Astrology: ಇದೊಂದು ಸಣ್ಣ ಕೆಲಸ ಮಾಡಿದ್ರೆ ಸಾಕು, ಲಕ್ಷ್ಮಿ ದೇವಿ ನಿಮ್ಮನ್ನು ಬಿಟ್ಟು ಹೋಗೋ ಮಾತೇ ಇಲ್ಲ; ಜೇಬು ಖಾಲಿ ಆಗೋ ಪರಿಸ್ಥಿತಿಯೇ ಬರಲ್ಲ!

Astrology: ನಾವು ದಿನವೂ ಎಷ್ಟೇ ದುಡಿದರು ಎಷ್ಟೇ ಕಷ್ಟಪಟ್ಟರು ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನಮ್ಮ ಮೇಲೆ ಇಲ್ಲದೆ ಇದ್ರೆ ಹಣ ಕೈಯಲ್ಲಿ ನಿಲ್ಲುವುದಿಲ್ಲ. ನಾವು ಸುಂದರವಾದ ಐಷಾರಾಮಿ ಜೀವನ ನಡೆಸಬೇಕು ಎಂದಾದರೆ ಅಲ್ಲಿ ಲಕ್ಷ್ಮೀದೇವಿಯ ಕೃಪೆ ಇರಲೇಬೇಕು. ಕೆಲವೊಮ್ಮೆ ಎಷ್ಟೇ ಪೂಜೆ ಪುನಸ್ಕಾರಗಳನ್ನು ಮಾಡಿದರು ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನೀವು ಮಾಡುವ ಕೆಲವು ಸಣ್ಣಪುಟ್ಟ ವಿಷಯಗಳು ಕೂಡ ಲಕ್ಷ್ಮಿದೇವಿ ನಿಮ್ಮನ್ನು ಬಿಟ್ಟು ಹೋಗದ ಹಾಗೆ ನಿಮ್ಮ ಜೊತೆಗೆ ಇರುವಂತೆ ಮಾಡಿಕೊಳ್ಳಬಹುದು. ಹಾಗಾದರೆ ಲಕ್ಷ್ಮಿಯನ್ನು ಉಳಿಸಿಕೊಳ್ಳಲು ಏನು ಮಾಡಬೇಕು ನೋಡೋಣ. ಇದನ್ನೂ ಓದಿ:Pavithra: ಪವಿತ್ರ ರವರಿಗೆ ಪ್ರೀತಿ ನರೇಶ್ ಮೇಲೆಯೇ?? ಅಥವಾ ಅವರ ಆಸ್ತಿಯ ಮೇಲೆಯೇ? ನೇರವಾಗಿ ಪ್ರಶ್ನೆ ಕೇಳಿದ ಪತ್ರಕರ್ತೆ. ನಟಿ ಒಪ್ಪಿಕೊಂಡು ಹೇಳಿದ್ದೇನು ಗೊತ್ತೆ?

ಮಣ್ಣಿನ ಮಡಿಕೆಯೇ ಪರಿಹಾರ:
ಜ್ಯೋತಿಷ್ಯದಲ್ಲಿ ಹಾಗೂ ವಾಸ್ತು ಪ್ರಕಾರವೂ ಕೂಡ ಈ ಮನೆಯಲ್ಲಿ ಕೆಲವೊಂದು ಕೆಲಸ ಮಾಡಿದರೆ ಲಕ್ಷ್ಮಿದೇವಿಯನ್ನು ಉಳಿಸಿಕೊಳ್ಳಬಹುದು. ಲಕ್ಷ್ಮಿ ದೇವಿ ನಿಮ್ಮನ್ನು ಬಿಟ್ಟು ಹೋಗಬಾರದು ಅಂದರೆ ಇದೊಂದು ಚಿಕ್ಕ ಕೆಲಸ ಮಾಡಿ ಸಾಕು ಒಂದು ಪುಟ್ಟ ಮಣ್ಣಿನ ಮಡಿಕೆಯನ್ನು ತನ್ನಿ. ಅದರಲ್ಲಿ ಒಂದು ರೂಪಾಯಿಗಳ ಐದು ನಾಣ್ಯಗಳನ್ನು ಹಾಕಿ. ಅಕ್ಕಿ, ಗೋಧಿ ಬಾರ್ಲಿ ಯಾವುದಾದರೂ ಧಾನ್ಯವನ್ನು ಆ ಮಡಿಕೆಯಲ್ಲಿ ತುಂಬಿಸಿ. ಮಡಿಕೆಯ ಬಾಯಿಯನ್ನು ಒಂದು ಕೆಂಪು ಬಣ್ಣದ ಬಟ್ಟೆಯಿಂದ ಕಟ್ಟಿ. ಇದನ್ನು ದೇವರ ಮನೆಯಲ್ಲಿಟ್ಟು ಲಕ್ಷ್ಮಿ ದೇವಿಯ ಮೂರ್ತಿ ಅಥವಾ ಫೋಟೋದ ಪಕ್ಕದಲ್ಲಿ ಇರಿಸಿ ಪೂಜೆ ಮಾಡಿ. ಬೆಳಿಗ್ಗೆ ಹಾಗೂ ರಾತ್ರಿ ಪೂಜೆಯ ನಂತರ ಮರುದಿನ ಬೆಳಿಗ್ಗೆಯೂ ಈ ಮಡಿಕೆಯನ್ನು ಲಕ್ಷ್ಮೀದೇವಿಯ ಜೊತೆಗೆ ಪೂಜೆ ಮಾಡಿ ಬಳಿಕ ಈ ಮಡಿಕೆಯನ್ನು ನಿಮ್ಮ ಹಣ ಇಡುವ ಜಾಗದಲ್ಲಿ ಇಡಿ. ಇದರಿಂದ ಧನ ಸಂಪತ್ತುಗಳು ಹೆಚ್ಚಾಗುತ್ತವೆ. ಇದನ್ನೂ ಓದಿ:KMF Job: ನಮ್ಮ ನಂದಿನಿ ಸಂಸ್ಥೆಯಲ್ಲಿ ಇದೆ ಉದ್ಯೋಗಗಳು- ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಹಾಕಿ. ಉದ್ಯೋಗ ಪಡೆಯಿರಿ. ಏನು ಮಾಡಬೇಕು ಗೊತ್ತೇ?

