Film News: ಯಶ್ ಜೊತೆ ವೇದಿಕೆಯನ್ನು ನಡುಗಿಸುವಂತೆ ಸ್ಟೆಪ್ ಹಾಕಿದ ಶಿವಗಾಮಿ ರಮ್ಯಾ ಕೃಷ್ಣ – ಹೇಗಿದೆ ಗೊತ್ತೇ ಡಾನ್ಸ್ ವಿಡಿಯೋ??

Film News: ದಕ್ಷಿಣ ಭಾರತ ಚಿತ್ರರಂಗ (South film industry) ದ ಹಿರಿಯನಟಿ ರಮ್ಯಾಕೃಷ್ಣ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಇವರು ಈಗಲೂ ಕೂಡ ಅದೆಷ್ಟೋ ಹುಡುಗರ ಕನಸಿನ ಕನ್ಯೆ ಎನ್ನಬಹುದು. 90ರ ದಶಕದಲ್ಲಿ ಬಹುಬೇಡಿಕೆಯ ನಟಿ ಇವರು, ಯಾವುದೇ ಸ್ಟಾರ್ ಹೀರೋ (Star hero)ಗಳಿಗೂ ಕಡಿಮೆ ಇಲ್ಲ ಎನ್ನುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಶಿವಗಾಮಿಯಾಗಿ ರಮ್ಯಾ ಕೃಷ್ಣನ್ (Ramya krishnan) ಅವರು ಇನ್ನಷ್ಟು ಜನಪ್ರಿಯತೆ ಗಳಿಸಿದ್ದಾರೆ.

JOSH 2 | Live Kannada News
Film News: ಯಶ್ ಜೊತೆ ವೇದಿಕೆಯನ್ನು ನಡುಗಿಸುವಂತೆ ಸ್ಟೆಪ್ ಹಾಕಿದ ಶಿವಗಾಮಿ ರಮ್ಯಾ ಕೃಷ್ಣ - ಹೇಗಿದೆ ಗೊತ್ತೇ ಡಾನ್ಸ್ ವಿಡಿಯೋ?? https://sihikahinews.com/2023/06/14/yash-dance-with-ramya-krishna/

ರಮ್ಯಾಕೃಷ್ಣ ಅವರ ವಯಸ್ಸು 50 ದಾಟಿದ್ದರು ಕೂಡ, ಅವರ ಗ್ಲಾಮರ್ (Glamor) , ಸ್ಟೈಲ್ (Style) ಎಲ್ಲವೂ ಇಂದಿಗೂ ಅದೇ ರೀತಿ ಇದೆ. ಎವರ್ ಗ್ರೀನ್ ಹೀರೋಯಿನ್ ಎನ್ನಿಸಿಕೊಂಡಿದ್ದಾರೆ ರಮ್ಯಕೃಷ್ಣನ್.. ಇನ್ನು ಈಗ ಭಾರತ ದೇಶದಲ್ಲಿ ಟ್ರೆಂಡ್ ಆಗಿರುವವರು ನಟ ಯಶ್. ಇವರನ್ನು ಎಲ್ಲರೂ ರಾಕಿ ಭಾಯ್ (Rocky Bhai) ಎಂದೇ ಗುರುತಿಸುತ್ತಾರೆ. ಸಣ್ಣಪುಟ್ಟ ಧಾರವಾಹಿಗಳಲ್ಲಿ ನಟಿಸುತ್ತ ಕೆರಿಯರ್ ಶುರು ಮಾಡಿದ ಯಶ್ (Yash) ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಕೆಜಿಎಫ್ ಸಿನಿಮಾ ಇವರನ್ನು ಆ ಹಂತಕ್ಕೆ ತೆಗೆದುಕೊಂಡು ಹೋಯಿತು. ಇದನ್ನೂ ಓದಿ: Bluetick: ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ನೀವು ಸೆಲೆಬ್ರೆಟಿ ಅಲ್ಲದೆ ಇದ್ದರೂ ಸುಲಭವಾಗಿ ಬ್ಲೂ ಟಿಕ್, ಪಡೆಯುವುದು ಹೇಗೆ ಗೊತ್ತೇ?? ದೇವ್ರೇ ಇಷ್ಟೊಂದು ಸುಲಭನಾ??

ಕೆಜಿಎಫ್2 ಬಿಡುಗಡೆ ಆದಮೇಲೆ ಅಂತೂ, ಯಶ್ ಅವರ ಹವಾ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಇದೀಗ ಯಶ್ ಹಾಗೂ ರಮ್ಯಕೃಷ್ಣ ಇಬ್ಬರು ವೇದಿಕೆಯ ಮೇಲೆ ಸ್ಟೆಪ್ಸ್ ಹಾಕಿದ್ದಾರೆ. ಈ ವಿಶೇಷವಾದ ಸಂದರ್ಭ ನಡೆದದ್ದು ಅಂಬರೀಷ್ ಹಾಗೂ ಸುಮಲತಾ ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಷ್ ಅವರ ಸಂಗೀತ್ ಶಾಸ್ತ್ರದಲ್ಲಿ. ಈ ಕಾರ್ಯಕ್ರಮ ಖಾಸಗಿಯಾಗಿ ನಡೆದಿದ್ದು, ಸಾಕಷ್ಟು ಸೆಲೆಬ್ರಿಟಿಗಳು ಬಂದಿದ್ದರು.

ಇದೇ ವೇದಿಕೆಯಲ್ಲಿ ರಾಕಿ ಭಾಯ್ ಯಶ್ ಹಾಗೂ ಶಿವಗಾಮಿ ರಮ್ಯಕೃಷ್ಣ ಅವರು ಜೊತೆಯಾಗಿ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಇವರಿಬ್ಬರು ಜೊತೆಯಾಗಿ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಿ, ರಾಕಿ ಭಾಯ್ ರಾಜಮಾತೆಯನ್ನು ಮೀಟ್ ಮಾಡಿದ್ದಾರೆ ಎಂದು ತಮಾಷೆಯಾಗಿ ಕಮೆಂಟ್ಸ್ ಬರೆಯುತ್ತಿದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳು ಇವರಿಬ್ಬರನ್ನು ನೋಡಿ ಸಂತೋಷ ಪಟ್ಟಿರುವುದಂತೂ ನಿಜ. ಇದನ್ನೂ ಓದಿ: Cricket News: ವಿಶ್ವಕಪ್ ಫೈನಲ್ ಸೋತ ಬೆನ್ನಲ್ಲೇ ಭಾರತ ತಂಡಕ್ಕೆ ಭರ್ಜರಿ ಸಿಹಿ ಸುದ್ದಿ- ತಂಡ ಸೇರಿಕೊಂಡ ಬೆಂಕಿ ಬಿರುಗಾಳಿ ಆಟಗಾರ. ಯಾರು ಗೊತ್ತೆ??ಇನ್ನು ಬನ್ರೋ ಯಾರ್ ಬರ್ತೀರಾ.

Comments are closed.