Film News: ಅಂದು ಅಪ್ಪು ಸಿನಿಮಾ ನೋಡದೆ, ಹುಟ್ಟುಹಬ್ಬ ವಿಶ್ ಮಾಡದೆ, ಇದೀಗ ರಶ್ಮಿಕಾ ಅಪ್ಪು ಬಗ್ಗೆ ಹೇಳಿದ್ದೇನು ಗೊತ್ತೆ? ಇವೆಲ್ಲಾ ನಾಟಕ ಎಂದ ಫ್ಯಾನ್ಸ್. ಬೇಕಿತ್ತಾ ಇವೆಲ್ಲಾ?

Film News: ನಟಿ ರಶ್ಮಿಕಾ ಮಂದಣ್ಣ (Rashmika mandanna) ಅವರು ಕನ್ನಡ ಚಿತ್ರರಂಗದಿನೆಂದ ಕೆರಿಯರ್ ಶುರು ಮಾಡಿ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕೆರಿಯರ್ ನಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರು ಸಹ ರಶ್ಮಿಕಾ ಅವರು ಕನ್ನಡದ ವಿಷಯಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ. ಕನ್ನಡಕ್ಕೆ ಗೌರವ ಮರಿಯಾದೆ ಕೊಡುವುದಿಲ್ಲ, ಕನ್ನಡ ಮಾತನಾಡಲು ಹಿಂಜರಿಯುತ್ತಾರೆ ಎಂದು ಬಹಳ ಟ್ರೋಲ್ ಆಗುತ್ತಾರೆ. ಇದನ್ನೂ ಓದಿ: Investment: 200 ರೂಪಾಯಿ ಬಳಸಿಕೊಂಡವು 10 ಲಕ್ಷಕ್ಕೂ ಹೆಚ್ಚು ಆದಾಯ ತರುವುದು ಹೇಗೆ ಗೊತ್ತೇ?? ಎಲ್ಲರೂ ಮಾಡಿ, ಲಕ್ಷಾಧಿಪತಿಗಳಾಗಿ.

ರಶ್ಮಿಕಾ ಮಂದಣ್ಣ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಜೊತೆಗೆ ಅಂಜನಿಪುತ್ರ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಈ ಮೊದಲು ಅಪ್ಪು (Appu) ಅವರ ಬಗ್ಗೆ ಎಲ್ಲಿಯೂ ಮಾತನಾಡದ ರಶ್ಮಿಕಾ ಮಂದಣ್ಣ ಈಗ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅಪ್ಪು ಅವರ ಗುಣಗಾನ ಮಾಡಿದ್ದಾರೆ. “ಕಿರಿಕ್ ಪಾರ್ಟಿ ಮುಗಿದ ತಕ್ಷಣವೇ ನನಗೆ ಅಂಜನೀಪುತ್ರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.. ಆ ಸಿನಿಮಾವನ್ನು ಮರೆಯೋಕಾಗಲ್ಲ, ನನ್ನ ಮೇಲೆ ನನಗಿಂತ ಹೆಚ್ಚಾಗಿ ಅಪ್ಪು ಸರ್ ಗೆ ವಿಶ್ವಾಸ ಇತ್ತು. ಇದನ್ನೂ ಓದಿ:IRCTC: ಕಡಿಮೆ ಬೆಲೆಗೆ ಸುತ್ತಿ ಬನ್ನಿ ಕರಾವಳಿ ಕರ್ನಾಟಕ- ಆರು ರಾತ್ರಿ, ಐದು ಅಗಲು ಟ್ರಿಪ್ ನಲ್ಲಿ ಎಷ್ಟೆಲ್ಲ ತೋರಿಸುತ್ತಾರೆ ಗೊತ್ತೇ? IRCTC (ರೈಲ್ವೆ) ಪ್ಯಾಕೇಜ್ ಹೇಗಿದೆ ಗೊತ್ತೇ?

ನನ್ನ ಮೊದಲ ಸಿನಿಮಾ ಹಿಟ್ ಆದಾಗ ಅದು ಅದೃಷ್ಟದಿಂದ ಅಂದುಕೊಂಡಿದ್ದೆ.. ನನ್ನ ಶಕ್ತಿಯನ್ನು ನನಗೆ ಪರಿಚಯ ಮಾಡಿಕೊಟ್ಟಿದ್ದು ಪುನೀತ್ ಸರ್. ಶ್ರದ್ಧೆಯಿಂದ ನೀನು ಕೆಲಸ ಮಾಡಿದರೆ ಅದ್ಭುತಗಳನ್ನು ಸೃಷ್ಟಿಸುತ್ತೀಯ ಎಂದು ಹೇಳಿದರು. ಅಂಜನಿಪುತ್ರ ಸಿನಿಮಾದಲ್ಲಿ ನನಗೆ ಸಿಕ್ಕ ಆತ್ಮವಿಶ್ವಾಸದಿಂದಲೇ ನಾನು ಹೊಸ ಭಾಷೆಯ ತೆಲುಗಿನ ಚಲೋ ಸಿನಿಮಾಗೆ ಓಕೆ ಹೇಳಿದೆ.. ನಟನೆಯ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡು ದೊಡ್ಡದಾಗಿ ಯೋಚನೆ ಮಾಡುವುದಕ್ಕೆ ನನಗೆ ಅಪ್ಪು ಸರ್ ಸ್ಪೂರ್ತಿ..

ನಾನು ಅಪ್ಪು ಸರ್ ಅವರನ್ನು ಭೇಟಿ ಆಗಿದ್ದಕ್ಕೆ ಇಂದು ಕೂಡ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ.. ಅವರು ನನಗೆ ಹೇಳಿದ ಮಾತಿನಿಂದಲೇ ಇಂದು ನಾಲ್ಕು ಭಾಷೆ (language)ಗಳಲ್ಲಿ ನಟಿಸುತ್ತಿದ್ದೇನೆ.. ಈಗಲೂ ನಾನು ಅವರಿಗೆ ಥ್ಯಾಂಕ್ಸ್ ಹೇಳುತ್ತೇನೆ.. ಪುನೀತ್ ಸರ್ ನನ್ನ ಜೀವನದಲ್ಲಿ ನೋಡಿದ ಬೆಸ್ಟ್ ವ್ಯಕ್ತಿ ನೀವು..” ಎಂದು ಹೇಳಿದ್ದಾರೆ ನಟಿ ರಶ್ಮಿಕಾ.. ಆದರೆ ಅಭಿಮಾನಿಗಳು ಮಾತ್ರ ಇದೆಲ್ಲವೂ ನಾಟಕ, ಇಷ್ಟು ದಿನ ಮಾತನಾಡದೆ ಇದ್ದಿದ್ದನ್ನು ಈಗ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: Business Ideas: 40 ದಿನಗಳಲ್ಲಿ ಬೆಳೆ ಬರುವ, ಕೆಜಿಗೆ ಕನಿಷ್ಠ 500 ರೂಪಾಯಿಸಿಗುವ ಕೆಂಪು ಬೆಂಡೆಕಾಯಿ ಬೆಳೆಯಿರಿ. ಕೈತುಂಬಾ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ?

Comments are closed.