Sudha Murty: ಸೀರೆಯೆಂದರೆ ಅಚ್ಚು ಮೆಚ್ಚು- ಆದರೂ 40 ವರ್ಷದಿಂದ ಒಂದು ಸೀರೆ ಖರೀದಿ ಮಾಡಿಲ್ಲ ಯಾಕೆ?? ಸುಧಾಮೂರ್ತಿರವರ ಜೀವನದ ಅಚ್ಚರಿ

Sudha Murty: ಸ್ನೇಹಿತರೆ ಸುಧಾ ಮೂರ್ತಿ ಅಮ್ಮನವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಧ್ಯಮ ವರ್ಗದ ಕುಟುಂಬದಿಂದ ತಮ್ಮ ಜೀವನವನ್ನು ಪ್ರಾರಂಭಿಸಿ ಇವತ್ತು ಸಾವಿರಾರು ಲಕ್ಷಾಂತರ ಜನರಿಗೆ ಕೆಲಸ ಕೊಡುವಂತಹ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಆಗಿರುವಂತಹ ನಾರಾಯಣ ಮೂರ್ತಿ ಅವರ ಪತ್ನಿಯಾಗಿ ಹಾಗೂ ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಫೌಂಡೇಶನ್ ಮೂಲಕ ಬಡವರಿಗೆ ಹಾಗೂ ಅಸಹಾಯಕರಿಗೆ ಬೇಕಾಗಿರುವಂತಹ ಸಹಾಯವನ್ನು ಕಳೆದ ಸಾಕಷ್ಟು ವರ್ಷಗಳಿಂದ ಮಾಡಿಕೊಂಡು ಬಂದಿರುವುದು ಅವರ ದೊಡ್ಡ ಗುಣವನ್ನು ಸಾಬೀತುಪಡಿಸುತ್ತೆ.

ಈ ಲಕ್ಷಣಗಳು ನಿಮ್ಮಲ್ಲಿಯೂ ಇದ್ದರೆ ನಿಮ್ಮದು ಕೋತಿ ಮನಸ್ಸು; ಕೋತಿ ತರ ಆಡದೇ, ಈ ರೀತಿ ಮಾಡಿದ್ರೆ ಲೈಫ್ ಜಿಂಗಾಲಾಲಾ ಅನ್ನುತ್ತಾರೆ ತಜ್ಞರು!

ಇಷ್ಟೊಂದು ಶ್ರೀಮಂತ ಆಗಿದ್ದರೂ ಕೂಡ ಸುಧಾ ಮೂರ್ತಿಯವರು ಯಾವತ್ತೂ ಕೂಡ ಮೈತುಂಬ ಆಭರಣಗಳನ್ನ ಹೇರಿಕೊಂಡು ಅಲಂಕಾರ ಮಾಡಿಕೊಂಡು ಬೆಲೆಬಾಳುವ ಸೀರೆಯನ್ನು ಉಟ್ಟುಕೊಂಡು ಯಾವತ್ತು ಹೊರಗೆ ಕಾಣಿಸಿಕೊಂಡವರಲ್ಲ. ಇನ್ನು ಕೇವಲ ಜನ ಸೇವೆ ಮತ್ತು ಶ್ರೀಮಂತಿಕೆ ವಿಚಾರದಲ್ಲಿ ಮಾತ್ರವಲ್ಲದೆ ಸುಧಾ ಮೂರ್ತಿಯವರು ಪುಸ್ತಕದ ಅಂದರೆ ಸಾಹಿತ್ಯದ ವಿಚಾರದಲ್ಲಿ ಕೂಡ ಮುಂದಿದ್ದಾರೆ. ಇದುವರೆಗೆ ಅವರು 150 ಕಿಂತ ಹೆಚ್ಚಿನ ಪುಸ್ತಕಗಳನ್ನು ಬರೆದಿದ್ದಾರೆ. ಹೆಣ್ಣು ಮಕ್ಕಳಿಗೆ ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದವರ ಎದುರೇ ಸುಧಾ ಮೂರ್ತಿ ಈ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳ ಒಡತಿ ಆಗಿದ್ದರೂ ಕೂಡ ಸುಧಾ ಮೂರ್ತಿಯವರು ಜೀವನ ಮೌಲ್ಯ ಹಾಗೂ ಉತ್ತಮ ನಡವಳಿಕೆಯ ಜೀವನದ ಅತ್ಯಂತ ಶ್ರೀಮಂತಿಕ ಗುಣಗಳು ಎಂಬುದಾಗಿ ನಂಬಿದವರು.

