Saturn and Venus in Aquarius: ಶುಕ್ರ ಶನಿ ಸಂಯೋಜನೆಯಿಂದಾಗಿ  5 ರಾಶಿಗಳ ಜೀವನದಲ್ಲಿ ಇನ್ನುಮುಂದೆ ನಡೆಯುವುದೆಲ್ಲಾ ಅದ್ಭುತವೇ; ಸಿಗಲಿದೆ ಹಣ!

Saturn and Venus in Aquarius: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈಗಾಗಲೇ ಕುಂಭ ರಾಶಿಯಲ್ಲಿ ಶನಿದೇವ ಸಂಚರಿಸುತ್ತಿದ್ದಾನೆ. ಇದರ ಜೊತೆಗೆ ಇದೇ ಮಾರ್ಚ್ 7 ನೇ ತಾರೀಖಿನಂದು ಕುಂಭ ರಾಶಿಯಲ್ಲಿ ಶುಕ್ರನ ಸಂಚಲನೆ ಕೂಡ ಕಂಡು ಬರಲಿದ್ದು ಶುಕ್ರ ಹಾಗೂ ಶನಿ ಈ ಸಂದರ್ಭದಲ್ಲಿ ಸಂಯೋಗಗೊಳ್ಳಲ್ಲಿದ್ದಾರೆ. ಈ ಸಂದರ್ಭದಲ್ಲಿ ಈ ಸಂಯೋಗ ಎನ್ನುವುದು ಐದು ರಾಶಿಚಕ್ರದವರ ಮೇಲೆ ವಿಶೇಷವಾಗಿ ಪರಿಣಾಮ ಬೀರಲಿದ್ದು ಆ ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 ವೃಷಭ ರಾಶಿ (Taurus)

ಶನಿ ಹಾಗು ಶುಕ್ರರ ಸಂಯೋಜನೆ ಎನ್ನುವುದು ವೃಷಭ ರಾಶಿಯವರಿಗೆ ಸಾಕಷ್ಟು ಲಾಭಗಳನ್ನು ತಂದುಕೊಡಲಿದೆ. ಒಂದು ವೇಳೆ ನೀವು ಹೊಸ ವ್ಯಾಪಾರವನ್ನು ಪ್ರಾರಂಭ ಮಾಡುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ, ಈ ಸಮಯ ನಿಮಗೆ ಶುಭವಾಗಿರುತ್ತದೆ. ಕಳೆದ ಸಾಕಷ್ಟು ಸಮಯಗಳಿಂದ ನೀವು ಪಡುತ್ತಿರುವಂತಹ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗಲಿದೆ. ನಿಮಗೆ ಸೇರಬೇಕಾಗಿರುವ ಹಣ ಕೊನೆಗೂ ನಿಮ್ಮ ಕೈಗೆ ಸಿಗಲಿದೆ.

 ಕರ್ಕ ರಾಶಿ (Cancer)

ಕರ್ಕ ರಾಶಿ ಅವರಿಗೆ ಶುಕ್ರ ಹಾಗೂ ಶನಿಯ ಆಶೀರ್ವಾದ ದೊರಕುತ್ತದೆ ಹಾಗೂ ಒಂದು ವೇಳೆ ನೀವು ಕಳೆದ ಸಾಕಷ್ಟು ಸಮಯಗಳಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ವಿರಸವನ್ನು ಹೊಂದಿದ್ದರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ಕುಟುಂಬದಲ್ಲಿ ಇರುವಂತಹ ಎಲ್ಲಾ ವಿವಾದಗಳು ಕೂಡ ಶಮನಗೊಳ್ಳಲಿವೆ. ನಿಮ್ಮ ಜೀವನದಲ್ಲಿ ನೀವು ದೊಡ್ಡ ಮಟ್ಟದ ಲೈಫ್ ಚೇಂಜ್ ಆಗುವಂತಹ ಘಟನೆಯನ್ನು ಈ ಸಂದರ್ಭದಲ್ಲಿ ಸಾಕ್ಷಿಕರಿಸಲಿದ್ದೀರಿ. ಎಲ್ಲಕ್ಕಿಂತ ಪ್ರಮುಖವಾಗಿ ಹದಗೆಟ್ಟಿರುವಂತಹ ನಿಮ್ಮ ಹಣಕಾಸು ಪರಿಸ್ಥಿತಿ ಸಂಪೂರ್ಣವಾಗಿ ಸರಿಯಾಗಲಿದೆ.

