Rashmika Mandanna: ರಶ್ಮಿಕಾ ಮದುವೆಯಾಗುವ ಹುಡುಗ ಹೇಗಿರಬೇಕಂತೆ ಗೊತ್ತೇ? ಯಪ್ಪಾ ದೇವ್ರೇ ಹಿಂಗೆಲ್ಲಾ ಇರುತ್ತಾ.

Rashmika Mandanna: ಸ್ನೇಹಿತರೆ ರಶ್ಮಿಕ ಮಂದಣ್ಣ (Rashmika Mandanna) ನಟಿಸಿರುವಂತಹ ಅನಿಮಲ್ ಸಿನಿಮಾದ ಮೂಲಕ ಅವರು ಈಗಾಗಲೇ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ ಹಾಗೂ ಇದೇ ವರ್ಷ ಅವರ ಪುಷ್ಪ -2 ಸಿನಿಮಾ ಕೂಡ ಬಿಡುಗಡೆಯಾಗಲಿದ್ದು ಇದು ಕೂಡ ಅವರ ಬೇಡಿಕೆಯನ್ನು ಭಾರತೀಯ ಚಿತ್ರರಂಗದಲ್ಲಿ ಇನ್ನಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯದ ಮಟ್ಟಿಗೆ ರಶ್ಮಿಕ ಮಂದಣ್ಣ ಅವರ ಕೈಯಲ್ಲಿ ಕೈತುಂಬ ಸಿನಿಮಾಗಳ ಅವಕಾಶಗಳು ಕೂಡ ಇವೆ. ಸದ್ಯದ ಮಟ್ಟಿಗೆ ಅವರು ಟ್ವಿಟರ್ ನಲ್ಲಿ ಮಾಡಿರುವಂತಹ ಒಂದು ಟ್ವೀಟ್ ವೈರಲ್ ಆಗುತ್ತಿದ್ದು ಅದರ ಬಗ್ಗೆ ಮಾತನಾಡೋಣ ಬನ್ನಿ.

ರಶ್ಮಿಕ ಮಂದಣ್ಣ ಅವರ ದೆಹಲಿ ಅಭಿಮಾನಿಗಳು ಟ್ವಿಟರ್ ನಲ್ಲಿ ರಶ್ಮಿಕ ಮಂದಣ್ಣ ಅವರಿಗೆ ನಿಮ್ಮ ಮದುವೆಯಾಗುವ ಗಂಡು ಯಾವ ರೀತಿ ಇರಬೇಕು ಎಂಬುದಾಗಿ ಪ್ರಶ್ನೆ ಕೇಳಿದ್ದಾರೆ. ಅವರು VD ತರ ಅಂದ್ರೆ Very Daring ಅಂದ್ರೆ ತುಂಬಾ ಧೈರ್ಯಶಾಲಿ ಆಗಿರಬೇಕು ಅನ್ನೋದಾಗಿ ಹೇಳಿಕೊಂಡಿದ್ದಾರೆ. ರಶ್ಮಿಕ ಅವರನ್ನು ರಾಣಿಯಂತೆ ನೋಡಿಕೊಳ್ಳಬೇಕು. ಈ ಎಲ್ಲ ಗುಣಗಳನ್ನು ಹೊಂದಿರಬೇಕು ಅನ್ನುವುದಾಗಿ ರಶ್ಮಿಕ ಮಂದಣ್ಣ ಅವರ ದೆಹಲಿಯ ಅಭಿಮಾನಿಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದು ಈಗ ರಶ್ಮಿಕ ಮಂದಣ್ಣ ಅವರ ಗಮನಕ್ಕೆ ಕೂಡ ಬಂದಿದೆ.

