Post Office Savings Scheme: ಸರ್ಕಾರದ ಈ ಗ್ಯಾರಂಟಿ ಯೋಜನೆಯಲ್ಲಿ ಕೇವಲ 2,000 ರೂ. ಹೂಡಿಕೆ ಮಾಡಿದ್ರೆ ಸಾಕು, 1.5 ಲಕ್ಷ ಹಣ ಹಿಂಪಡೆಯಬಹುದು; ಗೃಹಲಕ್ಷ್ಮಿಯರೇ, ಯೋಜನೆ ಮಾಡಿ!

Post Office Savings Scheme: ಪ್ರತಿಯೊಬ್ಬ ಹುಡುಕಿದರೂ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಲಾಭ ಹಾಗೂ ಕಡಿಮೆ ರಿಸ್ಕ್ ಇರುವಂತಹ ಸ್ಥಳ ಯಾವುದು ಅಲ್ಲಿ ತಾನು ಹಣವನ್ನು ಹೂಡಿಕೆ ಮಾಡಬಹುದು ಎಂಬುದಾಗಿ ಭಾವಿಸುತ್ತಾರೆ. ಇನ್ನು ಇವತ್ತಿನ ಈ ಆರ್ಟಿಕಲ್ ಮುಖಾಂತರವೂ ಕೂಡ ನಾವು ತಿಂಗಳಿಗೆ ಒಂದು ಸಾವಿರ ರೂಪಾಯಿ ಇಂದ ಪ್ರಾರಂಭಿಸಿ 5000 ವರೆಗೆ ಹೂಡಿಕೆ ಮಾಡುವ ಮೂಲಕ ನೀವು ರಿಟರ್ನ್ ರೂಪದಲ್ಲಿ ದೊಡ್ಡ ಮಟ್ಟದ ಹಣವನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಹೇಳಲು ಹೊರಟಿದ್ದೇವೆ. ಹಾಗಿದ್ರೆ ಆ ಯೋಜನೆ ಯಾವುದು ಹಾಗೂ ಎಲ್ಲಿ ಹಣವನ್ನು ಹೂಡಿಕೆ ಮಾಡುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಇತ್ತೀಚಿನ ವರ್ಷಗಳಲ್ಲಿ ಹೂಡಿಕೆ ವಿಚಾರದಲ್ಲಿ ಭಾರತ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪೋಸ್ಟ್ ಆಫೀಸ್ ಕಚೇರಿಯಲ್ಲಿ ಇರುವಂತಹ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವಂತಹ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಮಧ್ಯಮ ಹಾಗೂ ದುಡಿಯೋ ವರ್ಗದ ಜನರ ನೆಚ್ಚಿನ ಹೂಡಿಕೆಗಳಲ್ಲಿ ರಿಕರಿಂಗ್ ಡೆಪಾಸಿಟ್ ಒಂದಾಗಿದೆ. RD ನಲ್ಲಿ ನಿಯಮಿತವಾಗಿ ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಹೂಡಿಕೆ ಮಾಡುವ ಮೂಲಕ ದೊಡ್ಡ ಮಟ್ಟದ ರಿಟರ್ನ್ ಅನ್ನು ಪಡೆದುಕೊಳ್ಳುವಂತಹ ಉಮೇದುವಾರಿಕೆ ಜನರಲ್ಲಿ ಹೆಚ್ಚಿದೆ.

RD ಯೋಜನೆಯಲಿ ಪ್ರತಿ ತಿಂಗಳಿಗೆ 1000, 2000, 3000, 4000 ಅಥವಾ 5000 ಹಣವನ್ನು ಹೂಡಿಕೆ ಮಾಡುವ ಮೂಲಕವೂ ಕೂಡ ನೀವು ಯೋಜನೆಯ ಉತ್ತಮ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. RD ಯೋಜನೆಯಲ್ಲಿ ನೀವು ವಾರ್ಷಿಕವಾಗಿ 6.7% ಬಡ್ಡಿದರವನ್ನು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಕೇವಲ ನೂರು ರೂಪಾಯಿಗಳಿಂದ ನಿಮ್ಮ ಹೂಡಿಕೆಯನ್ನು ಪ್ರಾರಂಭಿಸಿ ಮ್ಯಾಕ್ಸಿಮಮ್ ಯಾವುದೇ ಗರಿಷ್ಠ ಮೊತ್ತವನ್ನು ಕೂಡ ನೀವು ಹೂಡಿಕೆ ಮಾಡಬಹುದು.