JOSH 2 | Live Kannada News
Astrology: ಇದೊಂದು ಸಣ್ಣ ಕೆಲಸ ಮಾಡಿದ್ರೆ ಸಾಕು, ಲಕ್ಷ್ಮಿ ದೇವಿ ನಿಮ್ಮನ್ನು ಬಿಟ್ಟು ಹೋಗೋ ಮಾತೇ ಇಲ್ಲ; ಜೇಬು ಖಾಲಿ ಆಗೋ ಪರಿಸ್ಥಿತಿಯೇ ಬರಲ್ಲ! https://sihikahinews.com/2023/05/30/do-this-to-hold-lakshmi-at-your-home/

ಅದೇ ರೀತಿಯಾಗಿ ಒಂದು ತೆಂಗಿನಕಾಯಿಯನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ, ದೇವರ ಮನೆಯಲ್ಲಿ ಲಕ್ಷ್ಮಿ ಮೂರ್ತಿಯ ಅಥವಾ ಫೋಟೋದ ಎದುರು ಪೂಜೆ ಮಾಡಿ ನಂತರ ಅದನ್ನು ಹಣ ಇಡುವ ಜಾಗದಲ್ಲಿ ಇರಿಸಿದರೆ ಲಕ್ಷ್ಮಿಯ ಕೃಪೆ ಸಿಗುತ್ತದೆ.

ಇನ್ನು ವ್ಯಾಪಾರ ವ್ಯವಹಾರದಲ್ಲಿ ನಷ್ಟ ಸಂಭವಿಸಿದರೆ ಪ್ರತಿ ಶುಕ್ರವಾರ ಲಕ್ಷ್ಮೀನಾರಾಯಣ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ. ಹೋಗುವಾಗ ಅರಿಶಿನ ಮಿಶ್ರಿತ ಅಕ್ಕಿ ಹಾಗೂ ಕೆಂಪು ಗುಲಾಬಿ ಹೂಗಳನ್ನು ದೇವರಿಗೆ ಅರ್ಪಿಸಿ ಜೊತೆಗೆ ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಮನೆಗೆ ಆಹ್ವಾನಿಸಿ.

ಇನ್ನು ಲಕ್ಷ್ಮಿ ದೇವಿ ಹೆಚ್ಚು ದುರಾಸೆ ಉಳ್ಳವರ ಮನೆಯಲ್ಲಿ ಅಥವಾ ಅನಗತ್ಯವಾಗಿ ಕೋಪ ಮಾಡಿಕೊಳ್ಳುವವರ ಮನೆಯಲ್ಲಿ ನೆಲೆಸುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ನೀವು ಎಷ್ಟು ಸಾತ್ವಿಕವಾಗಿ ಬದುಕುತ್ತಿರೋ ಅಷ್ಟು ಲಕ್ಷ್ಮಿ ದೇವಿಯನ್ನು ಆಕರ್ಷಿಸಬಹುದು. ಇದನ್ನೂ ಓದಿ:Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

Comments are closed.