ಎಲ್ಲದಕ್ಕಿಂತ ಪ್ರಮುಖವಾಗಿ ಈ ಟ್ವೀಟ್ ಅಷ್ಟೊಂದು ದೊಡ್ಡ ಮಟ್ಟದಲ್ಲಿ ವೈರಲ್ ಆಗ್ತಿರೋದಕ್ಕೆ ಮತ್ತೊಂದು ಕಾರಣ ಅಂದ್ರೆ ಈ ಪೋಸ್ಟ್ ನಲ್ಲಿ ರಶ್ಮಿಕ ಮಂದಣ್ಣ ಅವರನ್ನು ಮದುವೆಯಾಗುವ ಗಂಡು VD ತರ ಇರಬೇಕು ಅನ್ನೋದಾಗಿ ಬರೆದುಕೊಳ್ಳಲಾಗಿದ್ದು ಭಾರತೀಯ ಚಿತ್ರರಂಗದಲ್ಲಿ VD ಅಂತ ಕರೆಯೋದು ವಿಜಯ್ ದೇವರಕೊಂಡ ಅವರನ್ನ‌.

ಇವರಿಬ್ಬರ ಮಧ್ಯ ಸಾಕಷ್ಟು ಸಮಯ ಪ್ರೀತಿ ಇದೆ ಇವರಿಬ್ಬರೂ ಮದುವೆ ಆಗ್ತಾರೆ ಅನ್ನೋದಾಗಿ ಸುದ್ದಿ ಆಗಿದ್ದರೂ ಕೂಡ ಇಬ್ಬರೂ ಕೂಡ ತಾವು ಇಬ್ಬರೂ ಒಳ್ಳೆಯ ಸ್ನೇಹಿತರು ಮಾತ್ರ ಅನ್ನೋದಾಗಿ ಸುದ್ದಿಯನ್ನು ದೂರ ತಳ್ಳಿಕೊಂಡು ಬರುತ್ತಲೇ ಇದ್ದಾರೆ. ಇನ್ನು ರಶ್ಮಿಕ ಮಂದಣ್ಣ ಅವರ ದೆಹಲಿಯ ಅಭಿಮಾನಿಗಳು ಮಾಡಿರುವಂತಹ ಈ ಪೋಸ್ಟ್ ಕೆಳಗೆ ರಶ್ಮಿಕ ಮಂದಣ್ಣ ನಿಜ ಅನ್ನೋದಾಗಿ ಕೂಡ ಕಾಮೆಂಟ್ ಮಾಡಿದ್ದಾರೆ. ಒಂದು ರೀತಿಯಲ್ಲಿ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಕಾಮೆಂಟ್ ಮಾಡಿದ್ದಾರೆ ಅಂತ ಹೇಳಬಹುದು.

ಸಾಕಷ್ಟು ಸಂದರ್ಭದಲ್ಲಿ ಇವರಿಬ್ಬರು ಜೊತೆಯಾಗಿ ತಿರುಗಾಡುವುದು ಹಾಗೂ ರೆಸ್ಟೋರೆಂಟ್ ಗಳಲ್ಲಿ ಡಿನ್ನರ್ ಡೇಟ್ ಗಳಲ್ಲಿ ಕಾಣಿಸಿಕೊಂಡಿರುವಂತಹ ಫೋಟೋಗಳು ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾವೆ. ಹೇಗಿದ್ದರೂ ಕೂಡ ಇಬ್ಬರು ಪರಸ್ಪರ ಡೇಟ್ ಮಾಡುತ್ತಿರುವಂತಹ ವಿಚಾರವನ್ನು ಎಲ್ಲೂ ಕೂಡ ಬಿಟ್ಟು ಕೊಟ್ಟಿಲ್ಲ. ನಂದಮೂರಿ ಬಾಲಕೃಷ್ಣ ಅವರ ಶೋ ನಲ್ಲಿ ಕೂಡ ಅನಿಮಲ್ ಸಿನಿಮಾ ಪ್ರಮೋಷನ್ ಮಾಡುತ್ತಿದ್ದ ಸಂದರ್ಭದಲ್ಲಿ ಇದನ್ನ ಕೇಳಲಾಗಿದ್ದರೂ ಕೂಡ ಅಲ್ಲಿ ಕೂಡ ರಶ್ಮಿಕ ಮಂದಣ್ಣ ಜಾಣ ಮೌನವನ್ನು ತಾಳಿದ್ರು.

Comments are closed.