Mylara Lingeshwara Karnika: ಮೈಲಾರಲಿಂಗನ ಕಾರ್ಣಿಕದ ಬಗ್ಗೆ ದೇವಸ್ಥಾನದ ಧರ್ಮದರ್ಶಿ ಅಪಸ್ವರ; ಇಷ್ಟು ವರ್ಷದ ಭಕ್ತರ ನಂಬಿಕೆಯೇ ಸುಳ್ಳಾ? ಕಾರ್ಣಿಕವೇ ಸುಳ್ಳಾ?

Mylara Lingeshwara Karnika: ಸ್ನೇಹಿತರ ಪ್ರತಿ ವರ್ಷ ಮೈಲಾರಲಿಂಗ ಕಾರ್ಣಿಕದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಲೇ ಇರುತ್ತದೆ. ಈ ಬಾರಿ ಕೂಡ ಗೊರವಯ್ಯ ರಾಮಪ್ಪ ಕಾರ್ಣಿಕ ಭವಿಷ್ಯ ನುಡಿದಿದ್ದಾರೆ ಆದರೆ ದೇವಸ್ಥಾನದ ಧರ್ಮದರ್ಶಿಗಳಾಗಿರುವಂತಹ ವೆಂಕಪ್ಪಯ್ಯ ಒಡೆಯರ್ ಅವರು ಇದನ್ನು ಸುಳ್ಳು ಎಂಬುದಾಗಿ ಅಪಸ್ವರ ನುಡಿದಿರುವುದು ಈಗ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಗೊರವಯ್ಯ ರಾಮಪ್ಪ ಕಾರ್ಣಿಕ ಈ ಬಾರಿ ಮಳೆ ಬೆಳೆ ಸಂಪಾಗುತ್ತದೆ ರೈತರಿಗೆ ಒಳ್ಳೇದಾಗುತ್ತೆ ಅನ್ನೋದಾಗಿ ಭವಿಷ್ಯ ನಡೆದಿದ್ದಾರೆ. ಆದರೆ ಈಗ ಗೊರವಯ್ಯ ರಾಮಪ್ಪ ಅವರ ವಿರುದ್ಧ ದೇವಸ್ಥಾನದ ಧರ್ಮದರ್ಶಿಗಳಾಗಿರುವಂತಹ ವೆಂಕಪ್ಪಯ್ಯ ತಿರುಗಿ ಬಿದ್ದಿದ್ದಾರೆ ಎಂದು ಹೇಳಬಹುದಾಗಿತ್ತು ಇವರಿಬ್ಬರ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ ಎನ್ನುವುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವಂತಹ ದೇವಸ್ಥಾನದ ಧರ್ಮದರ್ಶಿಗಳು ಗುರು ಪೀಠದ ನಿಯಮಗಳನ್ನು ಗೌರವಯ್ಯ ಉಲ್ಲಂಘಿಸಿದ್ದಾರೆ ಎಂಬುದಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಮೂಲಕ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಮುಕ್ತವಾಗಿಯೇ ಬಹಿರಂಗವಾಗಿ ಕಾಣುತ್ತಿದೆ.

ಜಿಲ್ಲಾಧಿಕಾರಿಗಳು ಹಾಗೂ ದೇವರನ್ನು ನಂಬುವಂತಹ ಭಕ್ತಾಭಿಮಾನಿಗಳು ಗೌರವಯ್ಯ ರಾಮಪ್ಪ ಅವರ ವಿರುದ್ಧ ಕ್ರಮವನ್ನು ಕೈ ತೆಗೆದುಕೊಳ್ಳಬೇಕು ಎಂಬುದಾಗಿ ದೇವಸ್ಥಾನದ ಧರ್ಮದರ್ಶಿಗಳಾಗಿರುವಂತಹ ವೆಂಕಪ್ಪಯ್ಯ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇದು ದೇವರ ವಾಣಿ ಅಲ್ಲ ಅವರ ವೈಯಕ್ತಿಕ ಅಭಿಪ್ರಾಯ ನಂಬೋದು ಬಿಡೋದು ನಿಮಗೆ ಬಿಟ್ಟಿದ್ದು ಅನ್ನೋದಾಗಿ ಹೇಳಿದ್ದಾರೆ.

