Film News: ದೇಶವನ್ನೇ ಮತ್ತೊಮ್ಮೆ ಶೇಕ್ ಮಾಡಲು, ರಾಮ್ ಚರಣ್ ಜೊತೆ ಕೈ ಜೋಡಿಸಿದ ಕಾಶ್ಮೀರಿ ಫೈಲ್ಸ್ ನಿರ್ಮಾಪಕ. ಏನಾಗುತ್ತಿದೆ ಗೊತ್ತೇ ??

Film News: ನಟ ರಾಮ್ ಚರಣ್ (Ram Charan) ಅವರ ಬೇಡಿಕೆ ಈಗ ಎಷ್ಟರ ಮಟ್ಟಕ್ಕೆ ಇದೆ ಎಂದು ನಮಗೆಲ್ಲ ಗೊತ್ತೇ ಇದೆ. ಆರ್.ಆರ್.ಆರ್ ಸಿನಿಮಾ (RRR Film) ಮೂಲಕ ಇವರು ಗ್ಲೋಬಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಆರ್.ಆರ್.ಆರ್ ನಂತರ ರಾಮ್ ಚರಣ್ ಅವರು ತಮಿಳಿನ ಖ್ಯಾತ ನಿರ್ದೇಶಕ ಶಂಕರ್ (Director Shankar) ಅವರೊಡನೆ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ಮತ್ತೊಂದು ಹೊಸ ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ಮಾಪಕ ಹಾಗೂ ರಾಮ್ ಚರಣ್ ಅವರು ಕೈ ಜೋಡಿಸಲಿದ್ದಾರೆ. ಇದನ್ನೂ ಓದಿ: Technology: ಮತ್ತೆ ಬರುತ್ತಿದೆ ನೋಕಿಯಾ- ಸಿ22 ಸ್ಮಾರ್ಟ್ ಫೋನ್ ಗಳ ಬೆಲೆ ಎಷ್ಟು ಕಡಿಮೆ ಗೊತ್ತೇ?? ಇದಪ್ಪ ಆಫರ್ ಅಂದ್ರೆ.

ಕಳೆದ ವರ್ಷ ಬಿಡುಗಡೆಯಾದ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು, 400ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿತ್ತು. ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಅಭಿಷೇಕ್ ಅಗರ್ವಾಲ್ (abhishek agarwal). ಇವರು ಕಾಶ್ಮೀರ್ ಫೈಲ್ಸ್ ನಂತರ ಇವರು ಹಿಂದಿ ಮತ್ತು ಸೌತ್ ಎರಡು ಕಡೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಕಾರ್ತಿಕೇಯ2 ಸಿನಿಮಾ ನಿರ್ಮಾಣ ಮಾಡಿದ್ದರು. ಇದೀಗ ರಾಮ್ ಚರಣ್ ಅವರೊಡನೆ ಕೈಜೋಡಿಸಿ ಇಬ್ಬರು ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ. ಇದನ್ನೂ ಓದಿ: Airtel New Plan: ಒಂದೇ ಯೋಜನೆ ಕಡಿಮೆ ಬೆಲೆಯಲ್ಲಿ ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಎಲ್ಲವನ್ನು ಉಚಿತ ಕೊಡಲು ಮುಂದಾದ ಏರ್ಟೆಲ್- ಕಡಿಮೆ ಬೆಲೆ ಪ್ಯಾಕ್ ಗೊತ್ತೇ??

ಆದರೆ ಇಲ್ಲಿ ರಾಮ್ ಚರಣ್ ಅವರು ನಟನೆ ಮಾಡುತ್ತಿಲ್ಲ, ಅಭಿಷೇಕ್ ಅವರೊಡನೆ ನಿರ್ಮಾಪಕನಾಗಿ ಕೈಜೋಡಿಸಲಿದ್ದಾರೆ. ತೆಲುಗಿನಲ್ಲಿ ಈಗಾಗಲೇ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಾಮ್ ಚರಣ್ ಅವರು, ತಮ್ಮ ವಿ ಮೆಗಾ ಪಿಕ್ಚರ್ಸ್ ಸಂಸ್ಥೆ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಎಂದುಕೊಂಡಿದ್ದಾರೆ. ಇವರ ಜೊತೆಗೆ ಯುವಿ ಕ್ರಿಯೇಷನ್ಸ್ ವಿಕ್ರಂ ರೆಡ್ಡಿ, ಹಾಗೂ ಅಭಿಷೇಕ್ ರೆಡ್ಡಿ ಅವರು ಜೊತೆಯಾಗಿ ನಿಲ್ಲಲಿದ್ದಾರೆ..

ಇವರೆಲ್ಲರು ಸೇರಿ ಹೊಸದೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಮಾತುಕತೆ ನಡೆಯುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಈ ಸಿನಿಮಾದಲ್ಲಿ ಯುವ ನಾಯಕ ಮತ್ತು ಯುವ ನಿರ್ದೇಶಕರಿಗೆ ಸಾಥ್ ಕೊಡಲಾಗುತ್ತಿದೆ. ಶೀಘ್ರದಲ್ಲೇ ಈ ಹೊಸ ಸಿನಿಮಾ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ವಿಭಿನ್ನವಾದ ಕಂಟೆಂಟ್ ಕೊಡಬೇಕು ಎಂದು ಈ ಎರಡು ಸಂಸ್ಥೆಗಳು ನಿರ್ಧಾರ ಮಾಡಿವೆ. ಒಟ್ಟಿನಲ್ಲಿ ರಾಮ್ ಚರಣ್ ಅವರು ಹೊಸದೊಂದು ವೆಂಚರ್ ಶುರು ಮಾಡುತ್ತಿದ್ದಾರೆ. ಇದನ್ನೂ ಓದಿ: Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

Comments are closed.