Business Idea: ಈ ಬ್ಯುಸನೆಸ್ ಮಾಡಿದ್ರೆ ನಿಮಗೆ ಬೇಡ ಅಂದ್ರೂ ಲಕ್ಷ ಲಕ್ಷ ಸಂಪಾದನೆ ಮಾಡೋಕೆ ಸಧ್ಯವಾಗತ್ತೆ! ಹೇಗೆ ಗೊತ್ತಾ?

Business Idea: ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬರೂ ಕೂಡ ತಮ್ಮದೇ ಆದಂತಹ ವ್ಯಾಪಾರ ಉದ್ಯಮವನ್ನು ಹೊಂದಬೇಕು ಎನ್ನುವಂತಹ ಕನಸನ್ನು ಹೊಂದಿರುತ್ತಾರೆ. ಆರ್ಥಿಕವಾಗಿ ವೇಗವಾಗಿ ಬೆಳವಣಿಗೆಯನ್ನು ಕೂಡ ಸಾಧಿಸಬಹುದಾಗಿದೆ ಹಾಗೂ ಬೇರೆಯವರ ಕೈ ಕೆಳಗೆ ಕೆಲಸ ಮಾಡುವಂತಹ ಪ್ರಮೇಯ ಕೂಡ ಇರುವುದಿಲ್ಲ. ಇದೇ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ತಮ್ಮದೇ ಆದಂತಹ ಸ್ವಂತವಾದ ವ್ಯಾಪಾರವನ್ನು ಹೊಂದುವ ಕನಸನ್ನು ಹೊಂದಿರುತ್ತಾರೆ ಹಾಗೂ ಅಂಥವರಿಗೆ ಇವತ್ತಿನ ಈ ಆರ್ಟಿಕಲ್ ಮೂಲಕ ಒಂದೊಳ್ಳೆ ಸಲಹೆಯನ್ನು ನೀಡಲು ಹೊರಟಿದ್ದೇವೆ. ಯಾವ ರೀತಿಯಲ್ಲಿ ಕಲಬೆರಕೆ ವಸ್ತುಗಳು ಆಹಾರ ವಸ್ತುಗಳ ರೂಪದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತವೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ.

ಇವತ್ತಿನ ಈ ಆರ್ಟಿಕಲ್ ಮೂಲಕ ನಾವು ಹೇಳಲು ಹೊರಟಿರುವಂತಹ ಆಹಾರ ವಸ್ತು ಇನ್ಯಾವುದು ಅಲ್ಲ ಬದಲಾಗಿ ಗಾಣಿಗದ ಎಣ್ಣೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕೂಡ ಕಲುಷಿತಗೊಂಡಿರುವಂತಹ ಎಣ್ಣೆಯನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಆರೋಗ್ಯದ ಎಣ್ಣೆಯನ್ನು ನೀವು ಪ್ರೊಡ್ಯೂಸ್ ಮಾಡುವುದರ ಜೊತೆಗೆ ಪ್ರತಿ ತಿಂಗಳು ಲಕ್ಷಾಂತರ ಹಣವನ್ನು ಸಂಪಾದನೆ ಮಾಡಬಹುದಾದಂತಹ ಅವಕಾಶ ಕೂಡ ನಿಮ್ಮಲ್ಲಿ ಇದ್ದು, ಬನ್ನಿ ಇದನ್ನು ಯಾವ ರೀತಿಯಲ್ಲಿ ಕಾರ್ಯ ರೂಪಕ್ಕೆ ತರಬಹುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

 ಎಣ್ಣೆ ಉದ್ಯಮವನ್ನು ಯಾವ ರೀತಿಯಲ್ಲಿ ಮಾಡೋದು?

ಮೊದಲಿಗೆ ನೀವು ಎಣ್ಣೆಯ ಎಕ್ಸ್ಪ್ಲೇರ್ ಯಂತ್ರವನ್ನು ಖರೀದಿ ಮಾಡಬೇಕಾಗಿರುತ್ತದೆ.  10×10 ವಿಸ್ತೀರ್ಣವನ್ನು ಹೊಂದಿರುವಂತಹ ಕೊಠಡಿಯ ಅಗತ್ಯತೆ ಈ ಉದ್ಯಮವನ್ನು ಪ್ರಾರಂಭ ಮಾಡುವುದಕ್ಕೆ ಬೇಕಾಗಿರುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಫುಡ್ ಸೇಫ್ಟಿ ಹಾಗೂ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ ಅಂದ್ರೆ FSSIA ನ ಲೈನ್ಸ್ ಅನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಇನ್ನು ನಿಮ್ಮ ಉದ್ಯಮದ ಯಂತ್ರದಲ್ಲಿ ತಯಾರಾಗಿರುವಂತಹ ಎಣ್ಣೆಯನ್ನು ನೀವು ಪ್ಯಾಕೆಟ್ ಹಾಗೂ ಬಾಟಲಿಗಳ ಮುಖಾಂತರ ಪ್ಯಾಕೇಜಿಂಗ್ ಮಾಡಬೇಕಾಗಿದೆ. ಯಾಕೆಂದರೆ ನಿಮ್ಮ ಪ್ಯಾಕೇಜಿಂಗ್ ಚೆನ್ನಾಗಿದ್ದಷ್ಟು ಗ್ರಾಹಕರು ನಿಮ್ಮ ಎಣ್ಣೆಯನ್ನು ಖರೀದಿಸುವುದಕ್ಕೆ ಇಷ್ಟಪಡುತ್ತಾರೆ. ಇದಾದ ನಂತರ ನೀವು ನಿಮ್ಮ ಎಣ್ಣೆಯನ್ನು ಮಾರುಕಟ್ಟೆಗೆ ಜಾರಿಗೊಳಿಸಬಹುದಾಗಿದೆ.

