RBI Rules: ಸಾಲ ತೀರಿಸದೇ ಬಾಕಿ ಇದ್ದವರೂ ಈಗ ನೆಮ್ಮದಿಯಿಂದ ಉಸಿರಾಡಿಸಬಹುದು; ಸಾಲಗಾರರಿಗೆ ಬಿಗ್ ರಿಲೀಫ್ ಕೊಟ್ಟ RBI!

RBI Rules: ಒಂದಲ್ಲ ಒಂದು ಕಾರಣಕ್ಕಾಗಿ ನಾವು ಬ್ಯಾಂಕಿನ ಬಳಿ ಹಣವನ್ನು ಸಾಲವನ್ನು ನಮ್ಮ ಜೀವನದ ಕಾಲದಲ್ಲಿ ಖಂಡಿತವಾಗಿ ಪಡೆದುಕೊಳ್ಳುತ್ತೇವೆ. ಆದರೆ ಸರಿಯಾದ ಸಮಯದಲ್ಲಿ ತೀರಿಸುವುದು ನಮ್ಮ ಜವಾಬ್ದಾರಿ ಆಗಿರುತ್ತದೆ. ಆದರೆ ಸಾಕಷ್ಟು ಜನರು ಬೇರೆ ಬೇರೆ ಕಾರಣಗಳಿಂದಾಗಿ ಹಣವನ್ನು ಸರಿಯಾದ ಸಂದರ್ಭದಲ್ಲಿ ಮರುಪಾವತಿ ಮಾಡುವುದಕ್ಕೆ ಸಾಧ್ಯವಾಗಿರುವುದಿಲ್ಲ.

ಉದಾಹರಣೆಗೆ ಗೃಹ ಸಾಲವನ್ನು ತೆಗೆದುಕೊಂಡರೆ ಅದು ದೀರ್ಘಕಾಲದ ಸಾಲವಾಗಿರುತ್ತದೆ ಹೀಗಾಗಿ ಅದನ್ನು ಅದು ಸರಿಯಾದ ಸಮಯದಲ್ಲಿ ಕಟ್ಟದೆ ಹೋದಲ್ಲಿ ಆತನನ್ನು ಡೀಫಾಲ್ಟರ್ ಅಂದರೆ ಸುಸ್ತಿದಾರ ಎಂಬುದಾಗಿ ಘೋಷಿಸಲಾಗುತ್ತದೆ. ಕಾನೂನಾತ್ಮಕವಾಗಿ ಈ ಸಂದರ್ಭದಲ್ಲಿ ಬ್ಯಾಂಕ್ ಅವರ ಆಸ್ತಿಯನ್ನು ತನ್ನ ಕಬ್ಜಾಗೆ ತೆಗೆದುಕೊಳ್ಳುತ್ತದೆ.

ಸೋಶಿಯಲ್ ಮಿಡಿಯಾದಲ್ಲಿ ಡಿ ಬಾಸ್ ಜೊತೆಗೆ ಇರುವ ಪೋಟೋ ಹಂಚಿಕೊಂಡು ಸುದ್ದಿ ಮಾಡಿದ್ದ ಪವಿತ್ರ ಗೌಡ ಅವರ ಮೊದಲ ಗಂಡ ಯಾರು ಗೊತ್ತಾ? ಇಲ್ಲಿದೆ ಅಸಲಿ 18ರ ಮದುವೆ ಕಥೆ!

ಸರಿಯಾದ ಸಮಯದಲ್ಲಿ ಸಾಲದ ಹಣವನ್ನು ಮರುಪಾವತಿ ಮಾಡದೆ ಹೋದಲ್ಲಿ ಆತನ ಆಸ್ತಿಯನ್ನು ಬ್ಯಾಂಕ್ ಕಬ್ಜಾ ಮಾಡಿಕೊಳ್ಳುತ್ತದೆ ಆದರೆ ಆ ಸಂದರ್ಭದಲ್ಲಿ ಕೂಡ ಆ ಡೀಫಾಲ್ಟಾರ್ ಗೆ ಕೆಲವೊಂದು ಹಕ್ಕುಗಳು ಇರುತ್ತದೆ. ಬ್ಯಾಂಕುಗಳು ಮೊದಲ ಎರಡು ಕಂತುಗಳನ್ನು ನೀವು ಕಟ್ಟದೆ ಹೋದಲ್ಲಿ ನಿಮಗೆ ರಿಮೈಂಡರ್ ನೋಟಿಸ್ ಅನ್ನು ಕಳಿಸುತ್ತದೆ.

ಮೂರನೇ ಕಂತನ್ನು ಕೂಡ ಕಟ್ಟಿದೆ ಹೋದಲ್ಲಿ ಎಚ್ಚರಿಕೆಯ ಲೀಗಲ್ ನೋಟಿಸ್ ಕಳಿಸುತ್ತದೆ. ಇದಾದ ನಂತರವೂ ಕೂಡ ನೀವು ಕಂತನ್ನು ಕಟ್ಟದೆ ಹೋದಲ್ಲಿ ಆಗ ಬ್ಯಾಂಕ್ ನಿಮ್ಮನ್ನು ಡೀಫಾಲ್ಟರ್ ಎಂಬುದಾಗಿ ಘೋಷಿಸುತ್ತದೆ. ಈ ಸಂದರ್ಭದಲ್ಲಿ ಆ ಡೀಫಾಲ್ಟರ್ ಬಳಿ ಇರುವಂತಹ ನಾಲ್ಕು ಪ್ರಮುಖ ಹಕ್ಕುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