ಈ ಬಾರಿಯ ಕಾರ್ಣಿಕ ನುಡಿಯ ಬಗ್ಗೆ ನಾನೇನು ಮಾತನಾಡುವುದಿಲ್ಲ ಆದರೆ ಮುಂದಿನ ದಿನಗಳಲ್ಲಿ ಭಕ್ತರಿಗೆ ಕಾರ್ಣಿಕ ನುಡಿಯನ್ನು ನಂಬುವುದು ಬಿಡುವುದು ಎನ್ನುವ ಗೊಂದಲ ಉಂಟಾಗುತ್ತದೆ ಎಂಬುದಾಗಿ ವೆಂಕಪ್ಪಯ್ಯ ಮಾತನಾಡಿದ್ದಾರೆ. ದೇವಸ್ಥಾನದ ನಿಯಮಗಳನ್ನು ಅನುಸರಿಸಿದರೆ ಮಾತ್ರ ಕಾರ್ಣಿಕಗಳನ್ನು ನುಡಿಯಲು ಸಾಧ್ಯ ಆದರೆ ಯಾರ ಆಜ್ಞೆಯಂತೆ ಇವರು ಕಾರ್ಣಿಕ ನುಡಿಯುತ್ತಿದ್ದಾರೆ ಗೊತ್ತಿಲ್ಲ ಅನ್ನೋ ರೀತಿಯಲ್ಲಿ ಕೂಡ ಮಾತನಾಡಿದ್ದಾರೆ.

ಇದರ ವಿರುದ್ಧವಾಗಿ ಸರ್ಕಾರಿ ದತ್ತಿ ಇಲಾಖೆ ಹಾಗು ಜಿಲ್ಲಾಧಿಕಾರಿಗಳು ಸರಿಯಾದ ರೀತಿಯಲ್ಲಿ ಕ್ರಮವನ್ನು ಕೈ ತೆಗೆದುಕೊಳ್ಳಬೇಕು ಎಂಬುದಾಗಿ ದೇವಸ್ಥಾನದ ಧರ್ಮದರ್ಶಿಗಳಾಗಿರುವ ವೆಂಕಪ್ಪಯ್ಯ ಅವರು ಆಗ್ರಹಿಸಿದ್ದಾರೆ. ವೈಯಕ್ತಿಕವಾಗಿ ಯಾವುದೇ ರೀತಿಯ ಹಾಗೆ ಅಥವಾ ಸಮಸ್ಯೆ ಇದ್ದರೂ ಕೂಡ ಭಕ್ತರ ಮುಂದೆ ಈ ರೀತಿ ಮಾಡಬಾರದು ಎಂಬುದಾಗಿ ಅವರು ಈ ಬಾರಿಯ ಕಾರ್ಣಿಕದ ಬಗ್ಗೆ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಚಾರದ ವಿರುದ್ಧವಾಗಿ ಕಾನೂನಾತ್ಮಕ ಹೋರಾಟವನ್ನು ಮುಂದುವರಿಸಲಿದ್ದೇವೆ ಎನ್ನುವಂತಹ ಭರವಸೆಯನ್ನು ಕೂಡ ವೆಂಕಪ್ಪಯ್ಯ ಒಡೆಯರ್ ಬಹಿರಂಗಪಡಿಸಿದ್ದಾರೆ.

ಒಟ್ಟಾರೆಯಾಗಿ ಗೌರವಯ್ಯ ರಾಮಪ್ಪ ನುಡಿದಿರುವಂತಹ ಕಾರ್ಣಿಕದ ಬಗ್ಗೆ ಆಗುವವರು ಗುರುಪೀಠದ ನಿಯಮಗಳನ್ನು ಮುರಿದಿದ್ದಾರೆ ಅನ್ನುವುದರ ಬಗ್ಗೆ ಧರ್ಮದರ್ಶಿಗಳಾಗಿರುವಂತಹ ವೆಂಕಪ್ಪಯ್ಯ ಒಡೆಯರ್ ಅವರಿಗೆ ಸಂಪೂರ್ಣವಾದ ಅಸಮಾಧಾನವಿದ್ದು, ಭಕ್ತರ ನಂಬಿಕೆಯನ್ನು ಗೌರವಯ್ಯ ಮುರಿದಿದ್ದಾರೆ ಅನ್ನುವುದರ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನಾತ್ಮಕ ಹೋರಾಟವನ್ನು ನಡೆಸುವಂತಹ ಎಚ್ಚರಿಕೆಯನ್ನು ಈ ಮೂಲಕ ನೀಡಿದ್ದಾರೆ ಎಂದು ಹೇಳಬಹುದಾಗಿದೆ.

Comments are closed.