 1000 ರೂಪಾಯಿಗಳ RD ಹೂಡಿಕೆ

ಒಂದು ವೇಳೆ ನೀವು ಸಾವಿರ ರೂಪಾಯಿಗಳ ಹಣವನ್ನು ಪ್ರತಿ ತಿಂಗಳು ಹೂಡಿಕೆ ಮಾಡುತ್ತಾ ಬಂದರೆ ವರ್ಷಕ್ಕೆ 12,000 ಕಟ್ಟಿದಂತಾಗುತ್ತದೆ. ಅಂದರೆ ಐದು ವರ್ಷಗಳ ಅವಧಿಯಲ್ಲಿ ನೀವು 60,000ಗಳನ್ನು ಕಟ್ಟಿದಂತಾಗುತ್ತದೆ. ವಾರ್ಷಿಕ 6.7 ಪ್ರತಿಶತ ಬಡ್ಡಿಯನ್ನು ಲೆಕ್ಕಾಚಾರ ಹಾಕಿದರೆ ನೀವು ಅತಿರಿಕ್ತವಾಗಿ ಬಡ್ಡಿ ದರದ ರೂಪದಲ್ಲಿ 11366 ರೂಪಾಯಿಗಳನ್ನು ಪಡೆಯುತ್ತೀರಿ ಹಾಗೂ ಒಟ್ಟಾರೆಯಾಗಿ ಅರವತ್ತು ಸಾವಿರ ರೂಪಾಯಿಗಳ ಹೂಡಿಕೆಗೆ 71366 ರೂಪಾಯಿಗಳನ್ನು ಪಡೆದುಕೊಳ್ಳುತ್ತೀರಿ.

 2000 ರೂಪಾಯಿಗಳ ಹೂಡಿಕೆ

ಪ್ರತಿ ತಿಂಗಳು 2000 ಹೂಡಿಕೆ ಮಾಡಿದರೆ ವರ್ಷಕ್ಕೆ 24,000 ಹೂಡಿಕೆ ಮಾಡಿದಂತಾಗುತ್ತದೆ. ಅದೇ ರೀತಿಯಲ್ಲಿ ವಾರ್ಷಿಕ 1.20 ಲಕ್ಷ ರೂಪಾಯಿಗಳ ಹೂಡಿಕೆ. ಒಟ್ಟಾರೆಯಾಗಿ ಮೆಚುರಿಟಿ ಯಾಗುವ ಸಂದರ್ಭದಲ್ಲಿ 1.42 ಲಕ್ಷಗಳ ರಿಟರ್ನ್ ಅನ್ನು ನೀವು ಪಡೆದುಕೊಳ್ಳುತ್ತೀರಿ.

 3000 ರೂಪಾಯಿಗಳ ಹೂಡಿಕೆ

ಪ್ರತಿ ತಿಂಗಳು 3000 ಹೂಡಿಕೆಯನ್ನು ಮಾಡಿದ್ರೆ ಐದು ವರ್ಷಕ್ಕೆ 1.80 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದಂತಾಗುತ್ತದೆ. ಐದು ವರ್ಷಕ್ಕೆ ಬಡ್ಡಿ ಸೇರಿಸಿ ರಿಟರ್ನ್ ರೂಪದಲ್ಲಿ ನೀವು 2.14 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತೀರಿ.

 4000 ರೂಪಾಯಿಗಳ ಹೂಡಿಕೆ

ಪ್ರತಿ ತಿಂಗಳು ನಾಲ್ಕು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿಕೊಂಡು ಬಂದರೆ ಐದು ವರ್ಷಗಳ ಅಂತ್ಯಕ್ಕೆ ನೀವು 2.40 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದಂತಾಗುತ್ತದೆ. ಮಾಡಿರುವಂತಹ

2.40 ಲಕ್ಷ ರೂಪಾಯಿಗಳ ಹೂಡಿಕೆ ಮೇಲೆ ನೀವು ರಿಟರ್ನ್ ರೂಪದಲ್ಲಿ 2.85 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತೀರಿ.

 5000 ರೂಪಾಯಿಗಳ ಹೂಡಿಕೆ

ಪ್ರತಿ ತಿಂಗಳಿಗೆ 5000 ರೂಪಾಯಿ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿಕೊಂಡು ಬಂದರೆ ನೀವು ಐದು ವರ್ಷಗಳ ಅಂತ್ಯಕ್ಕೆ 3 ಲಕ್ಷ ರೂಪಾಯಿಗಳ ಹೂಡಿಕೆಯನ್ನು ಮಾಡಿದಂತಾಗುತ್ತದೆ. ಈ ಬಡಿದರೆ ಲೆಕ್ಕಾಚಾರದಲ್ಲಿ ನೀವು ರಿಟರ್ನ್ ರೂಪದಲ್ಲಿ 3.56 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತೀರಿ.

Comments are closed.