PM Kisan Samman Scheme: ರೈತರ ಬ್ಯಾಂಕ್ ಖಾತೆಗೆ ಬಂತು ಪಿಎಮ್ ಕಿಸಾನ್ ಯೋಜನೆಯ 16ನೇ ಕಂತಿನ ಹಣ; ನಿಮ್ಮ ಖಾತೆಯನ್ನ ತಕ್ಷಣ ಚೆಕ್ ಮಾಡಿ; ಹಣ ಬಂದಿಲ್ಲ ಅಂದ್ರೆ ಎನ್ ಮಾಡ್ಬೇಕು ಗೊತ್ತಾ?

PM Kisan Samman Scheme: ಸ್ನೇಹಿತರೆ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ವಿಧಾನದ ಮೂಲಕ ಈ ಬಾರಿ ಅಂದರೆ ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಹಣವನ್ನು ಫೆಬ್ರವರಿ 28ರಂದು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ. 9 ಕೋಟಿ ಹೆಚ್ಚಿನ ರೈತರ ಖಾತೆಗೆ 21,000 ಕೋಟಿ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ನಿಮ್ಮ ಹೆಸರು ಕೂಡ ಇದೆಯಾ ಅನ್ನೋದು ಚೆಕ್ ಮಾಡೋದು ಹೇಗೆ ಅನ್ನೋದನ್ನ ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

 ಪಿಎಂ ಕಿಸಾನ್ ಸಮ್ಮಾನ್ ಯೋಜನೆ

ದೇಶದ ರೈತರಿಗೆ ಆರ್ಥಿಕ ಸಹಾಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳಾಗಿರುವಂತಹ ನರೇಂದ್ರ ಮೋದಿಯವರು ವರ್ಷಕ್ಕೆ ಆರು ಸಾವಿರ ರೂಪಾಯಿಗಳ ಹಣವನ್ನು ಎರಡು ಹೆಕ್ಟರಿಗಿಂತ ಕಡಿಮೆ ಭೂ ಪ್ರದೇಶವನ್ನು ಹೊಂದಿರುವಂತಹ ರೈತರಿಗೆ ಮೂರು ಕಂತುಗಳಲ್ಲಿ ನೀಡುವಂತಹ ಯೋಜನೆಯಾಗಿದೆ. ಮೊದಲನೇ 2000 ರೂಪಾಯಿಗಳ ಕಂತನ್ನು ಏಪ್ರಿಲ್ ನಿಂದ ಜೂನ್ ತಿಂಗಳಲ್ಲಿ ನೀಡಲಾಗುತ್ತದೆ. ಎರಡನೇ 2,000 ರೂಪಾಯಿಗಳ ಕಂತನ್ನು ಆಗಸ್ಟ್ ನಿಂದ ನವಂಬರ್ ತಿಂಗಳ ಒಳಗೆ ನೀಡಲಾಗುತ್ತದೆ. ಕೊನೆ ಹಾಗೂ ಮೂರನೇ ಎರಡು ಸಾವಿರ ರೂಪಾಯಿಗಳ ಕಂತನ್ನು ಡಿಸೆಂಬರ್ ನಿಂದ ಮಾರ್ಚ್ ತಿಂಗಳ ಒಳಗೆ ನೀಡಲಾಗುತ್ತದೆ.

