Rashmika Mandanna: ರಶ್ಮಿಕಾ ಮಂದಣ್ಣ ಉಟ್ಟಿಕೊಂಡಿರೋ ಸೀರೆಯ ಬೆಲೆ ಎಷ್ಟು ಗೊತ್ತಾ? ಯಾರನ್ನ ಇಂಪ್ರೆಸ್ ಮಾಡಕ್ಕೆ ಈ ಗೆಟಪ್ ಎಂದ ನೆಟ್ಟಿಗರು!

Rashmika Mandanna: ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಕೊಡಗಿನ ಕುವರಿಯಾಗಿರುವಂತಹ ರಶ್ಮಿಕ ಮಂದಣ್ಣ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಟಾಪ್ ನಟಿಯರ ಪೈಕಿಯಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ವಯಸ್ಸು ಕೇವಲ 27 ಆಗಿದ್ದರೂ ಕೂಡ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆಯನ್ನು ಪಡೆಯುವಂತಹ ನಾಯಕನಟಿಯರ ಲಿಸ್ಟಿನಲ್ಲಿ ರಶ್ಮಿಕ ಮಂದಣ್ಣ ಅವರ ಹೆಸರು ಕಾಣಿಸಿಕೊಳ್ಳುತ್ತದೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ಸಿನಿಮಾ ಜೀವನವನ್ನು ಆರಂಭಿಸಿ ನಂತರ ತೆಲುಗು ಚಿತ್ರ ರಂಗಕ್ಕೆ ಕಾಲಿಟ್ಟು ಅಲ್ಲಿಂದ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ ಹಾಗೂ ನ್ಯಾಷನಲ್ ಕೃಷ್ ಆಗಿ ಕಾಣಿಸಿಕೊಳ್ಳುತ್ತಾರೆ.

ಪುಷ್ಪ ಸಿನಿಮಾದ ಮೂಲಕ ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ಅವರ ಅಭಿಮಾನಿಗಳು ಹೆಚ್ಚಾಗುವ ರೀತಿಯಲ್ಲಿ ಅಭಿಮಾನಿಗಳ ಮನಸ್ಸನ್ನ ಸೆಳೆಯುತ್ತಾರೆ. ಅದರಲ್ಲಿ ವಿಶೇಷವಾಗಿ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಬಾಲಿವುಡ್ ಸಿನಿಮಾ ಅನಿಮಲ್ ಸಿನಿಮಾದ ಮೂಲಕ ಕೂಡ ಬಾಲಿವುಡ್ ನಲ್ಲಿ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡು ಬೇಡಿಕೆ ವಿಚಾರದಲ್ಲಿ ಕೂಡ ಬಾಲಿವುಡ್ ಅಂಗಳದಲ್ಲಿ ರಶ್ಮಿಕ ಮಂದಣ್ಣ ಅವರ ಹೆಸರು ದೊಡ್ಡ ಮಟ್ಟದಲ್ಲಿ ಓಡಾಡುತ್ತಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ರಶ್ಮಿಕ ಮಂದಣ್ಣ ದೊಡ್ಡಮಟ್ಟದ ಫ್ಯಾನ್ ಫಾಲೋಯಿಂಗ್ ಹೊಂದಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಫೋಟೋ ಶೂಟ್ಗಳನ್ನು ಮಾಡಿಸಿಕೊಂಡು ಅದರ ಫೋಟೋಗಳನ್ನು ರಶ್ಮಿಕ ಮಂದಣ್ಣ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಈ ಮೂಲಕ ಅಭಿಮಾನಿಗಳ ಜೊತೆಗೆ ನಿರಂತರವಾಗಿ ರಶ್ಮಿಕ ಮಂದಣ್ಣ ಕನೆಕ್ಟೆಡ್ ಆಗಿರುತ್ತಾರೆ. ಇತ್ತೀಚಿಗಷ್ಟೇ ರಶ್ಮಿಕ ಮಂದಣ್ಣ ಅವರು ಇನ್ಸ್ಟಾಗ್ರಾಮ್ ನಲ್ಲಿ ಡಿಪ್ ನೆಕ್ ಹಾಗೂ ಸ್ಲೀವ್ಲೆಸ್ ಬ್ಲೌಸ್ ಅನ್ನು ಹೊಂದಿರುವ ಮಿರ ಮಿರನೇ ಮಿಂಚುವಂತಹ ಸೀರೆಯನ್ನು ಧರಿಸಿದ್ದರು. ಈ ಫೋಟೋವನ್ನು ನೋಡಿದ ತಕ್ಷಣದಿಂದ ಪ್ರತಿಯೊಬ್ಬ ಹೆಣ್ಣುಮಕ್ಕಳು ಕೂಡ ಈ ಸೀರೆಯ ಬೆಲೆ ಎಷ್ಟು ಎನ್ನುವುದಾಗಿ ಹುಡುಕಾಡಲು ಪ್ರಾರಂಭ ಮಾಡಿದ್ದಾರೆ. ಸಾವನ್ ಗಾಂಧಿ ಎನ್ನುವಂತಹ ಡಿಸೈನರ್ ಈ ಸೀರೆಯನ್ನು ಡಿಸೈನ್ ಮಾಡಿದ್ದು ಬೆಳೆಯ ವಿಚಾರದಲ್ಲಿ ಕೂಡ ಯಾವ ದುಬಾರಿ ಸೀರೆಗೂ ಕಡಿಮೆ ಇಲ್ಲದಂತಿದೆ. ಹಾಗಿದ್ದರೆ ಸೀರೆಯ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ಸೀರೆಯ ಬೆಲೆ ಬರೋಬ್ಬರಿ 1.59 ಲಕ್ಷ ರೂಪಾಯಿ ಎಂಬುದಾಗಿ ತಿಳಿದು ಬಂದಿದೆ. ರಶ್ಮಿಕ ಮಂದಣ್ಣ ಅವರು ಧರಿಸಿರುವಂತಹ ಈ ಡಿಸೈನರ್ ಸೀರೆಯನ್ನು ಪ್ರತಿಯೊಬ್ಬ ಹೆಣ್ಣುಮಕ್ಕಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಇಂಟರ್ನೆಟ್ ನಲ್ಲಿ ಹುಡುಕಾಡುತ್ತಿದ್ದಾರೆ. ಬೆಲೆ ಕೇಳಿದ ನಂತರ ಖಂಡಿತವಾಗಿ ಅವರು ಕೂಡ ನಿಬ್ಬೆರಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಸದ್ಯದ ಮಟ್ಟಿಗೆ ರಶ್ಮಿಕಾ ಮಂದಣ್ಣ ಅವರ ಮುಂದಿನ ಸಿನಿಮಾ ಆಗಿರುವ ಪುಷ್ಪ 2 ಸಿನಿಮಾಗಾಗಿ ಇಡೀ ಭಾರತೀಯ ಚಿತ್ರರಂಗವೇ ಕಾಯುತ್ತಿದೆ.

Comments are closed.