Business Idea
Business Idea: ಈ ಬ್ಯುಸನೆಸ್ ಮಾಡಿದ್ರೆ ನಿಮಗೆ ಬೇಡ ಅಂದ್ರೂ ಲಕ್ಷ ಲಕ್ಷ ಸಂಪಾದನೆ ಮಾಡೋಕೆ ಸಧ್ಯವಾಗತ್ತೆ! ಹೇಗೆ ಗೊತ್ತಾ? https://sihikahinews.com/2024/02/29/business-idea-2/

ನಿಮ್ಮ ಯಂತ್ರದಿಂದ ತಯಾರಾಗಿರುವಂತಹ ಎಣ್ಣೆಯ ಮೂಲಕ ಪ್ರತಿ ಬಾಟಲ್ ಮೇಲೆ ನೀವು ರೂ.50 ಗಳವರೆಗೆ ಲಾಭವನ್ನು ಸಂಪಾದನೆ ಮಾಡುವಂತಹ ಅವಕಾಶ ಮಾರುಕಟ್ಟೆಯಲ್ಲಿ ಇದೆ. ಈ ಮೂಲಕ ದಿನಕ್ಕೆ 50 ಲೀಟರ್ ಎಣ್ಣೆಯನ್ನು ಮಾರಾಟ ಮಾಡಿದ್ರು ಕೂಡ ನೀವು ಸರಾಸರಿ ಲೆಕ್ಕಾಚಾರದಲ್ಲಿ ಎರಡರಿಂದ ಎರಡುವರೆ ಸಾವಿರ ರೂಪಾಯಿಗಳ ನಿವ್ವಳ ಲಾಭವನ್ನು ಪಡೆಯಲಿದ್ದೀರಿ ಹಾಗೂ ತಿಂಗಳಿಗೆ 60,000ಗಳವರೆಗೂ ಕೂಡ ಲಾಭವನ್ನು ಸಂಪಾದನೆ ಮಾಡಬಹುದಾಗಿದೆ. ಹೆಚ್ಚಿನ ಎಣ್ಣೆಯ ಉತ್ಪಾದನೆ ಮಾಡಿದಷ್ಟು ನಿಮಗೆ ಲಾಭದಲ್ಲಿ ಕೂಡ ಗಣನೀಯವಾಗಿ ಹೆಚ್ಚಳ ಕಂಡು ಬರಲಿದೆ.

 ಇದೇ ರೀತಿಯಲ್ಲಿ ನೀವು ಸಮಯ ಹೋದಂತೆ ಲಕ್ಷಗಟ್ಟಲೆ ಲಾಭವನ್ನು ಪ್ರತಿ ತಿಂಗಳು ಪಡೆಯಲಿದ್ದೀರಿ. ಕೇವಲ ಎಣ್ಣೆಯ ಮೂಲಕ ಮಾತ್ರವಲ್ಲದೆ ತೆಂಗಿನ ಉಳಿದ ಅವಶೇಷಗಳಿಂದ ಕೂಡ ನೀವು ಹಣವನ್ನು ಬೇರೆ ಬೇರೆ ರೀತಿಯಲ್ಲಿ ಸಂಪಾದನೆ ಮಾಡಬಹುದಾಗಿದೆ. ಹೀಗಾಗಿ ಈ ಎಣ್ಣೆ ಉತ್ಪಾದನೆಯ ಉದ್ಯಮ ನಿಜಕ್ಕೂ ಕೂಡ ನಿಮಗೆ ಬೇರೆ ಬೇರೆ ರೀತಿಯಲ್ಲಿ ಹಣದ ಲಾಭವನ್ನು ನೀಡುವಂತಹ ಉದ್ಯಮವಾಗಿದೆ.

Comments are closed.