PM Kisan Samman Nidhi Scheme:  ರೈತರ್ ಅಕೌಂಟಿಗೆ ಯಾವಾಗ ಬಿಡುಗಡೆ ಆಗಲಿದೆ ಗೊತ್ತಾ ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಹಣ? ನಿರೀಕ್ಷೆ ಸುಳ್ಳಾಗತ್ತಾ?

PM Kisan Samman Nidhi Scheme:  ದೇಶದ ಬೆನ್ನೆಲುಬು ಆಗಿರುವಂತಹ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಅವರು ಕೂಡ ಒಂದೊಳ್ಳೆ ಜೀವನವನ್ನು ನಡೆಸುವ ನಿಟ್ಟಿನಲ್ಲಿ ಸಹಾಯಕವಾಗುವಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಅದರಲ್ಲೂ ವಿಶೇಷವಾಗಿ ಕೇಂದ್ರ ಸರ್ಕಾರ ಈ ವಿಚಾರದ ಕುರಿತಂತೆ ಪ್ರತಿ ವರ್ಷ ಒಂದಲ್ಲ ಒಂದು ಯೋಜನೆಯನ್ನು ಜಾರಿಗೆ ತರುತ್ತಲೇ ಇರುತ್ತದೆ. ಇನ್ನು ಇವತ್ತಿನ ಲೇಖನದಲ್ಲಿ ನಾವು ಮಾತನಾಡುತ್ತಿರುವುದು ಪ್ರಧಾನ ನರೇಂದ್ರ ಮೋದಿ ಅವರ ಮೂಲಕ ಜಾರಿಗೆ ಬಂದಿರುವಂತಹ ಪಿಎಂ ಕಿಸಾನ್ ಯೋಜನೆ (PM Kisan Samman Nidhi Scheme) ಯ 16ನೇ ಕಂತಿನ ಹಣದ ಬಗ್ಗೆ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Nidhi Scheme)ಅಡಿಯಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ.2000 ಹಣವನ್ನು ಅಂದರೆ ವರ್ಷಕ್ಕೆ ಆರು ಸಾವಿರ ರೂಪಾಯಿ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ರೈತರಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಈ ಯೋಜನೆಯ ಮೂಲಕ ಮಾಡಲಾಗುತ್ತಿದೆ. ನವೆಂಬರ್ ತಿಂಗಳಿನಲ್ಲಿ 15ನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿತ್ತು ಎಂಬುದಾಗಿ ತಿಳಿದು ಬಂದಿದ್ದು ಈ ಬಾರಿಯ ಅಂದರೆ 16ನೇ ಕಂತಿನ ಹಣವನ್ನು ಯಾವಾಗ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಎಲ್ಲರೂ ಚರ್ಚೆಯನ್ನು ನಡೆಸುತ್ತಿದ್ದರು. ಕೊನೆಗೂ ಮಾಹಿತಿ ತಿಳಿದು ಬಂದಿದ್ದು ಫೆಬ್ರವರಿ 28ನೇ ದಿನಾಂಕದಂದು 16ನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.

ಒಂದು ವೇಳೆ ನಿಮ್ಮ ಬಳಿ ಕೂಡ ಕೃಷಿ ಭೂಮಿ ಇದ್ದಲ್ಲಿ ನೀವು ಈ ಯೋಜನೆಯಿಂದ ವಂಚಿತರಾಗಿದ್ದರೆ ಕೂಡಲೇ ನಿಮ್ಮ ಭೂಮಿಯ ಇ ಕೆವೈಸಿ ಮಾಡಿಸಿ ಹಾಗೂ ಭೂಪರಿಶೀಲನೆಯನ್ನು ಕೂಡ ಮಾಡಿಸಬೇಕಾಗಿರುತ್ತದೆ.

 ಇ-ಕೆವೈಸಿ ಮಾಡುವ ವಿಧಾನ

ಮೊದಲಿಗೆ ನೀವು ಪಿಎಂ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Nidhi Scheme)ಯ ಪೋರ್ಟಲ್ಲಿ ಹೋಗಿ ಅಲ್ಲಿ ಇ-ಕೆವೈಸಿ  ಆಪ್ಷನ್ ಅನ್ನು ಆಯ್ಕೆ ಮಾಡಿ ನಿಮ್ಮ ನಂಬರ್ ಅನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ. ಆ ಮೊಬೈಲ್ ನಂಬರ್ ಗೆ ಬರುವಂತಹ ಓ ಟಿ ಪಿ ಯನ್ನು ನಮೂದಿಸಿದರೆ ಸಾಕು ನೀವು ಇ-ಕೆವೈಸಿ ಪೂರ್ತಿ ಗೊಳಿಸಿದಂತಾಗುತ್ತದೆ.

ಕೇವಲ ಪೋರ್ಟಲ್ ಗೆ ಹೋಗಬೇಕು ಎನ್ನುವಂತಹ ಯಾವುದೇ ಅಗತ್ಯ ಇರುವುದಿಲ್ಲ ಪಿಎಂ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Nidhi Scheme) ಯ ಅಪ್ಲಿಕೇಶನ್ ಮೂಲಕವೂ ಕೂಡ ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ. ಹತ್ತಿರದಲ್ಲೇ ಇರುವಂತಹ ಸಹಾಯ ಕೇಂದ್ರಗಳಿಗೂ ಕೂಡ ಹೋಗಿ ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾದಂತಹ ಅವಕಾಶವನ್ನು ಹೊಂದಿದ್ದೀರಿ. ಇಲ್ಲಿ ನೀವು ಬಯೋಮೆಟ್ರಿಕ್ ಪ್ರಕ್ರಿಯೆ ಮೂಲಕ ಈ ಕೆಲಸವನ್ನು ಮಾಡಬಹುದಾಗಿದೆ. ಇ-ಕೆವೈಸಿ ರೀತಿಯಲ್ಲಿಯೇ ಭೂಪರಿಶೀಲನೆಯನ್ನು ಕೂಡ ನೀವು ಇಲ್ಲಿ ಮಾಡಬಹುದಾದಂತಹ ಅವಕಾಶವನ್ನು ಹೊಂದಿದ್ದು ಹೆಚ್ಚಿನ ಮಾಹಿತಿಗಳಿಗಾಗಿ ನೀವು ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಇದರ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದಾಗಿದೆ.

Comments are closed.