Human Body: ಅಬ್ಬಾ ಒಬ್ಬ ವ್ಯಕ್ತಿ ಸತ್ತ ಮೇಲೂ ಅವನ ದೇಹದ 10 ಈ ಭಾಗಗಳು ಎಷ್ಟು ಗಂಟೆಗಳವರೆಗೆ ಜೀವಂತ ಇರುತ್ತೆ ಗೊತ್ತಾ? ಕೇಳಿದ್ರೆ ಆಶ್ಚರ್ಯ ಆಗೋದು ಪಕ್ಕಾ!

Human Body: ನಮಸ್ಕಾರ ಸ್ನೇಹಿತರೆ ಮನುಷ್ಯನ ದೇಹ (Human Body) ಮರಣ ಹೊಂದಿದ ನಂತರ ಸಂಪೂರ್ಣವಾಗಿ ನಿಸ್ತೇಜ ನಿಶ್ಚಲಗೊಳ್ಳುತ್ತದೆ ಎಂಬುದಾಗಿ ಹೇಳುತ್ತಾರೆ. ಆದರೆ ವೈದ್ಯಕೀಯ ಪ್ರಕಾರ ತಿಳಿದು ಬಂದಿರುವ ಹಾಗೆ ಮರಣ ಹೊಂದಿದ ನಂತರ ಕೂಡ ಕೆಲವೊಂದು ಚಲನವಲನ ಹಾಗೂ ಕಾರ್ಯಗಳು ನಡೆಯುತ್ತಲೇ ಇರುತ್ತವೆ ಎಂಬುದು ತಿಳಿದು ಬರುತ್ತದೆ, ಹಾಗಿದ್ದರೆ ಬನ್ನಿ ಅವುಗಳು ಯಾವುವು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ.

ಸಿಬಿಲ್ ಸ್ಕೋರ್ ಚೆನ್ನಾಗಿಲ್ಲದಿದ್ರೂ ಸಿಗುತ್ತೆ  ವಯಕ್ತಿಕ ಸಾಲ; ತುರ್ತು ಸಾಲ ನೀಡುತ್ತೆ ಈ ಕಂಪನಿ!

1. ಹೃದಯ ತನ್ನ ಕೆಲಸವನ್ನು ನಿಲ್ಲಿಸಿದ ನಂತರ ರಕ್ತ ಕೆಳಭಾಗಕ್ಕೆ ಹರಿಯುತ್ತದೆ ಈ ಸಂದರ್ಭದಲ್ಲಿ ಪುರುಷರ ದೇಹದಲ್ಲಿ ಸ್ಕಲನ ಆಗುತ್ತದೆ ಎಂಬುದಾಗಿ ತಿಳಿದು ಬರುತ್ತದೆ.

2. ಮರಣ ಹೊಂದಿದ ನಂತರ ತ್ವಚೆ ಕ್ರಮೇಣವಾಗಿ ಸಡಿಲ ಗೊಂಡರು ಕೂಡ ತ್ವಚೆಯ ಕಣಗಳು ಜೀವಂತವಾಗಿರುತ್ತದೆ ಎಂಬುದಾಗಿ ವೈದ್ಯಕೀಯ ಮೂಲಗಳ ಪ್ರಕಾರ ತಿಳಿದು ಬರುತ್ತದೆ.

3. ಇನ್ನು ಮರಣ ಹೊಂದಿದ ವ್ಯಕ್ತಿಯ ಮೆದುಳು ಕೆಲವು ದಿನಗಳ ವರೆಗೆ ಕಾರ್ಯಾಚರಣೆ ಮಾಡುವಂತಹ ವಿಧಾನಗಳು ಕೂಡ ಇಂದಿನ ದಿನಗಳಲ್ಲಿ ಕಾಣಬಹುದಾಗಿದೆ.

4. ಮರಣ ಹೊಂದಿದ ವ್ಯಕ್ತಿಯ ದೇಹ (Human Body) ಸಂಪೂರ್ಣವಾಗಿ ಕಾರ್ಯವನ್ನು ನಿಲ್ಲಿಸುವವರೆಗೂ ಕೂಡ ದೇಹದ ಜಠರದಲ್ಲಿರುವಂತಹ ಒಳ್ಳೆಯ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಯನ್ನು ಮುಂದುವರಿಸುತ್ತವೆ.

