Pray to God: ಇದೊಂದು ಮಂತ್ರ ಹೇಳಿದ್ರೆ ಸಾಕು- ನಿಮ್ಮ ಸಾಲ ಎಷ್ಟೇ ಇರಲಿ, ತೀರಿ ಹೋಗಿ, ಶ್ರೀಮಂತರಾಗುತ್ತೀರಿ.

Pray to God: ಸ್ನೇಹಿತರೇ ನಮ್ಮ ಜೀವನದಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ನಾವು ಪ್ರತಿದಿನದ ಜೀವನದಲ್ಲಿ ಕಾಣಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಆರ್ಥಿಕ ಸಮಸ್ಯೆ ಎಲ್ಲರಿಗೆ ಸಾಮಾನ್ಯವಾಗಿ ಕಾಣುವಂತಹ ಒಂದು ದೊಡ್ಡ ತಲೆನೋವಿನ ವಿಚಾರವಾಗಿರುತ್ತದೆ. ಈ ಸಮಸ್ಯೆಗಳಿಂದ ಯಾವ ರೀತಿ ಹೊರಬರಬೇಕು ಎನ್ನುವುದರ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿರುವೆ ಬನ್ನಿ.

ಒಂದು ವೇಳೆ ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದೀರಿ ಎಂದಾದಲ್ಲಿ ಅಥವಾ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದು ನಷ್ಟವಾಗುತ್ತಿದೆ ಎಂದರೇ ಭಿಕ್ಷಾ ಪಾತ್ರೆಯನ್ನು ಹಿಡಿದುಕೊಂಡಿರುವಂತಹ ಕಪ್ಪು ಶ್ವಾನವನ್ನು ತನ್ನ ಜೊತೆಗೆ ಇಟ್ಟುಕೊಂಡಿರುವಂತಹ ಕಾಲಭೈರವವನ್ನು ನೀವು ಪೂಜೆ ಮಾಡುವುದರಿಂದ ನಿಮ್ಮ ಸಮಸ್ಯೆಗಳಿಂದ ಹೊರಬರಬಹುದಾಗಿದೆ.

ವ್ಯಾಪಾರ ಹಾಗೂ ಇನ್ನಿತರ ಉದ್ಯಮಗಳಲ್ಲಿ ನೀವು ಒಂದು ವೇಳೆ ನಷ್ಟವನ್ನು ಹೊಂದುತ್ತಿದ್ದೀರಿ ಎಂದಾದಲ್ಲಿ ಈ ರೀತಿ ಪೂಜೆ ಮಾಡುವುದರ ಮೂಲಕ ನೀವು ಸಮಸ್ಯೆಗಳಿಂದ ಹೊರ ಬರಬಹುದಾಗಿದೆ. ಶನಿಯ ಕಾಟ ಹಾಗೂ ಶತ್ರು ಭಾದೆಯಿಂದಲೂ ಮುಕ್ತಿ ಹೊಂದಬಹುದಾಗಿದೆ. ಒಂದು ಕೆಲಸ ಕೈ ಬಿಟ್ಟು ಹೋಗಿದೆ ಎಂಬುದಾಗಿ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗಬೇಡಿ ಖಂಡಿತವಾಗಿ ಇನ್ನೊಂದು ಕೆಲಸ ನಿಮ್ಮನ್ನು ಹುಡುಕಿಕೊಂಡು ಬರುತ್ತೆ.

ನಿಮ್ಮ ಕೆಲಸ ಹಾಗೂ ಮನಸ್ಸಿನಲ್ಲಿ ಇರುವಂತಹ ಪ್ರತಿಯೊಂದು ನಗರಾತ್ಮಕ ಶಕ್ತಿ ಹಾಗೂ ಯೋಚನೆಗಳು ದೂರವಾಗುತ್ತವೆ. ಒಂದು ವೇಳೆ ನಿಮ್ಮ ಮೇಲೆ ಶನಿಯ ದೋಷ ಇದ್ದರೆ ಪ್ರತಿ ಶನಿವಾರ ಕಾಲಭೈರವಣಿಗೆ ಪೂಜೆ ಮಾಡುವ ಮೂಲಕ ಅದನ್ನು ಹೋಗಲಾಡಿಸಿಕೊಳ್ಳಬಹುದಾಗಿದೆ. ಯಾವುದೇ ಕೆಲಸವನ್ನು ಪ್ರಾರಂಭಿಸುವಂತಹ ಧೈರ್ಯ ನಿಮ್ಮಲ್ಲಿ ಇಲ್ಲದೆ ಹೋದಲ್ಲಿ ಕೂಡ ಕಾಲಭೈರವನ ಸ್ಮರಣೆ ಹಾಗೂ ಪೂಜೆ ನಿಮಗೆ ಶಕ್ತಿಯನ್ನು ತುಂಬಿ ಕೊಡುತ್ತದೆ.

