Serial: ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಮಸ್ತ್ ಆಟ- ಶ್ರೇಷ್ಠಗೆ ಇನ್ನಾದರೂ ಬುದ್ದಿ ಬರುತ್ತಾ? ಕೊನೆಗೆ ಏನಾಯ್ತು ಗೊತ್ತೇ?

Serial: ಸ್ನೇಹಿತರ ಕಿರುತೆರೆಯಲ್ಲಿ ಧಾರವಾಹಿ ನೋಡುವವರ ಸಂಖ್ಯೆ ಹೆಚ್ಚಾಗಿದ್ದು ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಭಾಗ್ಯಲಕ್ಷ್ಮಿ ಧಾರವಾಹಿ ಸಾಕಷ್ಟು ರೋಚಕ ಟ್ವಿಸ್ಟ್ ಹಾಗೂ ಟರ್ನ್ ಗಳ ಮೂಲಕ ಪ್ರೇಕ್ಷಕರ ಹಾಟ್ ಫೇವರೆಟ್ ಆಗಿದೆ. ಸದ್ಯಕ್ಕೆ ಧಾರವಾಹಿಯಲ್ಲಿ ಭಾಗ್ಯ ತಾಂಡವ್ ಮೇಲೆ ಜೀವಾನೇ ಇಟ್ಟುಕೊಂಡಿದ್ರು ತಾಂಡವ್ ಗೆ ಭಾಗ್ಯ ಮೇಲೆ ಯಾವುದೇ ಪ್ರೀತಿ ಇಲ್ಲ. ಆತನಿಗೆ ಮಕ್ಕಳ ಮೇಲೆ ಮಾತ್ರ ಪ್ರೀತಿಯಿದ್ದು, ಆಗಾಗ ತಾಂಡವ್ ಮನೆಗೆ ಆತ ಅವಮಾನ ಮಾಡಿದರು ಕೂಡ ಮಕ್ಕಳಿಗಾಗಿ ಭಾಗ್ಯ ಬಂದು ತಮ್ಮ ಮಕ್ಕಳನ್ನು ಮಾತನಾಡಿಸಿಕೊಂಡು ಹೋಗ್ತಿದ್ದಾಳೆ.

ಈಗ ಶಾಲೆಯಲ್ಲಿ ಕೂಡ ಭಾಗ್ಯಗೆ ಸಮಸ್ಯೆ ಪ್ರಾರಂಭವಾಗಿದ್ದು ಎಲ್ಲರೂ ಅವಳ ವಿರುದ್ಧವಾಗಿ ನಿಂತಿದ್ದಾರೆ. ಯಾರಿಂದಲೇ ವಿರೋಧ ವ್ಯಕ್ತವಾದರೂ ಕೂಡ ತನ್ನ ಗಂಡನಿಗೆ ಒಳ್ಳೆ ಬುದ್ಧಿ ಬರಲಿ ಅನ್ನೋ ಕಾರಣಕ್ಕಾಗಿ ಅಗ್ರಿಮೆಂಟ್ ಗೆ ಸಿಗ್ನೇಚರ್ ಹಾಕುತ್ತಾಳೆ. ಈಗ ಇದೇ ಸಂದರ್ಭದಲ್ಲಿ ತಾಂಡವ್ ತನ್ನ ಮಕ್ಕಳನ್ನು ಹಾಗೂ ತಂದೆ ತಾಯಿಯರನ್ನು ಕರ್ಕೊಂಡು ಹೋಟೆಲಿಗೆ ಬಂದಿದ್ದಾನೆ. ಅಲ್ಲಿ ಶ್ರೇಷ್ಠಾಳನ್ನು ನೋಡಿರೋ ತಾಂಡವ್ ಈಗ ಇವಳು ಇಲ್ಲಿ ಕಿತಾಪತಿ ಮಾಡ್ತಾಳೆ, ಇವಳನ್ನು ನೋಡಿದ್ರೆ ನನ್ನ ತಂದೆ ತಾಯಿಗೆ ಖಂಡಿತವಾಗಿ ಡೌಟ್ ಬಂದಿರುತ್ತೆ ಅನ್ನೋದಾಗಿ ತಲೆಕೆಡಿಸಿಕೊಳ್ಳುತ್ತಾನೆ. ಇನ್ನು ತಾಂಡವ್ ಹೋದ ಕಡೆಯಲ್ಲೆಲ್ಲ ಶ್ರೇಷ್ಠಾ ಕಾಣಿಸಿಕೊಳ್ಳುತ್ತಾಳೆ ಅನ್ನೋದಾಗಿ ಆಕೆಯನ್ನು ಕೋಪದಿಂದ ಪ್ರಶ್ನಿಸೋಕೆ ಕುಸುಮ ನಿರ್ಧಾರ ಮಾಡುತ್ತಾಳೆ.

