Darshan: ಸಂಸಾರ ಗಲಾಟೆ ಕುರಿತು ಆದೇಶ ಹೊರಡಿಸಿದ ಡಿ ಬಾಸ್ – ಅಭಿಮಾನಿಗಳು ಮತ್ತೊಂದು ಆದೇಶ ಏನು ಗೊತ್ತೇ?

Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star darshan) ರವರು ಏನೇ ಮಾಡಿದರೂ ಕೂಡ ಅದು ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಆಗಿಯೇ ಆಗುತ್ತೆ. ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟಂತಹ ಕೆಲವೊಂದು ವಿಚಾರಗಳು ಕೂಡ ಸುದ್ದಿಯಾಗಿದ್ದವು ಹಾಗೂ ಸಿನಿಮಾ ಜೀವನಕ್ಕೆ ಸಂಬಂಧಪಟ್ಟಂತಹ ವಿವಾದಾತ್ಮಕ ವಿಚಾರಗಳು ಕೂಡ ಹೊರಬಂದಿದ್ದವು. ಅದರಲ್ಲೂ ವಿಶೇಷವಾಗಿ ಸಾಂಸಾರಿಕ ಜೀವನದ ಕೆಲವೊಂದು ವಿಚಾರಗಳು ಹೊರಗಡೆ ಬಂದಿದ್ದು ಅದು ದರ್ಶನ್ ರವರ ನೆಮ್ಮದಿಯನ್ನು ಕೆಡಿಸಿರಬಹುದೆಂಬುದಾಗಿ ಅಭಿಮಾನಿಗಳು ಕೂಡ ಅಂದುಕೊಳ್ಳುತ್ತಿದ್ದಾರೆ.

ಈ ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಓಡಾಡುತ್ತಿರುವ ಕಾರಣದಿಂದಾಗಿ ದರ್ಶನ್ ರವರು ಕೂಡ ಬೇಸತ್ತಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕಾಗಿ ತಮ್ಮ ಅಭಿಮಾನಿ ಬಳಗದವರಿಗೆ ದರ್ಶನ್ ರವರಿಂದ ಬಂದು ಫರ್ಮಾನು ಹೊರ ಬಂದಿದೆ ಎಂಬುದಾಗಿ ತಿಳಿದುಬಂದಿದೆ. ಅದರ ಪ್ರಕಾರ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ದರ್ಶನ್ ರವರ ಕುಟುಂಬಕ್ಕೆ ಸಂಬಂಧಪಟ್ಟಂತಹ ಫೋಟೋ ಅಥವಾ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಹಾಗಿಲ್ಲ ಎನ್ನುವುದಾಗಿ. ಈ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡುವ ಹಾಗಿಲ್ಲ ಎನ್ನುವುದಾಗಿ ಅಭಿಮಾನಿಗಳ ಬಳಗಕ್ಕೆ ಕಟ್ಟುನಿಟ್ಟಿನ ಆಜ್ಞೆ ಹೊರಬಂದಿದೆ.

ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಅನ್ನೋದು ಗೊತ್ತಿಲ್ಲ ಆದರೆ ಅಭಿಮಾನಿ ಬಳಗದ ವಲಯದಲ್ಲಿ ಈ ಸುದ್ದಿ ಮಾತ್ರ ಜೋರಾಗಿಯೇ ಕೇಳುತ್ತಿದೆ. ದರ್ಶನ್ ರವರು ತಮ್ಮ ದಾಂಪತ್ಯ ಜೀವನದ ಮಾತುಗಳು ಬೇರೆಯವರ ಬಾಯಿಗೆ ಆಹಾರ ಆಗಬಾರದು ಎನ್ನುವ ಕಾರಣಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂಬುದಾಗಿ ಮಾಧ್ಯಮ ವಲಯಗಳು ಚರ್ಚೆ ಮಾಡುತ್ತಿವೆ. ಒಂದು ಲೆಕ್ಕದಲ್ಲಿ ನಿಜವಾಗಿಯೂ ದರ್ಶನ್ ರವರು ಈ ಆಜ್ಞೆಯನ್ನು ಹೊರಡಿಸಿದರೆ ನೈತಿಕ ಮೌಲ್ಯದ ದೃಷ್ಟಿಕೋನದಿಂದ ಇದನ್ನು ನೋಡುವಾಗ ದರ್ಶನ್ ರವರು ತೆಗೆದುಕೊಂಡಿರುವಂತಹ ನಿರ್ಧಾರ ನಿಜಕ್ಕೂ ಕೂಡ ಸರಿ ಅಂತ ನಾವು ಕೂಡ ಒಪ್ಪಿಕೊಳ್ಳಬಹುದು.

ಈ ಎಲ್ಲಾ ವಿಚಾರಗಳನ್ನು ಬಿಟ್ಟು ದರ್ಶನ್ ರವರ ಸಿನಿಮಾ ಜೀವನದ ಬಗ್ಗೆ ಮಾತನಾಡುವುದಾದರೆ, ಇತ್ತೀಚಿಗಷ್ಟೇ ಅವರು ನಾಯಕನಾಗಿ ಕಾಣಿಸಿಕೊಂಡಿರುವ ಕಾಟೇರ ಸಿನಿಮಾ ಅದ್ಭುತ ಯಶಸ್ಸನ್ನು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಅವರಿಂದ ನಾವು ಡೆವಿಲ್ ಸಿನಿಮಾವನ್ನು ನಿರೀಕ್ಷಿಸಬಹುದಾಗಿದೆ. ಅದಾದ ನಂತರ ಪ್ರೇಮ್ ರವರ ನಿರ್ದೇಶನದಲ್ಲಿ ಒಂದು ಸಿನಿಮಾ ಮೂಡಿ ಬರಲಿದ್ದು ಅದಾದ ನಂತರ ಸ್ವಾತಂತ್ರ್ಯ ವೀರ ಸಿಂಧೂರ ಲಕ್ಷ್ಮಣನ ಜೀವನಗಾಥೆಯನ್ನು ಆದರಿಸಿರುವ ಐತಿಹಾಸಿಕ ಸಿನಿಮಾದಲ್ಲಿ ಡಿ ಬಾಸ್ ನಟಿಸಲಿದ್ದಾರೆ. ಸದ್ಯಕ್ಕೆ ಡಿ ಬಾಸ್ ರವರ ಕೈಯಲ್ಲಿ ಸಾಕಷ್ಟು ಸಿನಿಮಾಗಳ ಆಫರ್ ಇದ್ದು, ಅಭಿಮಾನಿಗಳು ಇಷ್ಟಪಡುವಂತಹ ಸಿನಿಮಾಗಳನ್ನು ನೀಡುವುದಕ್ಕೆ ಅವರು ಕೂಡ ಕಾತುರರಾಗಿದ್ದಾರೆ. ಡಿ ಬಾಸ್ ರವರ ಮುಂದಿನ ಬಹು ನಿರೀಕ್ಷಿತ ಸಿನಿಮಾಗಳು ಪೈಕಿಯಲ್ಲಿ ನೀವು ಯಾವ ಸಿನಿಮಾಗೆ ಕಾಯುತ್ತಿದ್ದೀರಾ.

Comments are closed.