 ಡಿಫಾಲ್ಟರ್ ಬಳಿ ಇರುವ ನಾಲ್ಕು ಹಕ್ಕುಗಳು

1. ಸಾಲವನ್ನು ಒಂದು ವೇಳೆ ಸಾಲವನ್ನು ಪಡೆದುಕೊಂಡಿರುವ ವ್ಯಕ್ತಿ ಸರಿಯಾಗಿ ಕಟ್ಟದೆ ಹೋದಲ್ಲಿ ಬ್ಯಾಂಕಿನವರು ಅದನ್ನು ವಸೂಲು ಮಾಡಲು ಏಜೆಂಟರನ್ನು ಬಳಸಿಕೊಳ್ಳಬಹುದಾದರೆ ಏಜೆಂಟರು ಯಾವುದೇ ಕಾರಣಕ್ಕೂ ಸಾಲವನ್ನು ಪಡೆದುಕೊಂಡಿರುವಂತಹ ಸಾಲಗಾರರನ್ನು ಬೆದರಿಸುವಂತಹ ಕೆಲಸವನ್ನು ಮಾಡುವ ಹಾಗಿಲ್ಲ. ಯಾವುದೇ ರೀತಿಯಾಗಿ ಕೆಟ್ಟ ರೀತಿಯಲ್ಲಿ ಗ್ರಾಹಕರ ಜೊತೆಗೆ ರಿಕವರಿ ಏಜೆಂಟ್ ಗಳು ವರ್ತನೆ ಮಾಡುವ ಹಾಗಿಲ್ಲ. ಇದರ ವಿರುದ್ಧವಾಗಿ ಬ್ಯಾಂಕಿನಲ್ಲಿ ಗ್ರಾಹಕರು ದೂರನ್ನು ಕೂಡ ಸಲ್ಲಿಸಬಹುದಾಗಿದೆ.

2. ನೀವು ಸಾಲ ಕಟ್ಟಿಲ್ಲ ಎಂದು ಮಾತ್ರಕ್ಕೆ ನೇರವಾಗಿ ಬ್ಯಾಂಕ್ ನಿಮ್ಮ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಕಟ್ಟ ಬೇಕಾಗಿರುವ ಕಂತನ್ನು 90 ದಿನಗಳ ವರೆಗೆ ಅಂದರೆ ಮೂರು ತಿಂಗಳವರೆಗೆ ಸಾಲಗಾರ ಕಟ್ಟದೆ ಹೋದಲ್ಲಿ ಮಾತ್ರ ಬ್ಯಾಂಕಿಗೆ ಈ ಅಧಿಕಾರ ಬರುತ್ತದೆ. ಮೂರು ತಿಂಗಳ ನಂತರ ಈ ಆಸ್ತಿಯನ್ನು NPA ಎಂಬುದಾಗಿ ಘೋಷಿಸಲಾಗುತ್ತದೆ. ಅದಾದ ನಂತರ ಎರಡು ತಿಂಗಳ ನೋಟಿಸ್ ಅನ್ನು ಸಾಲಗಾರನಿಗೆ ನೀಡಲಾಗುತ್ತದೆ. ಆ ಸಂದರ್ಭದಲ್ಲಿ ಕೂಡ ಆತ ಕಟ್ಟದೆ ಹೋದಲ್ಲಿ ಅದನ್ನು ಸಾರ್ವಜನಿಕ ಹರಾಜಿಗೆ ಇರಿಸಲಾಗುತ್ತದೆ ಹಾಗೂ ಅದಕ್ಕಿಂತ ಮುಂಚೆ 30 ದಿನಗಳ ನೋಟಿಸ್ ಅನ್ನು ಸಾಲಗಾರನಿಗೆ ಬ್ಯಾಂಕ್ ಕಳಿಸಬೇಕಾಗಿರುತ್ತದೆ.

3. ನೀವು ಸಾಲ ಪಡೆದುಕೊಂಡಿರುವಂತಹ ಹಣಕಾಸು ಸಂಸ್ಥೆ ನಿಮ್ಮ ಆಸ್ತಿಯನ್ನು ಕಬ್ಜಾ ಮಾಡಿಕೊಂಡು ಅದನ್ನು ಹರಾಜು ಪ್ರಕ್ರಿಯೆಗೆ ಇರಿಸುವ ಸಂದರ್ಭದಲ್ಲಿ ಅದರ ಸರಿಯಾದ ಬೆಲೆಯನ್ನು ಇರಿಸಿಲ್ಲ ಎಂದಾದಲ್ಲಿ ಅದನ್ನು ಪ್ರಶ್ನಿಸುವಂತಹ ಹಕ್ಕು ನಿಮಗೆ ಇರುತ್ತದೆ. ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸುವುದಕ್ಕಿಂತ ಮುಂಚೆ ಯಾವಾಗ ಪ್ರಾರಂಭಿಸುತ್ತಾರೆ ಎನ್ನುವುದನ್ನು ದಿನಾಂಕದ ಮೂಲಕ ನಮೂದಿಸುವುದು ಕೂಡ ಪ್ರಮುಖವಾಗಿರುತ್ತದೆ.

4. ಹರಾಜು ಮಾಡಿದ ನಂತರ ಒಂದು ವೇಳೆ ನಿಮ್ಮ ಸಾಲದ ಮೊತ್ತಕ್ಕಿಂತ ಹೆಚ್ಚಿನ ಹಣಕ್ಕೆ ಆಸ್ತಿಯನ್ನು ಮಾರಾಟ ಮಾಡಿ ಉಳಿದ ಹಣವನ್ನು ನೀವು ಪಡೆದುಕೊಳ್ಳುವ ಹಕ್ಕನ್ನು ಕೂಡ ಹೊಂದಿರುತ್ತೀರಿ.

Comments are closed.