Ayodhya: ರಾಮ ಮಂದಿರ ಸುಮ್ಮನೆ ನಿರ್ಮಾಣವಾಗಿಲ್ಲ; ಯಾರು ಎಷ್ಟು ದೇಣಿಗೆ ಕೊಟ್ಟಿದ್ದಾರೆ ಗೊತ್ತಾ? ಕೋಟ್ಯಾಂತರ ರೂಪಾಯಿ ಹರಿದು ಬಂದಿದ್ದು ಎಲ್ಲಿಂದ?

Ayodhya: ನಮಸ್ಕಾರ ಸ್ನೇಹಿತರೇ ಕೊನೆಗೂ ಕೂಡ 500 ವರ್ಷಗಳ ಹೋರಾಟ ಹಾಗೂ ತ್ಯಾಗ ತಪಸ್ಸಿನ ಫಲಿತಾಂಶ ಇದೆ ಜನವರಿ 22ರಂದು ಅಯೋಧ್ಯಾಯ ರಾಮಜನ್ಮಭೂಮಿಯಲ್ಲಿ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಜೊತೆಗೆ ಯಶಸ್ವಿಯಾಗಿದೆ. 1526 ರಿಂದ ಪ್ರಾರಂಭವಾಗಿದ್ದಂತಹ ಈ ವಿವಾದ ಕೊನೆಗೂ ಕೂಡ ಸುಖಾಂತ್ಯವನ್ನು ಕಂಡಿರುವುದು ಪ್ರತಿಯೊಬ್ಬ ಭಾರತೀಯನಿಗೂ ಅದರಲ್ಲೂ ವಿಶೇಷವಾಗಿ ರಾಮನನ್ನು ಪೂಜಿಸುವಂತಹ ಸನಾತನ ಹಿಂದೂ ಧರ್ಮದ ಬಾಂಧವರಿಗೆ ಸಂತೋಷವನ್ನು ನೀಡಿದೆ ಎಂದು ಹೇಳಬಹುದಾಗಿದೆ.

