Poultry Farming: ಕೋಳಿ ಫಾರ್ಮ್ ಬ್ಯುಸನೆಸ್ ಶುರುಹಚ್ಚೊಂಬಿಡಿ ಸಾಕು; ಸರ್ಕಾರದಿಂದ 40 ಲಕ್ಷ ಬಂಡವಾಳ ಸಿಗುತ್ತೆ; ಬರಿ ಆದಾಯ ಮಾತ್ರ ನಿಮ್ದು!

Poultry Farming: ಕೆಲಸ ಮಾಡುವಂತಹ ಪ್ರತಿಯೊಬ್ಬರೂ ಕೂಡ ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದಕ್ಕೆ ಕೆಲವೊಂದು ನಿರ್ದಿಷ್ಟ ಸಮಯದ ನಂತರ ಒಪ್ಪೋದಿಲ್ಲ ಯಾಕೆಂದರೆ ಬೇರೆಯವರಿಗೆ ಎಷ್ಟು ಕೆಲಸ ಮಾಡಿದರೂ ತಮ್ಮ ಜೀವನ ಎಲ್ಲಿ ನಡೆಯಬೇಕು ಎಷ್ಟು ನಡೆಯಬೇಕು ಅಷ್ಟು ಮಾತ್ರ ನಡೆಯುತ್ತೆ ಅನ್ನೋದು ಅವರಿಗೂ ಕೂಡ ತಿಳಿದಿರುತ್ತದೆ. ತಮ್ಮದೇ ಆದಂತಹ ಸ್ವಂತ ಉದ್ಯಮ ಅಥವಾ ವ್ಯಾಪಾರವನ್ನು ಪ್ರಾರಂಭ ಮಾಡುವುದಕ್ಕೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಆಸೆ ಖಂಡಿತವಾಗಿ ಇದ್ದೇ ಇರುತ್ತದೆ. ಅಂತಹ ಜನರಿಗೆ ಇವತ್ತಿನ ಲೇಖನದಲ್ಲಿ ವಿಶೇಷವಾಗಿ ನಾವು ಕೋಳಿ ಫಾರಂ (Poultry Farming)  ಉದ್ಯಮದ ಬಗ್ಗೆ ಹೇಳೋದಿಕ್ಕೆ ಹೊರಟಿದ್ದೇವೆ. ಎಲ್ಲಕ್ಕಿಂತ ಮತ್ತೊಂದು ವಿಶೇಷ ಅಂದ್ರೆ ಈ ಉದ್ಯಮ ಮಾಡೋರಿಗೆ ಸರ್ಕಾರವೇ ಹಣ ಕೂಡ ನೀಡುತ್ತೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಮಾರ್ಚ್‌ ಸ್ಥಾನ ಬದಲಿಸಲಿರುವ ಈ 5 ಗ್ರಹಗಳು ಈ ರಾಶಿಯವರ ಲೈಫ್ ನಲ್ಲಿ ದುಡ್ದಿಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ; ಇನ್ನು ಹಣಕ್ಕಾಗಿ ಅಳಬೇಕಿಲ್ಲ!

ಬಿಹಾರ ರಾಜ್ಯದಲ್ಲಿ 2023 ಹಾಗೂ 24ನೇ ಸಾಲಿನ ಸಮಗ್ರ ಕೋಳಿ ಅಭಿವೃದ್ಧಿ ಯೋಜನೆಯ ಪ್ರಕಾರ 3000 ಬಾಯ್ಲರ್ ಕೋಳಿಗಳನ್ನು ಇಟ್ಟುಕೊಂಡು ಕೋಳಿ ಫಾರಂ (Poultry Farming)   ಪ್ರಾರಂಭ ಮಾಡಿದ್ರೆ 40 ಲಕ್ಷ ರೂಪಾಯಿಗಳ ವರೆಗೂ ಸಾಲ ಸೌಲಭ್ಯವನ್ನು ನೀಡುವಂತಹ ಯೋಜನೆಯನ್ನು ಜಾರಿಗೆ ತರಲಾಗಿದ್ದು ಪ್ರಮಾಣ ಪತ್ರ ಇದ್ದವರಿಗೆ ಮಾತ್ರ ಯೋಜನೆ ಸೀಮಿತವಾಗಿದೆ ಎನ್ನುವುದಾಗಿ ಕೂಡ ತಿಳಿದುಬಂದಿದೆ.