ಉದ್ಯೋಗ ಹಾಗೂ ವ್ಯಾಪಾರದಲ್ಲಿ ನಿಮಗಿರುವಂತಹ ಶತ್ರು ಭಾದೆ ಕೂಡ ನಿವಾರಣೆ ಆಗುತ್ತದೆ. ಎಲ್ಲಾ ಸಮಸ್ಯೆಗಳಿಂದ ಹೊರಬರುವುದಕ್ಕೆ ಕಾಲಭೈರವನ ಸ್ಮರಣೆ ಹಾಗೂ ಮಂತ್ರವನ್ನು ಸ್ಮರಿಸಬೇಕಾಗಿರುತ್ತದೆ. ಕಾಲಭೈರವಣ ಈ ವಿಶೇಷವಾದ ಮಂತ್ರವನ್ನು ಪಠಣೆ ಮಾಡಿದರೆ ಸಾಕು ನಿಮ್ಮ ಎಲ್ಲಾ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ.

“ಓಂ ನಮೋ ಭಗವತೇ ಸ್ವರ್ಣಕರ್ಷಣಾಯ ಧನ ಧಾನ್ಯಂ ವೃದ್ಧಿ ಕರಾಯ ಶೀಘ್ರ ಧನ ಧಾನ್ಯಂ ಸ್ವರ್ಣಂ ದೇಹಿ ದೇಹಿ ವ್ಯಸ್ಯ ವ್ಯಸ್ಯ ಕುರು ಕುರು ಸ್ವಾಹ”. ಕಾಲಭೈರವ ನ ಈ ವಿಶೇಷ ಮಂತ್ರವನ್ನು ನೀವು ಸ್ನಾನ ಮಾಡಿ ಒಂದೇ ಸ್ಥಳದಲ್ಲಿ ಕೂತು ಜಪ ಮಾಡಬೇಕಾಗಿರುತ್ತದೆ. ಇದಕ್ಕಿಂತ ಮುಂಚೆ ಕಾಲಭೈರವನಿಗೆ ಅರಿಶಿನ ಕುಂಕುಮದಿಂದ ಹೂ ಇಟ್ಟು ಪೂಜೆ ಮಾಡಬೇಕಾಗಿರುತ್ತದೆ.

ಈ ಮಂತ್ರವನ್ನು ಪಠಿಸಿದರೆ ಸಾಕು ಒಂದು ದಿನದ ಒಳಗಾಗಿ ನೀವು ಬಳಲುತ್ತಿರುವಂತಹ ಸಮಸ್ಯೆಯಿಂದ ಆ ಕಾಲಭೈರವ ನಿಮ್ಮನ್ನು ಆಚೆಗೆ ತರುತ್ತಾನೆ. ಸೋಮವಾರ ಗುರುವಾರ ಹಾಗೂ ಶುಕ್ರವಾರದ ದಿನಗಳಲ್ಲಿ ಈ ಮಂತ್ರವನ್ನು ಪಠಣೆ ಮಾಡುವುದು ಉತ್ತಮವಾಗಿರುತ್ತದೆ. ನೀವು ಜೀವನದಲ್ಲಿ ಎಷ್ಟೇ ಸಾಲ ಮಾಡಿಕೊಂಡಿದ್ದರು ಅದನ್ನೆಲ್ಲ ತಿಳಿಸಿ ಜೀವನದಲ್ಲಿ ಶ್ರೀಮಂತರಾಗುವಂತಹ ಅವಕಾಶಗಳನ್ನು ಈ ಮಂತ್ರದ ನಿಯಮಿತವಾದ ಸ್ಮರಣೆ, ಮಾಡಿಕೊಡುತ್ತದೆ.

Comments are closed.