5. ಮರಣ ಹೊಂದಿದ ನಂತರ ಕೂಡ ಉಗುರು ಹಾಗೂ ಕೂದಲುಗಳು ಅಂದರೆ ಈಗಾಗಲೇ ಇರುವಂತಹ ಉಗುರು ಹಾಗೂ ಕೂದಲುಗಳು ಬೆಳೆಯುತ್ತವೆ ಎಂಬ ಮಾಹಿತಿ ಇದ್ದು ಇದು ಕೊನೆಗೆ ಸಡಿಲವಾಗಿ ಬಿದ್ದು ಹೋಗುತ್ತವೆ.

6. ಇನ್ನು ದೇಹ ನಿಶ್ಚಲ ಅಂದರೆ ಮರಣ ಹೊಂದಿದ ನಂತರ ಮೆದುಳಿಗೆ ಇದರ ಸಂದೇಶ ಹೋಗದೆ ಇರುವ ಸಂದರ್ಭದಲ್ಲಿ ಮರಣ ಹೊಂದಿದ ನಂತರ ಕೂಡ ಮಲ ಅಥವಾ ಮೂತ್ರ ವಿಸರ್ಜನೆ ಆಗುವ ಸಾಧ್ಯತೆ ಇರುತ್ತದೆ.

7. ವ್ಯಕ್ತಿಯ ಮರಣದ ನಂತರ ಕೂಡ ಆತನ ಜೀನ್ಸ್ ಆಕ್ಟಿವ್ ಆಗಿರುತ್ತದೆ ಹಾಗೂ ಈ ಜೀನ್ಸ್ ಆಕ್ಟಿವ್ ಆಗಿರುವ ಕಾರಣದಿಂದಲೇ ವೈದ್ಯರು ಆತ ಎಷ್ಟು ಸಮಯದ ಹಿಂದೆ ಮರಣ ಹೊಂದಿದ್ದಾನೆ ಎನ್ನುವಂತಹ ಮಾಹಿತಿ ಪಡೆದುಕೊಳ್ಳುತ್ತಾರೆ.

8. ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಮರಣ ಹೊಂದಿ ಸಂಪೂರ್ಣ ದೇಹ ನಿಶ್ಚಲ ಆಗುವವರೆಗೂ ಕೂಡ ಸ್ನಾಯುಗಳ ಚಲನೆ ಎದೆ ಭಾಗದಲ್ಲಿ ಕೂಡ ನೀವು ಕಾಣಬಹುದಾಗಿದೆ.

9. ಸಾಕಷ್ಟು ನ್ಯೂಸ್ ಗಳಲ್ಲಿ ನೀವು ಓದಿರಬಹುದು ಗರ್ಭಿಣಿ ಹೆಂಗಸು ಮೃತ ಆದನಂತರ ಕೂಡ ಮಗು ಜನನ ಹೊಂದಿರುವುದರಿಂದ ನೀವು ಕೇಳಿರಬಹುದು. ದೇಹದಲ್ಲಿ ಒಳಗೆ ಗ್ಯಾಸ್ ಒತ್ತಡ ಹಾಕುವುದರಿಂದ ಜನನಾಂಗದ ಮೂಲಕ ಮಗು ಹೊರಗೆ ಬರುವ ಸಾಧ್ಯತೆ ಇರುತ್ತದೆ.

10. ಮೃತ ಹೊಂದಿರುವಂತಹ ವ್ಯಕ್ತಿಯ ಒಳಗೆ ಇರುವಂತಹ ಗ್ಯಾಸ್ ದೇಹದ ಹೊರಗೆ ಬರುವ ಸಂದರ್ಭದಲ್ಲಿ ವಿಚಿತ್ರ ಸದ್ದು ಕೂಡ ಕೇಳಿ ಬರುವುದನ್ನು ನೀವು ವೈದ್ಯಕೀಯ ದಾಖಲೆಗಳ ಪ್ರಕಾರ ತಿಳಿದುಕೊಳ್ಳಬಹುದು.

Comments are closed.