Health tips: ಚಿಕ್ಕ ಸಮಸ್ಯೆಗೂ ಪ್ಯಾರಸಿಟಮಾಲ್ ಮಾತ್ರೆಯನ್ನು ನುಂಗುವ ಅಭ್ಯಾಸ ಮಾಡಿಕೊಂದು ಬಿಟ್ಟಿದ್ದೀರಾ? ಹಾಗಾದ್ರೆ ಏನಾಗಬಹುದು ಮುಂದೆ ಗೊತ್ತೇ?

Health tips: ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಯಾವುದೇ ರೀತಿಯ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದರು ಕೂಡ ಪ್ರಥಮವಾಗಿ ನುಂಗುವಂತಹ ಮಾತ್ರೆ ಎಂದರೆ ಅದು ಪ್ಯಾರಾಸಿಟಮಾಲ್. ಜ್ವರ ಬಂದ್ರು ಅದೇ ಮಾತ್ರೆ, ಹಲ್ಲು ನೋವು ಇದ್ರು ಅದೇ ಮಾತ್ರೆ ಯಾವುದೇ ಆರೋಗ್ಯ ಸಮಸ್ಯೆ ಬಂದರೂ ಕೂಡ ಅದೇ ಮಾತ್ರೆಯನ್ನು ನುಂಗುತ್ತಾರೆ.

ಆದರೆ ಇದರ ಪದೇ ಪದೇ ಸೇವನೆ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಹಾನಿಯಾಗುತ್ತದೆ ಅನ್ನೋದು ಸಾಕಷ್ಟು ಜನರಿಗೆ ತಿಳಿದಿಲ್ಲ ಎಂದು ಹೇಳಬಹುದು. ಈ ವಿಚಾರದ ಬಗ್ಗೆ ಇಂದಿನ ಜನರಲ್ಲಿ ಜಾಗೃತಿಯನ್ನು ಮೂಡಿಸುವುದಕ್ಕಾಗಿಯೇ ಈ ಆರ್ಟಿಕಲ್ ನಲ್ಲಿ ಕೆಲವೊಂದು ಪ್ರಮುಖ ವಿಚಾರಗಳನ್ನು ಹೇಳುತ್ತಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ಹಾಗೂ ನಿಮ್ಮವರೊಂದಿಗೆ ಶೇರ್ ಮಾಡಿ.

 ಪ್ಯಾರಾಸಿಟಮೊಲ್ ಮಾತ್ರೆಯನ್ನು ಹೆಚ್ಚಾಗಿ ನುಂಗಿದ್ರೆ ಏನಾಗುತ್ತೆ?

ವೈದ್ಯರ ಸಲಹೆ ಇಲ್ಲದೆ ನಿಯಮಿತವಾಗಿ ನೀವು ಪ್ಯಾರಾಸಿಟಮಾಲ್ ಮಾತ್ರೆಯನ್ನು ನುಂಗಿದ್ರೆ ಯಕೃತ್ ಸಮಸ್ಯೆ ಕಂಡು ಬರುತ್ತದೆ ಎನ್ನುವುದಾಗಿ ಯಡಿನ್ಬರ್ಗ್ ವಿಶ್ವವಿದ್ಯಾನಿಲಯದ ಅಧ್ಯಯನಕಾರರು ಇತ್ತೀಚಿಗಷ್ಟೇ ನಡೆದಿರುವಂತಹ ಅಧ್ಯಯನದ ಮೂಲಕ ಹೇಳಿದ್ದಾರೆ. ಇದು ಕೇವಲ ಅಡ್ಡ ಪರಿಣಾಮ ಮಾತ್ರ ಅಲ್ಲ ಕೆಲವೊಮ್ಮೆ ಈ ಸೈಡ್ ಎಫೆಕ್ಟ್ ಪರ್ಮನೆಂಟ್ ಕೂಡ ಆಗಬಹುದು ಎಂಬುದಾಗಿ ಹೇಳಿದ್ದಾರೆ. ಲಾಕ್ಡೌನ್ ನಂತರ ಪ್ಯಾರಾಸಿಟಮಾಲ್ ಮಾತ್ರೆಯನ್ನು ಬಳಸುವವರ ಸಂಖ್ಯೆ ನಮ್ಮ ಭಾರತ ದೇಶದಲ್ಲಿ ಹೆಚ್ಚಾಗಿದೆ. ದೇಹದಲ್ಲಿರುವಂತಹ ಸಾಕಷ್ಟು ಆರೋಗ್ಯವಂತ ಕೋಶಗಳನ್ನು ಹಾಳು ಮಾಡುವುದು ಮಾತ್ರವಲ್ಲದೆ ಯಕೃತ್ ಅನ್ನು ಹಾಳು ಗೆಡವುವ ಕೆಲಸವನ್ನು ಮಾಡುತ್ತದೆ. ಅಂಗಾಂಗ ವೈಫಲ್ಯ ಆಗುವಂತಹ ಸಾಧ್ಯತೆ ಹೆಚ್ಚಾಗಿದೆ.

