Political News: ಈ ಪುಟ್ಟ ಬಾಲಕಿಗೆ ದೇವಸ್ಥಾನ, ಪ್ರಸಾದ ಎರಡು ಬೇಡವಂತೆ. ಮತ್ತೇನು ಬೇಕಂತೆ ಗೊತ್ತೇ? ಸಿದ್ದು ಗೆ ನೇರ ಪತ್ರ

Political News: ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವೊಂದು ವಿಚಾರಗಳು ಹಾಗೂ ಕೆಲವೊಂದು ಸುದ್ದಿಗಳು ದೊಡ್ಡ ಮಟ್ಟದಲ್ಲಿ ವೈರಲ್ ಆಗಿರುವುದನ್ನು ನೀವು ನೋಡಿರಬಹುದು. ಇನ್ನು ಇದೇ ರೀತಿಯ ಒಂದು ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋದು ನಮ್ಮ ಗಮನಕ್ಕೆ ಬಂದಿದ್ದು ಅದು ಕೂಡ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಸಿದ್ದರಾಮಯ್ಯ ಅವರ ಬಗ್ಗೆ ಕೇಳಿ ಬರ್ತಿರೋ ವಿಚಾರ. ಹೌದು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಸಿದ್ದರಾಮಯ್ಯ ಅವರಿಗೆ 8ನೇ ತರಗತಿಯ ವಿದ್ಯಾರ್ಥಿನಿ ಒಬ್ಬಳು ಬರೆದಿರುವಂತಹ ಒಂದು ಭಾವನಾತ್ಮಕ ಪತ್ರ ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ.

ನಿಮ್ಮ ಮನೆಯಲ್ಲಿ ಈ ವಾಸ್ತು ದೋಷ ಇದ್ರೆ ಎಂದಾದ್ರೆ ಮುಗೀತು; ಕಷ್ಟ ಕಾರ್ಪಣ್ಯಗಳು ನಿಮ್ಮನ್ನು ಬಿಟ್ಟು ಹೋಗುವುದೇ ಇಲ್ಲ, ಏನು ಮಾಡ್ಬೇಕು ಗೊತ್ತೇ?

ನಮಗೆ ದೇವಸ್ಥಾನದ ತೀರ್ಥ ಹಾಗೂ ಪ್ರಸಾದ ಬೇಡ ಶಾಲೆಗೆ ಹೋಗುವುದಕ್ಕೆ ಸಾರಿಗೆ ಬಸ್ ಗಳನ್ನು ವ್ಯವಸ್ಥೆ ಮಾಡಿ ಎನ್ನುವುದಾಗಿ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿರುವ ಕುಮಾರಿ ಹರ್ಷಿಣಿ ಬರೆದಿರುವಂತಹ ಪತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ತಾವರೆಕೆರೆ ವ್ಯಾಪ್ತಿಯಲ್ಲಿ ಸೀಗೆಹಳ್ಳಿ ಕಡೆಯಿಂದ ಬೆಂಗಳೂರಿಗೆ ಹೋಗಲು ಸರಿಯಾದ ಬಸ್ ವ್ಯವಸ್ಥೆ ಇದೆ ವಿಚಾರವಾಗಿ ಈ ಹುಡುಗಿ ಸಾರಿಗೆ ಸಚಿವರಾಗಿರುವಂತಹ ರಾಮಲಿಂಗಾರೆಡ್ಡಿ ಸೇರಿದಂತೆ ರಾಜ್ಯದ ಮುಖ್ಯಮಂತ್ರಿಗಳು ಆಗಿರುವ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಅವರಿಗೆ ಕೂಡ ಪತ್ರವನ್ನು ಬರೆದಿದ್ದಾರೆ.

ಈ ಪತ್ರದಲ್ಲಿ ಹರ್ಷಿಣಿ ಬರೆದಿರುವಂತಹ ಸಾಲುಗಳನ್ನು ನೋಡಿರುವಂತಹ ನೆಟ್ಟಿಗರು ಕೂಡ ಮಂತ್ರ ಮುಗ್ಧರಾಗಿದ್ದಾರೆ ಎನ್ನಬಹುದಾಗಿದೆ. ಇಂದಿನ ಹೆಣ್ಣು ಮಕ್ಕಳು ಸುರಕ್ಷಿತ ಹಾಗೂ ಸರಿಯಾದ ಶಿಕ್ಷಣವನ್ನು ಉಚಿತವಾಗಿ ಪಡೆಯುವ ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶೀರ್ವಾದವಿದೆ. ಹೀಗಾಗಿ ನಮಗೆ ದೇವಸ್ಥಾನದ ತೀರ್ಥ ಪ್ರಸಾದ ಬೇಡ ಬದಲಾಗಿ ಉನ್ನತ ಶಿಕ್ಷಣಕ್ಕಾಗಿ ನಾವು ಹೋಗುವಂತಹ ಶಾಲೆಗಳಿಗೆ ಅಥವಾ ಕಾಲೇಜುಗಳಿಗೆ ಬಸ್ಸಿನ ವ್ಯವಸ್ಥೆ ಬೇಕು ಎಂಬುದಾಗಿ ಆ ಹೆಣ್ಣು ಮಗಳು ಬರೆದಿದ್ದಾಳೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಶಾಲಾ ಮಕ್ಕಳಿಗೆ ತಮ್ಮ ಶಾಲೆಗೆ ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂಬುದಾಗಿ ಹೆಣ್ಣುಮಗಳು ತನ್ನ ಪತ್ರದಲ್ಲಿ ಬರೆದುಕೊಂಡಿದ್ದಾಳೆ. ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಕೂಡ ಈ ಹಿಂದೆ ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಪತ್ರವನ್ನು ಬರೆಯಲಾಗಿದ್ದು, ಆದರೆ ಅವರು ಯಾವುದೇ ರೀತಿಯಲ್ಲಿ ಪರಿಹಾರವನ್ನು ಹಾಗೂ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂಬುದನ್ನು ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಅಥವಾ ಈ ಮೇಲೆ ಉಲ್ಲೇಖಿಸಲಾಗಿರುವಂತಹ ಮಾನ್ಯ ಸಚಿವರುಗಳಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಬೇರೆ ಬೇರೆ ಜಿಲ್ಲೆಗಳಲ್ಲಿ ಮಕ್ಕಳು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಹರ್ಷಿಣಿ ಅವರೆಲ್ಲರ ಪ್ರತಿನಿಧಿಯ ರೂಪದಲ್ಲಿ ಈ ಪತ್ರವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದಿದ್ದಾಳೆ ಅನ್ನಬಹುದಾಗಿದೆ. ಸಾಕಷ್ಟು ಕುಗ್ರಾಮ ಗಳಂತಹ ಪ್ರದೇಶಗಳಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ವ್ಯವಸ್ಥೆ ಕೂಡ ದೊರಕುತ್ತಿಲ್ಲ ಅದನ್ನು ಕೂಡ ಸರಿಪಡಿಸಬೇಕಾಗಿರುವುದು ನಮ್ಮ ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎನ್ನಬಹುದಾಗಿದೆ.

Comments are closed.