 ಕೋಳಿ ಸಾಕಾಣಿಕೆಗೆ ಸಿಗುತ್ತೆ ಭರ್ಜರಿ 40 ಲಕ್ಷ ರೂಪಾಯಿ ಸಾಲ

ಒಂದು ವೇಳೆ ನೀವು ನಿಮ್ಮ ಕೋಳಿ ಫಾರಂನಲ್ಲಿ 3000 ಕ್ಕಿಂತಲೂ ಹೆಚ್ಚಿನ ಬಾಯ್ಲರ್ ಕೋಳಿಗಳನ್ನು ಹೊಂದಿದ್ದರೆ ಹಾಗೂ ಲೇಯರ್ ಫಾರಂ ಗಳಿಗೆ ಈ ಯೋಜನೆ ಅಡಿಯಲ್ಲಿ 40 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಕೇವಲ ಸಾಲ ಸೌಲಭ್ಯ ಮಾತ್ರವಲ್ಲದೆ ರಿಯಾಯಿತಿಯನ್ನು ಕೂಡ ನೀಡಲಾಗುತ್ತಿದ್ದು ಸಾಮಾನ್ಯ ವರ್ಗದ ಜನರಿಗೆ 30% ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ 50 ಪ್ರತಿಶತ ರಿಯಾಯಿತಿಯನ್ನು ನೀಡಲಾಗುತ್ತದೆ.

 ಅರ್ಜಿ ಸಲ್ಲಿಸುವ ವಿಧಾನ ಹಾಗೂ ಬೇಕಾಗಿರುವ ಡಾಕ್ಯುಮೆಂಟ್ ಗಳು

ಈ ಯೋಜನೆ ಬಗ್ಗೆ ಈಗಾಗಲೇ ಸರ್ಕಾರ ಜಾಹೀರಾತು ನೀಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಇದರ ಪೋರ್ಟಲ್ ಅಧಿಕೃತವಾಗಿ ಪ್ರಾರಂಭವಾಗಲಿದೆ. ಪ್ರಾರಂಭ ಆದಂತಹ 21 ದಿನಗಳ ಒಳಗಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಮೊದಲು ಬಂದವರಿಗೆ ಮೊದಲ ಆದ್ಯತೆ ಎನ್ನುವಂತಹ ನಿಯಮ ಕೂಡ ಈ ಯೋಜನೆಯಲ್ಲಿದೆ. ಇನ್ನು ಬೇಕಾಗಿರುವ ಡಾಕ್ಯುಮೆಂಟ್ಗಳ ಬಗ್ಗೆ ಮಾತನಾಡುವುದಾದರೆ, ಅಡ್ರೆಸ್ ಪ್ರೂಫ್, ಗುತ್ತಿಗೆ ಒಪ್ಪಂದದ ಜೊತೆಗೆ ಪಾಸ್ಪೋರ್ಟ್ ಸೈಜ್ನ ಫೋಟೋಗಳು ಬೇಕು. ಕೋಳಿ ಸಾಕಾಣಿಕೆ (Poultry Farming)  ಮಾಡಲು ಸರ್ಕಾರದಿಂದ ಪಡೆದಿರುವಂತಹ ಸರ್ಟಿಫಿಕೇಟ್ ಜೊತೆಗೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ವೋಟರ್ ಐಡಿಗಳಂತಹ ದಾಖಲೆಗಳು ಕೂಡ ಬೇಕಾಗಿರುತ್ತವೆ.

ಈ ಪ್ರಕ್ರಿಯೆಗಳನ್ನು ಹಾಗೂ ದಾಖಲೆಗಳನ್ನು ಸಲ್ಲಿಸುವ ಮೂಲಕ ನೀವು ಈ ಯೋಜನೆಯಲ್ಲಿ ಭಾಗಿ ಆಗಬಹುದಾಗಿದ್ದು ಇದು ಕೇವಲ ಬಿಹಾರ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಜಾರಿಗೆ ಬರಬೇಕಾಗಿರುವ ಯೋಜನೆಯಾಗಿದ್ದು, ಮುಂಬರುವ ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಕೂಡ ಜಾರಿಗೆ ಬಂದರೂ ನೀವು ಆಶ್ಚರ್ಯ ಪಡಬೇಕಾದ ಯಾವುದೇ ಅಗತ್ಯವಿಲ್ಲ.

Comments are closed.