Anupama Parameswaran: ಇದೊಂದು ಗಿಫ್ಟ್ ಕೊಟ್ರೆ ನಿಮ್ಮವಳು ಆಗುತ್ತೇವೆ- ಬಹಿರಂಗ ಆಫರ್ ಕೊಟ್ಟ ಅನುಪಮಾ-ಏನು ಬೇಕಂತೆ ಗೊತ್ತೇ?

Anupama Parameswaran: ನಮ್ಮ ಭಾಷೆಯ ಸಿನಿಮಾಗಳಲ್ಲಿ ಸಾಕಷ್ಟು ಪರಭಾಷೆ ನಟಿಯರು ಇದುವರೆಗೂ ಬಂದು ನಟಿಸಿ ಹೋಗಿದ್ದಾರೆ. ಅವರಲ್ಲಿ ಮಾಲಿವುಡ್ ನಟಿ ಅನುಪಮಾ ಪರಮೇಶ್ವರನ ಕೂಡ ಒಬ್ಬರು. ನಮ್ಮ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಆಗಿರುವಂತಹ ಪುನೀತ್ ರಾಜಕುಮಾರ್ ರವರ ನಟಸಾರ್ವಭೌಮ ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ರವರು ಮೊದಲ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ರು. ಅವರ ಬಗ್ಗೆನೇ ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ಮಾತನಾಡೋಕೆ ಹೊರಟಿರುವುದು.

ಪ್ರೇಮಂ ಸಿನಿಮಾದಲ್ಲಿ ಒಂಬತ್ತು ವರ್ಷಗಳ ಹಿಂದೆ ಮೇರಿ ಜಾರ್ಜ್ ಆಗಿ ಕಾಣಿಸಿಕೊಂಡು ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ರು. ಆರಂಭದಲ್ಲಿ ಸಂಪೂರ್ಣವಾಗಿ ಸಾಂಪ್ರದಾಯಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನುಪಮಾ ಪರಮೇಶ್ವರನ್ ಇತ್ತೀಚಿನ ವರ್ಷಗಳಲ್ಲಿ ಸಖತ್ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೂಡ ಕಂಡುಬರುತ್ತಿದೆ. ಮಲಯಾಳಂ ಚಿತ್ರರಂಗದಲ್ಲಿ ಅವರು ಮೊದಲ ಸಿನಿಮಾದಲ್ಲಿ ಗೆಲುವನ್ನು ಪಡೆದುಕೊಂಡ ಕೂಡಲೇ ಪಕ್ಕದಲ್ಲಿ ಇರೋ ತಮಿಳು ಚಿತ್ರ ರಂಗಕ್ಕೆ ಕೂಡ ಹಾರಿ, ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಯಶಸ್ಸನ್ನು ಪಡೆದಿದ್ದಾರೆ.

 ಮೊದಮೊದಲು ಸಾಂಪ್ರದಾಯಿಕ ಉಡುಪು ಹಾಗೂ ಪಾತ್ರಗಳ ಮೂಲಕ ಎಲ್ಲರ ಫೇವರೆಟ್ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಅವರು ನಟಿಸುತ್ತಿರುವಂತಹ ಮುಂದಿನ ಸಿನಿಮಾದ ಬಗ್ಗೆ ಮಾತನಾಡುವುದಾದರೆ ಡಿಜೆ ಟಿಲ್ಲು ಸಿನಿಮಾದ ಮುಂದುವರಿದ ಅವತರಣಿಕೆ ಅಂದರೆ ಟಿಲ್ಲು 2 ಸಿನಿಮಾ ಆಗಿದೆ. ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿರುವಂತಹ ಈ ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ಅವರ ಪಾತ್ರವನ್ನು ಹಾಗೂ ಅದರಲ್ಲೂ ವಿಶೇಷವಾಗಿ ಗ್ಲಾಮರಸ್ ಪಾತ್ರವನ್ನು ನೋಡುವುದಕ್ಕೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದು.

ಸಾಂಪ್ರದಾಯಿಕ ಪಾತ್ರಗಳಲ್ಲಿ ಅನುಪಮಾ ಅವರನ್ನು ಕಾಣುತ್ತಿದ್ದ ಅಭಿಮಾನಿಗಳು ಈ ಸಿನಿಮಾದಲ್ಲಿ ಚಿತ್ರದ ನಾಯಕ ನಟನ ಜೊತೆಗೆ ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣುವಂತಾಗುತ್ತಿದೆ ಅನ್ನೋದಾಗಿ ಕೆಲವೊಂದು ಅಭಿಮಾನಿಗಳು ಬೇಸರದಿಂದ ತಮ್ಮ ಅಸಮಾಧಾನವನ್ನು ಹೊರ ಹಾಕಿರುವುದನ್ನು ಕೂಡ ನಾವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತಹ ಕೆಲವೊಂದು ವಿಡಿಯೋಗಳ ಮುಖಾಂತರ ತಿಳಿದುಕೊಳ್ಳಬಹುದಾಗಿದೆ. ಇನ್ನು ಇತ್ತೀಚಿಗಷ್ಟೇ ಅನುಪಮಾ ಪರಮೇಶ್ವರನ್ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿರುವಂತಹ ಸ್ಟೋರಿ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಕೇರಳದ ಕುಟ್ಟಿ ಮರಿ ಆನೆ ಮರಿಯ ವಿಡಿಯೋ ಅಥವಾ ಪೋಸ್ಟ್ ಅನ್ನು ಹಂಚಿಕೊಂಡಿರುವಂತಹ ಅನುಪಮಾ ಪರಮೇಶ್ವರನ್ ರವರು ಈತನನ್ನು ಯಾರು ನನಗೆ ಗಿಫ್ಟ್ ನೀಡುತ್ತಾರೋ ನಾನು ಅವರಿಗೆ ಸ್ವಂತ ಅನ್ನೋದಾಗಿ ಸ್ಟೋರಿ ಅಪ್ಲೋಡ್ ಮಾಡಿದ್ದಾರೆ. ನೆಟ್ಟಗರು ಮಾತ್ರ ಈ ಮರಿ ನೀರಾನೆಯನ್ನು ಯಾಕೆ ಗಿಫ್ಟ್ ರೂಪದಲ್ಲಿ ಕೇಳುತ್ತಿದ್ದೀರಿ ಅನ್ನೋದಾಗಿ ತಲೆ ಕೆಡಿಸಿಕೊಂಡಿದ್ದಾರೆ. ನಮ್ಮ ಭಾರತದಲ್ಲಿ ಈ ರೀತಿಯ ಪ್ರಾಣಿಗಳನ್ನು ಸಾಕುವುದಕ್ಕಾಗಿ ವಿಶೇಷವಾದ ಅನುಮತಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ ಹೀಗಾಗಿ ಈ ರೀತಿಯ ಉಡುಗೊರೆಗಳನ್ನು ನಿಮಗೆ ನೀಡುವುದು ಕೂಡ ಅಸಾಧ್ಯವೇ ಸರಿ ಎನ್ನುವುದಾಗಿ ಕೆಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Comments are closed.