Political News: ದಾವಣೆಗೆರೆಯಲ್ಲಿ ಮತ್ತೊಂದು ಹಂತಕ್ಕೆ ಹೋದ ಬಿಟ್ಟಿ ಭಾಗ್ಯ- ಇವತ್ತಿಂದ ಕರೆಂಟ್ ಬಿಲ್ ಕಟ್ಟಬೇಡಿ, DKS, ಸಿದ್ದು ಆರ್ಡರ್. ಆದರೆ ಏನಾಗಿದೆ ಗೊತ್ತೇ?

Political News: ಕೊನೆಗೂ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಉಚಿತ ವಿದ್ಯುತ್ ಗೆ ಮುಖ್ಯಮಂತ್ರಿಗಳಿಂದ ಆರ್ಡರ್ ಸಿಕ್ಕಿದೆ. ವಿದ್ಯುತ್ ಬಿಲ್ (electricity bill) ಅನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಪಾವತಿ ಮಾಡಬಾರದು ಎಂದು ದಾವಣಗೆರೆಯ ಗ್ರಾಮದಲ್ಲಿ ತಮಟೆ ಬಾರಿಸುವ ಮೂಲಕ ಪ್ರಚಾರ ಕಾರ್ಯ ನಡೆಯುತ್ತಿದೆ ಈ ಸುದ್ದಿ ಸೋಶಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗಿದೆ.

ಕಾಂಗ್ರೆಸ್ ಸರ್ಕಾರ (Congress govt) ದ 5 ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಯಾವುದೇ ಒಂದು ಯೋಜನೆಯ ಬಗ್ಗೆ ಸರಿಯಾದ ಸ್ಪಷ್ಟನೆಯನ್ನು ಸರ್ಕಾರ ನೀಡಿಲ್ಲ ಆದರೆ ಕಾಂಗ್ರೆಸ್ ಗ್ಯಾರಂಟಿ ಘೋಷಣೆಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯ ಬಗ್ಗೆ ದಾವಣಗೆರೆಯಲ್ಲಿ ವ್ಯಕ್ತಿ ಒಬ್ಬ ತಮಟೆ ಬಾರಿಸುತ್ತಾ ಸಾಗಿರುವ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: Business Ideas: ಹೆಚ್ಚಿನ ಬಂಡವಾಳವಿಲ್ಲದೆ ಕೂಡ, ಬಿಸಿನೆಸ್ ಆರಂಭ ಮಾಡಿ ಲಕ್ಷ ಲಕ್ಷ ಲಾಭ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನೋಡಿ ಟ್ರೈ ಮಾಡಿ.

ದಾವಣಗೆರೆಯ ಗೋಣಿವಾಡ ಗ್ರಾಮದಲ್ಲಿ ಡಂಗೂರ ಸಾರುತ್ತ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (D.K.Sivakumar) ಇನ್ನು ಮುಂದೆ ಕರೆಂಟ್ ಬಿಲ್ ಕಟ್ಟುವ ಅಗತ್ಯವಿಲ್ಲ ಎಂದು ಆದೇಶ ಹೊರಡಿಸಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾನೆ. ಸದ್ಯ ಈ ವಿಷಯ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳು:

ಚುನಾವಣೆಗೂ ಮೊದಲು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಗೃಹಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ, ಯುವ ನಿಧಿ ಯೋಜನೆ, ಅನ್ನ ಭಾಗ್ಯ ಯೋಜನೆ, ಸಖಿ ಯೋಜನೆಯನ್ನು ನೀಡುವುದಾಗಿ ಘೋಷಿಸಿತ್ತು. ಹಾಗಾಗಿ ಜನರ ಚಿತ್ತ ಕಾಂಗ್ರೆಸ್ ಸರ್ಕಾರದ ಯೋಜನೆಯತ್ತ ಸಾಗಿದೆ. ಸದ್ಯದಲ್ಲಿಯೇ ಈ ಯೋಜನೆಗಳು ಜನರಿಗೆ ಲಭ್ಯವಿದ್ದು, ಮೊದಲ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇದರ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಕಾಂಗ್ರೆಸ್ ಸರ್ಕಾರ ತಿಳಿಸಿದೆ.

Comments are closed.