Lucky Zodiac Signs: ಮಾರ್ಚ್ ತಿಂಗಳಲ್ಲಿ ಈ ರಾಶಿಯವರ  ಅದೃಷ್ಟ ಖುಲಾಯಿಸುತ್ತೆ; ದುಡ್ಡಿಗೇನೂ ಕೊರತೆ ಇಲ್ಲ!

Lucky Zodiac Signs: ಹೊಸ ತಿಂಗಳು ಬರುತ್ತಿದ್ದಂತೆ ಹೊಸ ಹೊಸ ಬದಲಾವಣೆಗಳು ಕೂಡ ಗ್ರಹಗಳು ಹಾಗೂ ನಕ್ಷತ್ರ ಪುಂಜಗಳಲ್ಲಿ ನಡೆಯಲಿವೆ. ಇನ್ನು ಮಾರ್ಚ್ ತಿಂಗಳಲ್ಲಿ ಕೂಡ ಗ್ರಹಗಳ ನಡುವೆ ಬದಲಾವಣೆ ಕಂಡು ಬರಲಿದ್ದು ಅದರಿಂದಾಗಿ 12 ರಾಶಿಗಳ ಮೇಲೆ ಕೂಡ ಅದರ ಪರಿಣಾಮ ಬೀರಲಿದೆ. ಆದರೆ ವಿಶೇಷವಾಗಿ ಈ ನಾಲ್ಕು ರಾಶಿಯವರ ಮೇಲೆ ಅದೃಷ್ಟ ಪರಿಣಾಮಗಳು ಹೆಚ್ಚಾಗಿ ಬೀರಲಿವೆ. ಹಾಗಿದ್ರೆ ಆ ನಾಲ್ಕು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.

 ವೃಷಭ ರಾಶಿ (Taurus)

ಉದ್ಯೋಗ ಹಾಗೂ ವ್ಯಾಪಾರದಲ್ಲಿ ಮಾರ್ಚ್ ತಿಂಗಳಿನಲ್ಲಿ ವೃಷಭ ರಾಶಿಯವರು ಅವರಿಗೆ ತಿಳಿಯದಂತೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಲಾಭವನ್ನು ಗಳಿಸುತ್ತಾರೆ. ಮಾರ್ಚ್ ತಿಂಗಳಿನಲ್ಲಿ ವೃಷಭ ರಾಶಿಯವರಿಗೆ ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಲಾಭ ದೊರಕಲಿದೆ. ಹಣ ಗಳಿಕೆ ವಿಚಾರದಲ್ಲಿ ವೃಷಭ ರಾಶಿಯವರು ಮಾರ್ಚ್ ತಿಂಗಳಲ್ಲಿ ಸಂಪೂರ್ಣ ಲಾಭದಲ್ಲಿರುತ್ತಾರೆ. ವ್ಯಾಪಾರದ ವಿಚಾರದಲ್ಲಿ ಅವರು ಯಾವುದೇ ವ್ಯಾಪಾರ ಮಾಡಿದರು ಕೂಡ ಹಣ ಹರಿದು ಬರುತ್ತೆ. ಇನ್ನು ಇವರ ವಯಕ್ತಿಕ ಜೀವನದ ವಿಚಾರದ ಬಗ್ಗೆ ಮಾತನಾಡುವುದಾದರೆ ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ.

 ಮಿಥುನ ರಾಶಿ (Gemini)

ಮಾರ್ಚ್ ತಿಂಗಳು ಮಿಥುನ ರಾಶಿಯ ಉದ್ಯಮಿಗಳಿಗೆ ಸಾಕಷ್ಟು ಅದೃಷ್ಟದ ಸಮಯವಾಗಿದ್ದು ಕೈತುಂಬ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ವೈಯಕ್ತಿಕ ಜೀವನದಲ್ಲಿ ಕೂಡ ಸಾಕಷ್ಟು ಸಂತೋಷದ ಸಮಯಗಳನ್ನು ಕಳೆಯಲಿದ್ದೀರಿ. ಉದ್ಯೋಗದಲ್ಲಿ ಇರುವಂತಹ ಮಿಥುನ ರಾಶಿಯ ಜನರಿಗೆ ಸಂಬಳ ಹೆಚ್ಚಾಗಿ ಸಿಗಲಿದೆ. ಒಟ್ಟಾರೆಯಾಗಿ ಮಾರ್ಚ್ ತಿಂಗಳಲ್ಲಿ ಆರ್ಥಿಕ ಪರಿಸ್ಥಿತಿಯ ವಿಚಾರದ ಬಗ್ಗೆ ಮಿಥುನ ರಾಶಿಯವರು ತಲೆಕೆಡಿಸಿಕೊಳ್ಳಬೇಕಾದ ಯಾವುದೇ ಅಗತ್ಯ ಇರುವುದಿಲ್ಲ. ಮಾಡಿದ ಕೆಲಸಗಳೆಲ್ಲವೂ ಯಶಸ್ವಿಯಾಗುತ್ತವೆ.