ಸುಧಾ ಮೂರ್ತಿ ಅವರನ್ನು ಹೊಗಳುತ್ತಾ ಹೋದರೆ ಮಾತುಗಳೇ ಮುಗಿಯುವುದಿಲ್ಲ ಪದಗಳು ಸಾಕಾಗುವುದಿಲ್ಲ. ಆದರೆ ಅವರ ಬಗ್ಗೆ ಒಂದು ವಿಚಾರವನ್ನು ನೀವು ಕೇಳಿದರೆ ಖಂಡಿತವಾಗಿ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದಾಗಿದೆ. ಹೌದು ಕಳೆದ 30 ವರ್ಷಗಳಿಂದ ಸುಧಾ ಮೂರ್ತಿಯವರು ಹೊಸ ಸೇವೆಯನ್ನು ಖರೀದಿಸಿಲ್ವಂತೆ. ಹಾಗಂತ ಅವರಿಗೆ ಸೀರೆ ಇಷ್ಟ ಇಲ್ಲ ಅಂತ ನೀವು ಅಂದುಕೊಳ್ಳಬಹುದು. ಹಾಗೇನಿಲ್ಲ ಅವರಿಗೂ ಕೂಡ ಸೀರೆ ಅಂದ್ರೆ ತುಂಬಾನೇ ಇಷ್ಟ. ಕೋಟ್ಯಾಂತರ ರೂಪಾಯಿ ಹಣ ಇದ್ರೂ ಕೂಡ ಯಾಕೆ ಹೊಸ ಸೀರೆಯನ್ನು ಅವರು ಖರೀದಿಸಿಲ್ಲ ಅನ್ನದಾಗಿ ನಿಮ್ಮಲ್ಲಿ ಕೂಡ ಪ್ರಶ್ನೆ ಬರಬಹುದು. ಹಾಗಿದ್ರೆ ಬನ್ನಿ ಆ ಪ್ರಶ್ನೆಗೆ ಉತ್ತರ ಕಂಡುಹಿಡಿಯುವ ಪ್ರಯತ್ನವನ್ನು ಮಾಡೋಣ.

ಈ ಹಿಂದೆ ಅವರು ಕಾಶಿ ದೇವಸ್ಥಾನಕ್ಕೆ ಹೋಗಿದ್ದು ಸಂದರ್ಭದಲ್ಲಿ ಅಲ್ಲಿ ತಮ್ಮಿಷ್ಟದ ಒಂದು ವಸ್ತುವನ್ನು ತ್ಯಜಿಸಬೇಕು ಎನ್ನುವಂತಹ ರೂಢಿ ಇತ್ತು. ಇದೇ ಕಾರಣಕ್ಕಾಗಿ ಅಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ನಾನು ಹೊಸ ಸೀರೆಯನ್ನು ಖರೀದಿಸುವುದನ್ನು ಬಿಟ್ಟು ಬಿಡುತ್ತೇನೆ ಎಂಬುದಾಗಿ ಮಾತು ಕೊಟ್ಟಿದ್ದೆ ಅದೇ ಕಾರಣಕ್ಕಾಗಿ ನಾನು ಹೊಸ ಸೀರಿಯಲ್ ಖರೀದಿಸುವುದನ್ನು ಬಿಟ್ಟು ಬಿಟ್ಟಿದ್ದೇನೆ ಎಂಬುದಾಗಿ ಸುಧಾ ಮೂರ್ತಿ ಅಮ್ಮನವರು ಹೇಳುತ್ತಾರೆ. ಅಷ್ಟೆಲ್ಲ ಹಣವನ್ನು ಹೊಂದಿದರು ಕೂಡ ದೇವರ ಹಾಗೂ ಧರ್ಮದ ವಿಚಾರದಲ್ಲಿ ಅಪಾರ ನಂಬಿಕೆಯನ್ನು ಹೊಂದಿರುವಂತಹ ಸುಧಾ ಮೂರ್ತಿ ಅಮ್ಮನವರು ನಮ್ಮೆಲ್ಲರ ಮೆಚ್ಚುಗೆ ಅರ್ಹರು.

Comments are closed.