ನವಂಬರ್ ತಿಂಗಳಿನಲ್ಲಿ 15ನೇ ಕಂತಿನ ಹಣವನ್ನು ನೀಡಲಾಗಿತ್ತು ಹಾಗೂ ಈಗ ಫೆಬ್ರವರಿ 28ನೇ ತಾರೀಕಿಗೆ 16ನೇ ಕಂತಿನ ಹಣವನ್ನು ನೀಡಲಾಗಿದ್ದು ರೈತರಿಗೆ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಧನಸಹಾಯವನ್ನು ನೀಡಲಾಗುತ್ತಿದೆ. ನೀವು ಕೂಡ ರೈತರ್ ಆಗಿದ್ರೆ ನಿಮ್ಮ ಭೂಮಿಯನ್ನು ಪರಿಶೀಲನೆ ಮಾಡಿಸುವ ಮೂಲಕ ಹಾಗೂ eKYC ಪ್ರಕ್ರಿಯೆಯನ್ನು ಮಾಡಿಸಿಕೊಂಡರೆ ಸಾಕು ನೀವು ಕೂಡ ಈ ಯೋಜನೆ ಅಡಿಯಲ್ಲಿ ಹಣವನ್ನು ಪಡೆಯುತ್ತೀರಿ. ಹಾಗಿದ್ದರೆ ಬನ್ನಿ ಇ- ಕೆವೈಸಿ ಯನ್ನು ಯಾವ ರೀತಿಯಲ್ಲಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

 eKYC ಮಾಡುವ ವಿಧಾನ

ಮೊದಲಿಗೆ ನೀವು ಈ ಯೋಜನೆಯ ಅಧಿಕೃತ ವೆಬ್ಸೈಟ್ ಆಗಿರುವಂತಹ https://pmkisan.gov.in/ ಲಿಂಕಿಗೆ ಹೋಗಿ ಕ್ಲಿಕ್ ಮಾಡಿ ಅಲ್ಲಿ ಕಾಣಿಸುವಂತಹ ಇಕೆವೈಸಿ ಮಾಡಿಸುವ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ. ಇದಾದ ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿದ ಮೇಲೆ ಬರುವಂತಹ ಓಟಿಪಿಯನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ. ಇಲ್ಲವಾದಲ್ಲಿ ನಿಮ್ಮ ಮೊಬೈಲ್ ಫೋನ್ನಲ್ಲಿ ಇದರ ಅಧಿಕೃತ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಫೇಸ್ ವೇರಿಫಿಕೇಷನ್ ಮಾಡಿಸಿಕೊಳ್ಳಬಹುದಾಗಿದೆ ಇಲ್ಲವೇ ಹತ್ತಿರದ ಸೇವಕೇಂದ್ರಗಳಿಗೆ ಹೋಗಿ ಅಲ್ಲಿ ಕೂಡ ನೀವು ವೆರಿಫಿಕೇಶನ್ ಮಾಡಿಕೊಳ್ಳಬಹುದು.

 ಪಿಎಂ ಸಮ್ಮಾನ್ ಕಿಸಾನ್ ಯೋಜನೆಯಲ್ಲಿ ಹಣ ಬಂದಿರೋದನ್ನ ಚೆಕ್ ಮಾಡುವುದು ಹೇಗೆ?

  • ಮೊದಲಿಗೆ ಅಧಿಕೃತ ವೆಬ್ಸೈಟ್ಗೆ ಹೋದ ನಂತರ ಬಲ ಭಾಗದಲ್ಲಿ ಕಾಣಿಸಿಕೊಳ್ಳುವಂತಹ ಫಲಾನುಭವಿಗಳ ಪಟ್ಟಿಯ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
  • ಇದಾದ ಮೇಲೆ ಇಲ್ಲಿ ನಿಮ್ಮ ರಾಜ್ಯ ಜಿಲ್ಲೆ ಹಾಗೂ ಬ್ಲಾಕ್ ಹಾಗೂ ಇನ್ನಷ್ಟು ಉಪ ವಿಭಾಗಗಳನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಬೇಕಾಗಿರುತ್ತದೆ.
  • ನಿಮ್ಮ ಸ್ಥಳದ ವರದಿ ಪಡೆಯುವಂತಹ ಆಯ್ಕೆ ನಿಮಗೆ ಕಂಡುಬರುತ್ತದೆ ಅಲ್ಲಿ ಕ್ಲಿಕ್ ಮಾಡಿದ ನಂತರ ಕಾಣುವಂತಹ ವರದಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದಾಗಿದೆ.

Comments are closed.