 ಕನ್ಯಾ ರಾಶಿ (Virgo)

ಸರ್ಕಾರಿ ಕೆಲಸದಲ್ಲಿ ವರ್ಗಾವಣೆಯಾಗಿ ಕಾಯುತ್ತಿರುವ ಅಂತಹ ವ್ಯಕ್ತಿಗಳಿಗೆ ಈ ಸಂದರ್ಭದಲ್ಲಿ ಅವರಿಗೆ ಬೇಕಾಗಿರುವ ಸ್ಥಳಕ್ಕೆ ವರ್ಗಾವಣೆ ಸಿಗಲಿದೆ. ಹೊಸ ಕೆಲಸಕ್ಕಾಗಿ ಕಾಯುತ್ತಿರುವ ನಿರುದ್ಯೋಗಿಗಳಿಗೆ ಅವರ ಮನಸ್ಸಿಗೆ ಇಷ್ಟ ಆಗುವಂತಹ ಕೆಲಸ ಸಿಗಲಿದೆ. ಮಾಡುವಂತಹ ಕೆಲಸಕ್ಕೆ ನಾವು ಮಾಡುವಂತಹ ಕೆಲಸದ ಸ್ಥಳದಲ್ಲಿ ಹಾಗೂ ಸಮಾಜದಲ್ಲಿ ಪ್ರಶಂಸೆಯನ್ನು ಪಡೆದುಕೊಳ್ಳಲಿದ್ದಾರೆ ಹಾಗೂ ಗೌರವವನ್ನು ಕೂಡ ಸಂಪಾದನೆ ಮಾಡಲಿದ್ದಾರೆ. ತಮ್ಮ ಸಂಗಾತಿಯ ಜೊತೆಗೆ ಸಂಬಂಧವನ್ನು ಉತ್ತಮವಾಗಿ ನಿಭಾಯಿಸಿಕೊಂಡು ಹೋಗಲಿದ್ದಾರೆ.

 ಧನು ರಾಶಿ (Sagittarius)

ವಿದೇಶಕ್ಕೆ ಹೋಗಿ ಕೆಲಸ ಮಾಡಬೇಕು ಎನ್ನುವಂತಹ ಧನುರಾಶಿಯ ಜನರಿಗೆ ವಿದೇಶದಲ್ಲಿ ಕೂಡ ಕೆಲಸ ಮಾಡುವಂತಹ ಅವಕಾಶ ಹುಡುಕಿಕೊಂಡು ಬರಲಿದೆ. ವ್ಯಾಪಾರಸ್ಥರಿಗೆ ಉತ್ತಮವಾದ ವ್ಯಾಪಾರ ಹುಡುಕಿಕೊಂಡು ಬರಲಿದೆ ಹಾಗೂ ಉದ್ಯೋಗದಲ್ಲಿರುವವರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ. ನಿಮ್ಮ ಪ್ರೇಮ ಜೀವನಕ್ಕೆ ವಿಶೇಷವಾದ ತಿರುಗು ಸಿಗಲಿದೆ. ಅಂದ್ರೆ, ಒಂದು ವೇಳೆ ನಿಮ್ಮ ಪ್ರೇಮ ವಿವಾಹಕ್ಕೆ ಸಾಕಷ್ಟು ಸಮಯಗಳಿಂದ ನಿಮ್ಮ ಮನೆಯವರ ವಿರೋಧ ಇದ್ರೆ ಈ ಮಾರ್ಚ್ ತಿಂಗಳಲ್ಲಿ ಅದಕ್ಕೆ ಒಪ್ಪಿಗೆ ಸಿಗಲಿದೆ. ಈ ಮೂಲಕ ನೀವು ನಿಮ್ಮ ಕನಸಿನ ಜೀವನವನ್ನು ಪ್ರಾರಂಭ ಮಾಡಬಹುದಾಗಿದೆ.

Comments are closed.