Gold:ಇನ್ನು ಮುಂದೆ ಚಿನ್ನ ಖರೀದಿಗೆ ಹೊಸ ರೂಲ್ಸ್- ಚಿನ್ನ ಕೊಳ್ಳುವ ಮುನ್ನ ಈ ರೂಲ್ಸ್ ತಿಳಿದುಕೊಳ್ಳಿ, ಇಲ್ಲದಿದ್ದರೆ ನಷ್ಟ ಗ್ಯಾರಂಟಿ. ಏನು ಗೊತ್ತೇ?

Gold: ಒಂದು ವೇಳೆ ನಿಮ್ಮ ಮನೆಯಲ್ಲಿ ಚಿನ್ನ ಇದ್ದು, ನೀವು ಅದನ್ನು ಮಾರಿಬಿಡಬೇಕು ಅಥವಾ ಕರಗಿಸಿ ಹೊಸ ಆಭರಣ ಮಾಡಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದರೆ, ಸರ್ಕಾರ ಈಗ ಚಿನ್ನದ ವಿಷಯದಲ್ಲಿ ಕೆಲವು ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದೆ. ಇದನ್ನು ನೀವು ಪಾಲಿಸಲೇಬೇಕು.ಈಗ BIS ತಂದಿರುವ ಹೊಸ ರೂಲ್ಸ್ ನ ಪ್ರಕಾರ, ಎಲ್ಲ ಚಿನ್ನದ ಮೇಲೆ ಹಾಲ್ ಮಾರ್ಕ್ ಗುರುತು, ಹಾಲ್ ಮಾರ್ಕ್ ನಂಬರ್ ಇರಬೇಕು..ಹಳೆಯ ಚಿನ್ನದ ಮೇಲೆ ಕೂಡ ಹಾಲ್ ಮಾರ್ಕ್ ಗುರುತು ಇರಬೇಕು ಎನ್ನುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

JOSH 2 | Live Kannada News
Gold:ಇನ್ನು ಮುಂದೆ ಚಿನ್ನ ಖರೀದಿಗೆ ಹೊಸ ರೂಲ್ಸ್- ಚಿನ್ನ ಕೊಳ್ಳುವ ಮುನ್ನ ಈ ರೂಲ್ಸ್ ತಿಳಿದುಕೊಳ್ಳಿ, ಇಲ್ಲದಿದ್ದರೆ ನಷ್ಟ ಗ್ಯಾರಂಟಿ. ಏನು ಗೊತ್ತೇ? https://sihikahinews.com/2023/06/14/new-rules-on-gold-purchase/

2023ರ ಏಪ್ರಿಲ್ 1ರಿಂದ ಎಲ್ಲಾ ಚಿನ್ನದ ಆಭರಣದ ಮೇಲೆ, ಹಾಲ್ ಮಾರ್ಕ್ ಹಾಕುವ ಪ್ರಕ್ರಿಯೆ ಶುರುವಾಗಿದೆ. ಹಾಲ್ ಮಾರ್ಕ್ ಗುರುತು ಹಾಕಿಸುವುದು ಹೀಗೆ.. BIS ಹಾಲ್ ಮಾರ್ಕ್ ಇಲ್ಲದ ಒಡವೆಗಳನ್ನು ಅಭರಣಕಾರರಿಗೆ ನೀಡಿ..ಅವರು ಈ ಆಭರಣಗಳನ್ನು ಹಾಲ್ ಮರ್ಕ್ ಪಡೆಯುವುದಕ್ಕೆ BIS ಮೌಲ್ಯಮಾಪನ ಹಾಗೂ ಹಾಲ್ ಮಾರ್ಕಿಂಗ್ ಕೇಂದ್ರಕ್ಕೆ ಕೊಡುತ್ತಾರೆ..ಈ ಕೇಂದ್ರಗಳಲ್ಲಿ ಚಿನ್ನವನ್ನು ಪರಿಶೀಲಿಸಿ..ಹಾಲ್ ಮಾರ್ಕಿಂಗ್ ಮಾಡಿಕೊಡಲಾಗುತ್ತದೆ..

ಹಾಲ್ ಮಾರ್ಕಿಂಗ್ ಮಾಡಿಸಲು ನೀವು ಸ್ವಲ್ಪ ಹಣವನ್ನು ಕೂಡ ಪಾವತಿ ಮಾಡಬೇಕಾಗುತ್ತದೆ. 5 ಅಥವಾ ಅದಕ್ಕಿಂತ ಹೆಚ್ಚಿನ ಆಭರಣ ಇದ್ದರೆ, ಒಂದು ಆಭರಣಕ್ಕೆ 45 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಒಂದೊಂದು ಆಭರಣಕ್ಕೆ ಹಾಲ್ ಮಾರ್ಕಿಂಗ್ ಮಾಡಿಸಲು, 200 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಹಾಲ್ ಮಾರ್ಕಿಂಗ್ ಕೇಂದ್ರ ನಿಮ್ಮ ಆಭರಣವನ್ನು ಪರೀಕ್ಷೆ ಮಾಡಿ, ಅದಕ್ಕೆ ಸರ್ಟಿಫಿಕೇಟ್ ಕೊಡುತ್ತದೆ.

ಚಿನ್ನ ಹೊಂದಿರುವ ಗ್ರಾಹಕರು ಈ ಸರ್ಟಿಫಿಕೇಟ್ ಅನ್ನು ಬಂಗಾರ ವ್ಯಾಪಾರ ಮಾಡುವವರಿಗೆ ತೋರಿಸಬಹುದು. ಈ ರೀತಿಯಾಗಿ ಹಳೆಯ ಚಿನ್ನವನ್ನು ನೀವು ಮಾರಾಟ ಮಾಡಬಹುದು. ಈಗಾಗಲೇ ನಿಮ್ಮ ಹತ್ತಿರ ಹಳೆಯ ಚಿನ್ನ ಇದ್ದು, ಅದರಲ್ಲಿ ಹಾಲ್ ಮಾರ್ಕ್ ಇದ್ದರೆ, ಮತ್ತೊಮ್ಮೆ ಹಾಲ್ ಮಾರ್ಕಿಂಗ್ ಮಾಡಿಸುವ ಅವಶ್ಯಕತೆ ಇಲ್ಲ. ಹಾಲ್ ಮಾರ್ಕ್ ಇರುವ ಒಡವೆಯನ್ನು ಮಾರಾಟ ಮಾಡುವುದು ಸುಲಭ, ಹಾಗೆಯೇ ನೀವು ಅವುಗಳನ್ನು ಕರಗಿಸಿ ಹೊಸ ಡಿಸೈನ್ ಮಾಡಿಸಿಕೊಳ್ಳಬಹುದು.

Comments are closed.