Ration card: ಹೊಸ ರೇಷನ್ ಕಾರ್ಡ್ ಕೊಡುವುದು ಮಾತ್ರವಲ್ಲ, ಹೊಸ ಅರ್ಜಿ ಸಲ್ಲಿಸುವುದಕ್ಕೂ ಅವಕಾಶ; ಈ ದಾಖಲೆಗಳು ಮಾತ್ರ ಬೇಕೆ ಬೇಕು ನೋಡಿ!

Ration card: ರಾಜ್ಯ ಸರ್ಕಾರ ರಾಜ್ಯದ ಜನರಿಗೆ ಹೊಸ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗಳನ್ನು ವಿತರಣೆ ಮಾಡುತ್ತದೆ ಎನ್ನುವುದಾಗಿ ಸಾಕಷ್ಟು ಸಮಯಗಳಿಂದಲೂ ಕೂಡ ಸುದ್ದಿ ಬರುತ್ತಲೇ ಇತ್ತು. ತಮ್ಮ ಹೊಸ ಕಾರ್ಡ್ಗಳನ್ನು ಪಡೆದುಕೊಳ್ಳಬೇಕು ಎನ್ನುವುದಾಗಿ ರಾಜ್ಯದಲ್ಲಿ ಜನರು ಕೂಡ ಸಾಕಷ್ಟು ಕಾತರರಾಗಿದ್ದರು. ಕೊನೆಗೂ ಈಗ ರಾಜ್ಯ ಸರ್ಕಾರದಿಂದ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ ಎಂದು ಹೇಳಬಹುದು. ಈ ಬಗ್ಗೆ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿರುವಂತಹ ಕೆಎಚ್ ಮುನಿಯಪ್ಪ ಯಾವ ಹೇಳಿಕೆ ನೀಡಿದ್ದಾರೆ ಹೊಸ ಅಪ್ಡೇಟ್ ಏನು ಎನ್ನುವಂತಹ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

 ರೇಷನ್ ಕಾರ್ಡ್ ಲೇಟೆಸ್ಟ್ ಅಪ್ಡೇಟ್

ರೇಷನ್ ಕಾರ್ಡ್ ಗಾಗಿ ಕಳೆದ 2020 ರಿಂದಲ್ಲೂ ಕೂಡ ಜನರು ಕಾಯುತ್ತಿದ್ದು ಇನ್ಮುಂದೆ ಕಾಯಬೇಕಾದ ಯಾವುದೇ ಅಗತ್ಯ ಇಲ್ಲ ಎನ್ನುವುದಾಗಿ ಸಚಿವರು ಹೇಳಿದ್ದಾರೆ. ಈಗಾಗಲೇ ಇರುವಂತಹ ಎಲ್ಲಾ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ಮಾರ್ಚ್ 31ರ ಒಳಗೆ ಹೊಸ ರೇಷನ್ ಕಾರ್ಡ್ ಅನ್ನು ನೀಡುವಂತಹ ಪ್ರಕ್ರಿಯೆಯನ್ನು ಪ್ರಾರಂಭ ಮಾಡಲಾಗುವುದು ಎನ್ನುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಕೆಲವೊಂದು ತುರ್ತು ಪರಿಸ್ಥಿತಿಗಳಲ್ಲಿ ಕೂಡ ಸರ್ಕಾರ ರೇಷನ್ ಕಾರ್ಡ್ ಒದಗಿಸುವಂತಹ ವಿಚಾರವನ್ನು ಬಹಿರಂಗಪಡಿಸಿದೆ.

ಮದುವೆ ನಂತರ ಪ್ರತ್ಯೇಕವಾಗಿ ಸಂಸಾರ ಮಾಡುವಂತಹ ದಂಪತಿಗಳಿಗೆ ಅಥವಾ ಹೊಸದಾಗಿ ಮದುವೆಯಾಗಿರುವಂತಹ ಜೋಡಿಗಳಿಗೆ ರೇಷನ್ ಕಾರ್ಡ್ ಅನ್ನು ಒದಗಿಸಲಾಗುತ್ತದೆ. ಈಗಾಗಲೇ ರೇಷನ್ ಕಾರ್ಡ್ ನಲ್ಲಿ ಅವರ ಹೆಸರಿದ್ದು ಬೇರೆಯಾಗಿ ಜೀವನ ಮಾಡಲು ಮನೆಯಿಂದ ಹೊರ ಬಂದರೆ ಆ ಸಂದರ್ಭದಲ್ಲಿ ಕೂಡ ಹೊಸದಾಗಿ ರೇಷನ್ ಕಾರ್ಡ್ ಅವರಿಗೆ ಮಾಡಬಹುದಾಗಿದೆ. ಇನ್ನು ಹೊಸ ಸದಸ್ಯರ ಸೇರ್ಪಡೆಯನ್ನು ಮಾಡುವುದು ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವಂತಹ ಕೆಲವೊಂದು ಮಿಸ್ಟೇಕ್ ಗಳನ್ನು ತಿದ್ದುಪಡಿ ಮಾಡುವಂತಹ ಅವಕಾಶಗಳನ್ನು ಕೂಡ ಸರ್ಕಾರ ಈ ಬಾರಿ ನೀಡಿದೆ. ಹೀಗಾಗಿ ಈ ಎಲ್ಲಾ ಸೌಲಭ್ಯಗಳನ್ನು ಈ ಸಂದರ್ಭದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಇಲಾಖೆಯ ಕಡೆಯಿಂದ ಮಾಹಿತಿ ಹೊರ ಬಂದಿದೆ.

 ಅರ್ಜಿ ಸಲ್ಲಿಸುವ ವಿಧಾನ

ಬೆಂಗಳೂರು ಒನ್, ಗ್ರಾಮವನ್ ಗಳಂತಹ ಸೇವಾ ಕೇಂದ್ರಗಳಲ್ಲಿ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾದಂತಹ ಅವಕಾಶ ಕೂಡ ಇದೆ. ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಸಿಬ್ಬಂದಿಗಳಿಂದ ಹೆಚ್ಚಿನ ಮಾಹಿತಿಯನ್ನು ಪಡೆದು ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟಾರೆಯಾಗಿ ಕೊನೆಗೂ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಬೇಕು ಎನ್ನುವುದಾಗಿ ಕಳೆದ ನಾಲ್ಕು ವರ್ಷಗಳಿಂದಲೂ ಕಾಯುತ್ತಿದ್ದ ಜನಸಾಮಾನ್ಯರಿಗೆ ಹೊಸ ಕಾರ್ಡ್ ಸಿಗುವಂತಹ ಅವಕಾಶ ಮಾರ್ಚ್ 31ರ ಒಳಗೆ ಸಿಗುವುದಾಗಿ ಸಚಿವರಿಂದಲೇ ಮಾಹಿತಿ ಸಿಕ್ಕಿದ್ದು ಜನಸಾಮಾನ್ಯರಲ್ಲಿ ಖುಷಿಯ ವಾತಾವರಣ ಮೂಡುವಂತೆ ಮಾಡಿದೆ. ಒಂದು ವೇಳೆ ನೀವು ಕೂಡ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವ ಹಾಗೂ ಕಾಯುವ್ಯ ಕೆಲಸವನ್ನು ಮಾಡುತ್ತಿದ್ದರೆ ಖಂಡಿತವಾಗಿ ಈ ಸುದ್ದಿ ನಿಮಗಾಗಿ ಸಂತೋಷವನ್ನು ತರುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.