ಇನ್ನು ಈ ಲೇಖನಿಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಯಾವೆಲ್ಲ ಸೆಲೆಬ್ರಿಟಿಗಳು ಹಾಗೂ ಶ್ರೀಮಂತರು ರಾಜಕಾರಣಿಗಳು ಎಷ್ಟು ಹಣವನ್ನು ನೀಡಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿಯನ್ನು ನಿಮಗೆ ನೀಡಲು ಹೊರಟಿದ್ದೇವೆ. ಇದುವರೆಗೂ ರಾಮಜನ್ಮಭೂಮಿಗೆ ಅಂಬಾನಿ ಕುಟುಂಬದಿಂದ ಒಟ್ಟಾರೆಯಾಗಿ ಹತ್ತು ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು, ಇತ್ತೀಚಿಗಷ್ಟೇ ರಾಮ ಲಲ್ಲ ಪ್ರಾಣ ಪ್ರತಿಷ್ಠಾಪನೆಗೆ ಬಂದ ಸಂದರ್ಭದಲ್ಲಿ ಕೂಡ ಟ್ರಸ್ಟ್ ಗೆ 2.51 ಕೋಟಿ ರೂಪಾಯಿ ಹಣವನ್ನು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಸೂರತ್ ಮೂಲದ ವಜ್ರದ ವ್ಯಾಪಾರಿ ಆಗಿರುವಂತಹ ದಿಲೀಪ್ ಕುಮಾರ್ ಲಾಕಿ ರವರು 101 ಕೆಜಿ ಚಿನ್ನವನ್ನು ದಾನ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇದೇ ಅತ್ಯಂತ ಗರಿಷ್ಟ ದೇಣಿಗೆ ಎಂಬುದಾಗಿ ತಿಳಿದುಬಂದಿದೆ. ಇದರ ಮೌಲ್ಯ ಭರ್ಜರಿ 68 ಕೋಟಿ ಎಂಬುದಾಗಿ ತಿಳಿದುಬಂದಿದೆ. ದಿಲೀಪ್ ಕುಮಾರ್ ನೀಡಿರುವಂತಹ ಚಿನ್ನದ ಮೂಲಕವೇ ಚಿನ್ನದ ಬಾಗಿಲು ತ್ರಿಶೂಲ ಹಾಗೂ ಡಮರುಗಳನ್ನು ತಯಾರಿಸಲಾಗಿದೆ ಎಂದು ತಿಳಿದು ಬಂದಿದೆ. ಗುಜರಾತ್ ಮೂಲದ ಮತ್ತೊಬ್ಬ ವಜ್ರದ ವ್ಯಾಪಾರಿ ಆಗಿರುವಂತಹ ಗೋವಿಂದಾ ಭಾಯ್ ದೊಲಾಕಿಯ ರಾಮಮಂದಿರ ನಿರ್ಮಾಣ ಕಾರ್ಯಕ್ಕಾಗಿ ಬರೋಬ್ಬರಿ 11 ಕೋಟಿ ರೂಪಾಯಿಗಳ ಹಣವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕಾಗಿ ಅದಾನಿ ಗ್ರೂಪ್ನ ಮಾಲಿಕ ಆಗಿರುವಂತಹ ಗೌತಮ್ ಅದಾನಿ ಕೂಡ ಹಣವನ್ನು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಆದರೆ ನಿರ್ದಿಷ್ಟವಾಗಿ ಎಷ್ಟು ಹಣವನ್ನು ನೀಡಿದ್ದಾರೆ ಎನ್ನುವುದು ಖುಲಾಸೆ ಆಗಿಲ್ಲ. ಇದರ ಜೊತೆಗೆ ಪ್ರಸಾದ ಸಮರ್ಪಣೆಯನ್ನು ಕೂಡ ಗೌತಮ್ ಅದಾನಿಯವರ ಅದಾನಿ ವಿಲ್ಮಾರ್ ಸಂಸ್ಥೆಯೆ ತಯಾರಿಸಿದೆ ಎಂಬುದಾಗಿ ತಿಳಿದು ಬಂದಿದೆ. ರಾಮ ಮಂದಿರ ಲೋಕಾರ್ಪಣೆಯ ಸಂದರ್ಭದಲ್ಲಿ ದೇವಸ್ಥಾನದ ಲೈಟಿಂಗ್ ಕಾರ್ಯವನ್ನು ಹಾವಲ್ಸ್ ಇಂಡಿಯಾ ಸಂಸ್ಥೆಯ ಅಧ್ಯಕ್ಷರು ನೆರವೇರಿಸಿದ್ದಾರೆ ಎನ್ನುವುದು ಕೂಡ ಈ ಮೂಲಕ ತಿಳಿದು ಬಂದಿದೆ.

ಮೊರರಿ ಬಾಪು ದೇವಸ್ಥಾನದ ಟ್ರಸ್ಟಿಗಳಿಗೆ 16.3 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದು ಇದರ ಜೊತೆಗೆ ದೇವಸ್ಥಾನಗಳ ವಿಚಾರಕ್ಕೆ ಬಂದರೆ ಪಾಟ್ನ ಮೂಲದ ಮಹಾವೀರ ಮಂದಿರದ ಮೂಲಕ ರಾಮ ನಿರ್ಮಾಣ ಕಾರ್ಯಕ್ಕಾಗಿ ಬರೋಬ್ಬರಿ 10 ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಭಾರತದ ನಿವಾಸಿಗಳೇ ರಾಮಮಂದಿರ ಕಾರ್ಯಕ್ಕಾಗಿ ತಮ್ಮ ಸ್ವಂತ ಹಣದ ಮೂಲಕ 3500 ಕೋಟಿಗಿಂತಲೂ ಹೆಚ್ಚಿನ ಹಣವನ್ನು ನೀಡಿದ್ದು ರಾಮಮಂದಿರ ನಿರ್ಮಾಣಕ್ಕಾಗಿ ಭಾರತೀಯರು ಯಾವ ರೀತಿಯಲ್ಲಿ ಉತ್ಸುಕರಾಗಿದ್ದಾರೆ ಎಂಬುದಾಗಿ ತಿಳಿದು ಬರುತ್ತದೆ.

Comments are closed.