ಯಾಕಿಲ್ಲಿ ಬಂದೆ ಅಂತ ಶ್ರೇಷ್ಠಾಳನ್ನು ಕುಸುಮ ಪ್ರಶ್ನೆ ಮಾಡಿದಾಗ ಇಲ್ಲೊಂದು ಮೀಟಿಂಗ್ ಇತ್ತು ಅದಕ್ಕಾಗಿ ಬಂದೆ ಅಂತ ಹೇಳುತ್ತಾಳೆ. ಅದೇ ರೀತಿ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದಾಗ ತಬ್ಬಿಬ್ಬಾಗುವಂತಹ ಶ್ರೇಷ್ಠ ನಿಜವಾದ ವಿಚಾರವನ್ನು ಕುಸುಮಾಗೆ ಬಾಯ್ ಬಿಡ್ತಾಳೆ. ಹೌದು ತಾಂಡವ್ ಸರ್ ಮಕ್ಕಳನ್ನ ನಿಭಾಯಿಸುವುದಕ್ಕೆ ನನ್ನೊಬ್ಬನಿಂದಲೇ ಸಾಧ್ಯವಾಗುವುದಿಲ್ಲ ನೀನು ಬಾ ಅಂತ ಕರೆದಿದ್ದಕ್ಕೆ ನಾನು ಬಂದೆ ಅನ್ನೋದಾಗಿ ಅವಳು ಬಾಯಿ ಬಿಡ್ತಾಳೆ. ಅವನು ಕರೆದ ತಕ್ಷಣ ಬರೋಕೆ ನೀನು ಯಾರು? ಇಲ್ಲಿ ಮಕ್ಕಳನ್ನು ನೋಡೋದಕ್ಕೆ ನಾನಿದ್ದೇನೆ ಅನ್ನೋದಾಗಿ ಕುಸುಮ ಕೋಪದಿಂದ ಪ್ರತಿಕ್ರಿಯೆ ನೀಡುತ್ತಾಳೆ. ಕುಸುಮಾಳ ಕೋಪದ ಮಾತುಗಳನ್ನು ಕೇಳಿ ಶ್ರೇಷ್ಠ ಸಂಪೂರ್ಣವಾಗಿ ಗಾಬರಿಯಾಗುತ್ತಾಳೆ.

ಇನ್ನು ಇದೆ ಸಂದರ್ಭದಲ್ಲಿ ಪೂಜಾ ಇರುವಂತಹ ವಿಚಾರವನ್ನು ಸಂಪೂರ್ಣವಾಗಿ ಬಾಯಿ ಬಿಡುತ್ತಾಳೆ. ತಾಂಡವ್ ಯಾವ ರೀತಿಯಲ್ಲಿ ಚಾಲಾಕಿ ಆಟವನ್ನು ಆಡಿ ತನ್ನ ಅಕ್ಕನ ಬಾಳನ್ನು ಹಾಳು ಮಾಡಿದ್ದಾನೆ ಎನ್ನುವಂತಹ ವಿಚಾರವನ್ನು ಸುಂದರಿಗೆ ಪೂಜಾ ಎಳೆ ಎಳೆಯಾಗಿ ಬಿಚ್ಚಿಡುತ್ತಾಳೆ. ಮುಂದಿನ ಸಂಚಿಕೆಯಲ್ಲಿ ಇದು ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಸದ್ಯದ ಮಟ್ಟಿಗೆ ಭಾಗ್ಯಲಕ್ಷ್ಮಿ ಧಾರವಾಹಿ ಕಿರುತೆರೆ ಕ್ಷೇತ್ರದಲ್ಲಿ ಪ್ರೇಕ್ಷಕರ ಫೇವರೆಟ್ ಧಾರವಾಹಿಗಳಲ್ಲಿ ಒಂದಾಗಿದ್ದು ಮುಂದಿನ ಸಂಚಿಕೆಯಲ್ಲಿ ಏನಾಗುತ್ತೆ ಅನ್ನೋ ಕುತೂಹಲ ಪ್ರತಿಯೊಬ್ಬ ಪ್ರೇಕ್ಷಕರಲ್ಲೂ ಕೂಡ ಮೂಡುವಂತೆ ಧಾರವಾಹಿ ಮಾಡುತ್ತಿದೆ ಅನ್ನೋದು ನಿಜಕ್ಕೂ ಮೆಚ್ಚ ಬೇಕಾಗಿರುವ ವಿಚಾರ.

Comments are closed.