kannada Serial: ಸುಳ್ಳು ಹೇಳಿ ಮದುವೆ ಆಗಿ ಈಗ ಮತ್ತೆ ಹಸಮಣೆ ಮೇಲೆ ಕುಳಿತಿರುವ ಚಾರು ಅಲಿಯಾಸ್ ಮೌನ ಅವರ ಕಥೆ ಗೊತ್ತಾ? ಏನಾಗಿತ್ತು ನೋಡಿ!

kannada Serial: ಕಲರ್ಸ್ ಕನ್ನಡ (colours kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಒಳ್ಳೆಯ ಧಾರವಾಹಿಗಳಲ್ಲಿ ಒಂದು ರಾಮಾಚಾರಿ ಧಾರವಾಹಿ (Serial) . ಈ ಧಾರವಾಹಿಯಲ್ಲಿ ಈಗ ಒಳ್ಳೆಯ ಟ್ವಿಸ್ಟ್ ಜೊತೆಗೆ ಕಥೆ ಸಾಗುತ್ತಿದೆ. ಚಾರು ಮದುವೆ ಫಿಕ್ಸ್ ಆಗಿದ್ದು, ಮದುವೆ ದಿನವೇ ರಾಮಾಚಾರಿ (Ramachari) ಜೊತೆಗೆ ಮದುವೆ ಆಗಿರುವ ವಿಷಯ ರಿವೀಲ್ ಆಗಿದೆ. ರಾಮಾಚಾರಿ ತಂದೆ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ. ಇನ್ನು ಈ ಧಾರವಾಹಿಯಲ್ಲಿ ನಾಯಕಿ ಚಾರು ಪಾತ್ರದಲ್ಲಿ ನಟಿಸುತ್ತಿರುವ ನಟಿ ನಿಜಕ್ಕೂ ಯಾರು? ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ?

JOSH 2 | Live Kannada News
kannada Serial: ಸುಳ್ಳು ಹೇಳಿ ಮದುವೆ ಆಗಿ ಈಗ ಮತ್ತೆ ಹಸಮಣೆ ಮೇಲೆ ಕುಳಿತಿರುವ ಚಾರು ಅಲಿಯಾಸ್ ಮೌನ ಅವರ ಕಥೆ ಗೊತ್ತಾ? ಏನಾಗಿತ್ತು ನೋಡಿ! https://sihikahinews.com/2023/06/17/fact-about-ramachari-charu/

ಚಾರು ಪಾತ್ರದಲ್ಲಿ ನಟಿಸುತ್ತಿರುವ ನಾಯಕಿಯ ನಿಜವಾದ ಹೆಸರು ಮೌನ ಗುಡ್ಡೆಮನೆ. ಇವರು ಮೂಲತಃ ಮಂಗಳೂರಿನ ಬೆಡಗಿ. 2020ರಲ್ಲಿ ಮಿಸ್ ತುಳುನಾಡು ಕಾಂಟೆಸ್ಟ್ ನ ರನ್ನರ್ ಅಪ್ ಆಗಿದ್ದರು ಮೌನ. ಇವರು ಒಂದೆರಡು ಆಲ್ಬಮ್ ಸಾಂಗ್ ಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಮೌನ ಅವರು ನಟಿಸುತ್ತಿರುವ ಮೊದಲ ಧಾರವಾಹಿ ರಾಮಾಚಾರಿ. ಈ ಧಾರಾವಾಹಿಯಲ್ಲಿ ಇವರು ಆರಂಭದಲ್ಲಿ ಅಹಂಕಾರ, ದುಡ್ಡಿನ ದರ್ಪ ಇರುವ ಶ್ರೀಮಂತ ಮನೆಯ ಹುಡುಗಿ ಆಗಿದ್ದರು.

ಆದರೆ ರಾಮಾಚಾರಿಯನ್ನು ಪ್ರೀತಿಸಲು ಶುರು ಮಾಡಿದ ನಂತರ, ಬದಲಾಗಿ, ಒಳ್ಳೆಯ ಮನಸ್ಸಿನ ಹುಡುಗಿ ಆಗಿದ್ದಾಳೆ ಚಾರು. ರಾಮಾಚಾರಿಯನ್ನು ಗುಟ್ಟಾಗಿ ಮದುವೆಯಾಗಿ, ಈಗ ರಾಮಾಚಾರಿ ಆಕೆಯನ್ನು ಹೆಂಡತಿ ಎಂದು ಒಪ್ಪಿಕೊಂಡಿದ್ದು, ಮನೆಯವರು ಈ ವಿಷಯವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಇದೆ. ಮೊದಲ ಧಾರವಾಹಿಯಲ್ಲೇ ಈ ಥರದ ಒಂದು ಪಾತ್ರದಲ್ಲಿ ನಟಿಸಿ ಮೌನ ಗುಡ್ಡೆಮನೆ ಜನರ ಮನಸ್ಸನ್ನು ಗೆದ್ದಿದ್ದಾರೆ. ಉತ್ತಮವಾದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಚಾರು ಪಾತ್ರ ಮೌನ ಅವರಿಗೆ ವಯಸ್ಸಿಗೆ ಮೀರಿದ ಪಾತ್ರ ಎಂದು ಹೇಳಬಹುದು, ಏಕೆಂದರೆ ಮೌನ ಅವರಿಗೆ ಈಗ ಕೇವಲ 20 ವರ್ಷ ವಯಸ್ಸು. 16 ವರ್ಷವಿದ್ದಾಗ, 17 ವರ್ಷ ಎಂದು ಸುಳ್ಳು ಹೇಳಿ ಮಾಡೆಲಿಂಗ್ ಶುರು ಮಾಡಿದ್ದರು ಮೌನ. ನಂತರ ಧಾರವಾಹಿಯ ಅವಕಾಶ ಪಡೆದರು. ಒಟ್ಟಿನಲ್ಲಿ ಇವರ ನಟನೆಯ ಮೂಲಕ ಉತ್ತಮ ಹಂತವನ್ನು ತಲುಪುತ್ತಿದ್ದಾರೆ. ಮೌನ ಗುಡ್ಡೆಮನೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಆಗಾಗ ರೀಲ್ಸ್ ಶೇರ್ ಮಾಡುವುದನ್ನು ಸಹ ನೋಡಬಹುದು.

Comments are closed.