ಅಧ್ಯಯನ ಸ್ಪಷ್ಟಪಡಿಸುವಂತಹ ಮಾಹಿತಿಗಳ ಪ್ರಕಾರ ಇದು ಅಂಗಾಂಗಗಳ ನಡುವಿನ ಗೋಡೆಯನ್ನು ಕ್ರಮೇಣವಾಗಿ ಸಂಪರ್ಕ ಕಳೆದುಕೊಳ್ಳುವಂತೆ ಮಾಡುತ್ತದೆ. ಇದೇ ರೀತಿ ಕ್ರಮೇಣವಾಗಿ ಹಾನಿಗೆ ಒಳಗಾದಂತಹ ಅಂಗಾಂಗ ಸಂಪೂರ್ಣವಾಗಿ ವೈಫಲ್ಯಕ್ಕೆ ಒಳಗಾಗಿ ಮರಣ ಸಂಭವಿಸುವ ಸಾಧ್ಯತೆ ಇರುತ್ತದೆ.

ಇಷ್ಟು ದಿನ ನಾವು ಈ ಮಾತ್ರೆಯನ್ನು ತೆಗೆದುಕೊಂಡು ಇನ್ನೂ ಕೂಡ ಬದುಕಿದ್ದೇವೆ ಎನ್ನುವುದಾಗಿ ನೀವು ಪ್ರಶ್ನಿಸುವುದಕ್ಕೆ ಹೊರಟ್ರೆ, ಅದಕ್ಕೂ ಕೂಡ ನಮ್ಮ ಬಳಿ ಉತ್ತರವಿದೆ. ಅಧ್ಯಯನ ಹೇಳುವ ಪ್ರಕಾರ ವೈದ್ಯರು ಹೇಳುವಷ್ಟು ಹಾಗೂ ಹೇಳಿರುವ ರೀತಿಯಲ್ಲಿ ನೀವು ಈ ಮಾತ್ರೆಯನ್ನು ತೆಗೆದುಕೊಂಡಿದ್ದರೆ ಯಾವುದೇ ಅಪಾಯವಿರುವುದಿಲ್ಲ. ಕೆಲವೊಂದು ನಿರ್ದಿಷ್ಟ ಮಿತಿಯನ್ನು ಮೀರಿ ನೀವು ಸೇವಿಸಿದರೆ ಯಕೃತ್ ಅನ್ನು ಕಳೆದುಕೊಳ್ಳುವುದಕ್ಕೆ ಹೆಚ್ಚಿನ ಸಮಯ ಬೇಕಾಗಿರುವುದಿಲ್ಲ.

 ಸುರಕ್ಷಿತವಾಗಿ ಬಳಸಿ

ಪ್ರತಿಯೊಬ್ಬರು ಕೂಡ ಯಾವುದೇ ರೀತಿ ಆರೋಗ್ಯ ಸಮಸ್ಯೆ ಬಂದಾಕ್ಷಣ ಈ ರೀತಿ ಮಾತ್ರೆಗಳನ್ನು ವೈದ್ಯರಿಗೂ ತಿಳಿಸದಂತೆ ಅಥವಾ ವೈದ್ಯರ ಸಲಹೆ ಪಡೆಯದೆ ತಾವೇ ನುಂಗಿದರಾಯ್ತು ಎನ್ನುವುದಾಗಿ ಸೇವಿಸುತ್ತಾರೆ. ಮುಂದಾದರೂ ಈ ರೀತಿ ಔಷಧಿಗಳನ್ನು ಅಥವಾ ಮಾತ್ರೆಗಳನ್ನು ಸೇವಿಸುವಾಗ ಸರಿಯಾದ ಸಲಹೆಯ ಮೂಲಕ ಸರಿಯಾದ ರೀತಿಯಲ್ಲಿ ಸೇವಿಸುವ ಕ್ರಮವನ್ನು ಕೈಗೊಳ್ಳಿ ಅನ್ನೋದಾಗಿ ಅಧ್ಯಯನ ನಡೆಸಿರುವಂತಹ ಅಧ್ಯಯನಕಾರರು ತಿಳಿಸಿದ್ದಾರೆ. ಹೀಗಾಗಿ ಇನ್ನು ಮುಂದಿನ ದಿನಗಳಲ್ಲಿ ಪ್ಯಾರಾಸಿಟಮಾಲ್ ಮಾತ್ರೆಯನ್ನು ಸೇವಿಸುವಂತಹ ಅದರಲ್ಲೂ ವಿಶೇಷವಾಗಿ ವೈದ್ಯರ ಸಲಹೆ ಇಲ್ಲದೆ ಸೇವಿಸುವಂತಹ ವ್ಯಕ್ತಿಗಳು ಅದರಿಂದ ಉಂಟಾಗುವಂತಹ ಯಕೃತ್ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳಬೇಕು.

Comments are closed.