 ತುಲಾ ರಾಶಿ (Libra)

ಶನಿ ಹಾಗು ಶುಕ್ರವಾರ ಆಶೀರ್ವಾದದ ಫಲದಿಂದಾಗಿ ತುಲಾ ರಾಶಿಯವರಿಗೆ ತಮ್ಮ ಕೆಲಸದ ಜೀವನದಲ್ಲಿ ಬೇಕಾಗಿರುವಂತಹ ಎಲ್ಲ ಯಶಸ್ವಿ ಮೈಲಿಗಳನ್ನು ಸಂಪಾದನೆ ಮಾಡುವಂತಹ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಸಂಬಳ ಹೆಚ್ಚಾಗಲಿದ್ದು ಪ್ರಮೋಷನ್ ಕೂಡ ಸಿಗಲಿದ್ದು ನಿಮ್ಮ ಕೆಲಸದ ಜೀವನದಲ್ಲಿ ನಿಮ್ಮ ಉತ್ತುಂಗದ ಸ್ಥಿತಿಯನ್ನು ನೀವು ತಲುಪಲಿದ್ದೀರಿ. ಸ್ನೇಹಿತರ ಜೊತೆಗೆ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದ್ದು, ಕುಟುಂಬದವರೂ ಕೂಡ ನಿಮ್ಮ ಗೆಲುವಿಗೆ ಸಂತೋಷಪಡಲಿದ್ದಾರೆ ಹಾಗೂ ಅವರ ಜೊತೆಗೆ ನಿಮ್ಮ ಸಂಬಂಧ ಚೆನ್ನಾಗಿ ಮೂಡಿ ಬರಲಿದೆ.

 ಮಕರ ರಾಶಿ (Capricorn)

ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎನ್ನುವಂತಹ ಮಕರ ರಾಶಿಯವರ ಕನಸು ಶನಿ ಹಾಗೂ ಶುಕ್ರದ ಆಶೀರ್ವಾದದಿಂದಾಗಿ ಈಡೇರಲಿದೆ. ಕೈತುಂಬ ಹಣ ಸಂಪಾದನೆ ಮಾಡಿ ಶ್ರೀಮಂತರಾಗಬೇಕು ಎನ್ನುವಂತಹ ನಿಮ್ಮ ಕನಸನ್ನು ಸಂಪೂರ್ಣವಾಗಿ ಪೂರೈಸಿಕೊಳ್ಳುವಂತಹ ಅವಕಾಶವನ್ನು ಕೂಡ ಈ ಸಂದರ್ಭದಲ್ಲಿ ನೀವು ಪಡೆದುಕೊಳ್ಳಲಿದ್ದೀರಿ. ಜೀವನ ಸಂಗಾತಿಯ ಜೊತೆಗೆ ಇರುವಂತಹ ಸಮಸ್ಯೆಗಳನ್ನು ನೀವು ಭಾಗಿಸಿಕೊಳ್ಳಲಿದ್ದೀರಿ ಹಾಗೂ ಕುಟುಂಬ ಈ ಸಂದರ್ಭದಲ್ಲಿ ನಿಮ್ಮ ಸಾಥ್ ನೀಡಲಿದೆ.

 ಕುಂಭ ರಾಶಿ (Aquarius)

ನೀವು ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದ ಸಕಾರಾತ್ಮಕ ಬದಲಾವಣೆ ನಿಮ್ಮ ಜೀವನದಲ್ಲಿ ನಡೆಯಲಿದೆ. ಮನೆಯಲ್ಲಿ ಇರುವಂತಹ ಎಲ್ಲಾ ಅಸಮಾಧಾನಗಳು ತಿಳಿಯಾಗಲಿವೆ. ಅಂದುಕೊಂಡಿರುವಂತಹ ಕೆಲಸ ಅಂದುಕೊಂಡಂತಹ ಸಮಯಕ್ಕೆ ಸರಿಯಾಗಿ ನಡೆಯಲಿದೆ. ವ್ಯಾಪಾರವನ್ನು ಪ್ರಾರಂಭ ಮಾಡಬೇಕು ಎನ್ನುವಂತಹ ಆಸೆ ಇದ್ದರೆ ಸರಿಯಾದ ಸಮಯ.

Comments are closed.