಾಲೆಗಳಲ್ಲಿ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ ಎನ್ನುವಂತಹ ಘೋಷವಾಕ್ಯದ ಬದಲು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎನ್ನುವಂತಹ ಘೋಷವಾಕ್ಯ ಬದಲಾಗಿರುವುದರ ಬಗ್ಗೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಜೋರಾಗಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಈ ವಿಚಾರ ಕಾವೇರಿತ್ತಿರುವ ಸಂದರ್ಭದಲ್ಲಿಯೇ ಈಗ ಚೇತನ್ ಅಹಿಂಸ (Chetan Ahimsa) ರವರು ಈ ರೀತಿ ವಿವಾ-ದಾತ್ಮಕ ಹೇಳಿಕೆ ನೀಡಿರುವುದು ಮತ್ತಷ್ಟು ಪರ ವಿರೋಧ ಪಂಗಡಗಳು ಉದ್ಭವ ಆಗುವಂತೆ ಮಾಡಿದೆ. ಈ ಹಿಂದೆ ಕೂಡ ಸಾಕಷ್ಟು ಶಾಂತಿ ಕದಡುವಂತಹ ಹೇಳಿಕೆ ನೀಡಿರುವಂತಹ ಚೇತನ್ ಅಹಿಂಸೆ ಈಗ ಶಾಲಾ ವಿಚಾರಗಳಲ್ಲಿ ಈ ರೀತಿಯ ಹೇಳಿಕೆ ನೀಡಿರುವುದರ ಬಗ್ಗೆ ಕೆಲವು ಕಡೆಗಳಲ್ಲಿ ವಿರೋಧ ಕೂಡ ವ್ಯಕ್ತವಾಗುತ್ತಿದೆ.

ಕೆಲವರು ಈ ಹೇಳಿಕೆ ಬಗ್ಗೆ ಪರವಾದವನ್ನು ಮಂಡಿಸಿದ್ರೆ ಇನ್ನು ಕೆಲವರು ಮತ್ತೆ ತಲೆ ಬುಡ ಇಲ್ಲದ ಹೇಳಿಕೆಯನ್ನು ಹೇಳೋಕೆ ಬಂದ್ರಾ ಸ್ವಾಮಿ ಕೂಡ ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಸಾಕಷ್ಟು ವರ್ಷಗಳಿಂದ ಮುಂದುವರೆದುಕೊಂಡು ಬಂದಿರುವಂತಹ ಒಂದು ಸುಂದರ ಸಂಸ್ಕೃತಿಯನ್ನು ಅದನ್ನು ಕೀಳುಮಟ್ಟದಲ್ಲಿ ನೋಡುವ ರೀತಿಯಲ್ಲಿ ಪ್ರಶ್ನಿಸುವುದು ಎಷ್ಟರಮಟ್ಟಿಗೆ ಸರಿ ಅನ್ನೋದೇ ಎಲ್ಲರ ಅಭಿಪ್ರಾಯವಾಗಿದೆ.

Comments are closed.