Bigg Boss: ಬಿಗ್ ಬಾಸ್ ಸಂಗೀತಾ ಅವರ ಅತ್ತಿಗೆ ಸುಚಿ ಬಗ್ಗೆ ಕೇಳಿ ಬರುತ್ತಿರುವ ಗಾಸಿಪ್ ನಿಜಾನಾ? ಸೋಶಿಯಲ್ ಮೀಡಿಯಾದಿಂದ ಹೀಗೂ ಆಗತ್ತಾ?

Bigg Boss: ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಮುಗಿದಿದ್ದು ಯಾರೆಲ್ಲಾ ಕಾರ್ಯಕ್ರಮವನ್ನು ಯಾವ ಸ್ಥಾನದಲ್ಲಿ ಮುಗಿಸಿದ್ದಾರೆ ಅನ್ನೋದನ್ನ ನಿಮಗೆಲ್ಲರಿಗೂ ವಿಶೇಷವಾಗಿ ಹೇಳಬೇಕಾದ ಅಗತ್ಯವಿಲ್ಲ ಅದರಲ್ಲೂ ವಿಶೇಷವಾಗಿ ಸಂಗೀತ ಶೃಂಗೇರಿ (Sangeetha Sringeri) ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಸಂಗೀತ ಶೃಂಗೇರಿ ಅವರು ಗೆಲ್ಲಬೇಕು ಎನ್ನುವುದಾಗಿ ಅವರ ಅತ್ತಿಗೆ ಆಗಿರುವಂತಹ ಸುಚಿ (Suchi) ಹಾಗೂ ಅಣ್ಣ ಸಂತೋಷ ಇಬ್ಬರೂ ಕೂಡ ಅವಿರತವಾಗಿ ಪ್ರಯತ್ನಪಟ್ಟಿದ್ದಾರೆ ಅನ್ನೋದನ್ನ ಇಲ್ಲಿ ನೆನಪು ಬಿಡಬಾರದು.

ಸಂಗೀತ ಶೃಂಗೇರಿ ಅವರ ಜೊತೆಗೆ ಮನೆಯಿಂದ ಹೊರಗೆ ಅವರ ಅತ್ತಿಗೆ ಆಗಿರುವಂತಹ ಸುಚಿ ಕೂಡ ಫೇಮಸ್ ಆಗಿದ್ದಾರೆ. ಈ ರೀತಿ ಅನ್ಯೋನ್ಯವಾಗಿರುವಂತಹ ಅತ್ತಿಗೆ ಹಾಗೂ ನಾದಿನಿಯನ್ನ ನಾವು ನೋಡೇ ಇಲ್ಲ ಅನ್ನೋದಾಗಿ ಕೂಡ ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಪ್ರಾರಂಭಿಸಿದ್ರು. ಹೊರಗಿನಿಂದಲೇ ತಮ್ಮ ನಾದಿನಿಯ ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನು ಕೂಡ ಅವರೇ ಹ್ಯಾಂಡಲ್ ಮಾಡ್ತಿದ್ದೋರು. ಇದರಿಂದಲೂ ಕೂಡ ಅವರು ಜನಪ್ರಿಯತೆ ಪಡೆದುಕೊಂಡಿದ್ದರು.

ಬಿಗ್ ಬಾಸ್ (Bigg Boss) ಗಿಂತ ಮುಂಚೆ ಸುಚಿತ್ರಾ ಅವರು ಒಂದು ಕಂಪನಿಯಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡುತ್ತಿದ್ದರು ಆದರೆ, ಸಂಗೀತ ಶೃಂಗೇರಿ ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಂಡಲ್ ಮಾಡುವ ಸಲುವಾಗಿ ಆ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ ಸಂಗೀತ ಶೃಂಗೇರಿ ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಂಡಲ್ ಮಾಡುವುದಕ್ಕೆ ಪ್ರಾರಂಭಿಸುತ್ತಾರೆ. ಆದರೆ ಈಗ ಸಂಗೀತ ಶೃಂಗೇರಿ ಬಿಗ್ ಬಾಸ್ (Bigg Boss)  ಮನೆಯಿಂದ ಹೊರಬಂದ ನಂತರ ಅವರ ಅತ್ತಿಗೆ ಆಗಿರುವಂತಹ ಸುಚಿತ್ರ ಅವರ ಬಗ್ಗೆ ಒಂದು ಗಾಸಿಪ್ ಹೊರಬಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಸುಚಿ ಪತಿ ಹೇಳಿದ್ದೇನು?

ಹೌದು, ಅವರು ಮುಂದಿನ ದಿನಗಳಲ್ಲಿ ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ಗಾಸಿಪ್ ಕೇಳಿ ಬರುತ್ತಿದೆ. ಈ ಬಗ್ಗೆ ಪ್ರಶ್ನೆ ಕೇಳಿದಾಗ ಅವರು ಗಂಡ ಆಗಿರುವಂತಹ ಸಂತೋಷ್ ಕೂಡ ಬಿಗ್ ಬಾಸ್ ಗೆ ಇನ್ವಾಲ್ ಆಗಿದ್ಮೇಲೆ ಅಭಿಮಾನಿಗಳು ಕೂಡ ಹೆಚ್ಚಾಗಿದ್ದಾರೆ ಹೀಗಾಗಿ ಮುಂದಿನ ದಿನ ಏನು ಹೇಳೋಕೆ ಬರುವುದಿಲ್ಲ ಅನ್ನೋದಾಗಿ ಸಾಧ್ಯತೆಯ ಮಾತುಗಳನ್ನ ಪರೋಕ್ಷವಾಗಿ ಆಡಿದ್ದಾರೆ. ಇನ್ನು ಸಂಗೀತ ಶೃಂಗೇರಿ ಅವರ ಅಣ್ಣ ಸಂತೋಷ ಕೂಡ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ.

ಸುಚಿತ್ರ ಹಾಗೂ ಸಂತೋಷ ಇಬ್ರೂ ಕೂಡ ಭರ್ಜರಿ 13 ವರ್ಷಗಳ ಕಾಲ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆಯ ಮೇರೆಗೆ 2021 ರಲ್ಲಿ ಹಸೆಮಣೆ ಹೇರುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಈಗ ಸಂಗೀತ ಶೃಂಗೇರಿ ಅವರ ವಿಚಾರದಲ್ಲಿ ಬಿಗ್ ಬಾಸ್ (Bigg Boss)  ಸ್ಪರ್ಧೆಯಲ್ಲಿ ಮನೆಯ ಹೊರಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕಾರಣದಿಂದಾಗಿ ಸುಚಿತ್ರ ಅವ್ರು ಕೂಡ ಲೈಮ್ ಲೈಟಲ್ಲಿ ಇದ್ದಾರೆ. ಬಂದಿರೋ ಗಾಳಿ ಸುದ್ದಿಯ ಪ್ರಕಾರ ಮುಂದಿನ ದಿನಗಳಲ್ಲಿ ಅವರು ಕಿರುತರೆ ಲೋಕಕ್ಕೆ ಕಾಲಿಟ್ಟರೂ ಇಡಬಹುದು.

Comments are closed.