YouTube: ಇನ್ನು ಮುಂದೆ ಯೂಟ್ಯೂಬ್ ನಲ್ಲಿ ಹಣ ಬರೋದಕ್ಕೆ ಸಾವಿರ ಸಬ್ಸ್ಕ್ರಿಪ್ಶನ್ ಆಗುವವರೆಗೂ ಕಾಯಬೇಕಿಲ್ಲ, ಕೇವಲ 500 ಚಂದಾದಾರರು ಆದ್ರೂ ಸಾಕು ಯೂಟ್ಯೂಬ್ ಹಣ ಕೊಡತ್ತೆ! ಮಿಸ್ ಮಾಡ್ಕೋಬೇಡಿ!

YouTube: ಯೂಟ್ಯೂಬ್ ಈಗ ಟ್ರೆಂಡಿಂಗ್ ವಿಚಾರ ಎಂದು ಹೇಳಬಹುದು. ಯೂಟ್ಯೂಬ್ ಮೂಲಕ ಸಾಕಷ್ಟು ಜನರು ಹಣ ಗಳಿಸುತ್ತಿದ್ದಾರೆ, ಆದರೆ ಯೂಟ್ಯೂಬ್ ನಲ್ಲಿ ಹಣ ಗಳಿಸುವುದು ಅಷ್ಟು ಸುಲಭವಲ್ಲ. ಯೂಟ್ಯೂಬ್ ಪಾಲುದಾರರ ಕಾರ್ಯಕ್ರಮಕ್ಕೆ (YPP) ಗೆ ಸೇರಲು ಮಾನದಂಡವಿದೆ, ಇದಕ್ಕಾಗಿ 1000 ಚಂದಾದಾರರು ಹಾಗೂ 4000 ಗಂಟೆಗಳ ವೀಕ್ಷಣೆಯ ಸಮಯದ ಗುರಿ ತಲುಪಬೇಕು. ಆದರೆ ಹಲವರಿಗೆ ಇದನ್ನು ಸಾಧಿಸಲು ಸಾಧ್ಯವಾಗಿಲ್ಲ..

JOSH 2 | Live Kannada News
YouTube: ಇನ್ನು ಮುಂದೆ ಯೂಟ್ಯೂಬ್ ನಲ್ಲಿ ಹಣ ಬರೋದಕ್ಕೆ ಸಾವಿರ ಸಬ್ಸ್ಕ್ರಿಪ್ಶನ್ ಆಗುವವರೆಗೂ ಕಾಯಬೇಕಿಲ್ಲ, ಕೇವಲ 500 ಚಂದಾದಾರರು ಆದ್ರೂ ಸಾಕು ಯೂಟ್ಯೂಬ್ ಹಣ ಕೊಡತ್ತೆ! ಮಿಸ್ ಮಾಡ್ಕೋಬೇಡಿ! https://sihikahinews.com/2023/06/17/youtube-monetization/

ಅಂಥವರಿಗಾಗಿ ಈಗ ಯೂಟ್ಯೂಬ್ ಮಾನದಂಡಗಳಲ್ಲಿ ಬದಲಾವಣೆ ಮಾಡುವ ಮೂಲಕ ಒಂದು ಗುಡ್ ನ್ಯೂಸ್ ಕೊಟ್ಟಿದೆ. ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಗಳು ಇನ್ನುಮುಂದೆ 500 ಚಂದಾದಾರರನ್ನು ಹೊಂದಿದ್ದು, 3000 ಗಂಟೆಗಳ ವೀಕ್ಷಣೆಯ ಅವಧಿ ಪೂರ್ತಿ ಮಾಡಿದರೆ ಸಾಕು ನೀವು ಯೂಟ್ಯೂಬ್ ಇಂದ ಸಂಪಾದನೆ ಮಾಡಬಹುದು. YPP ಯಲ್ಲಿ ಈ ಕೆಲವು ಪ್ರಮುಖ ಬದಲಾವಣೆಗಳನ್ನು ತಂದ ಯೂಟ್ಯೂಬ್, 12 ತಿಂಗಳುಗಳ ಸಮಯದಲ್ಲಿ..

500 ಚಂದಾದಾರರು ಮತ್ತು 3000 ಗಂಟೆಗಳ ವೀಕ್ಷಣೆ ಪೂರೈಸಿದರೆ, YPP ಗೆ ಸೇರಬಹುದು ಎಂದು ತಿಳಿಸಿದೆ. ಒಂದು ಸಾರಿ ನೀವು YPP ಗೆ ಸೇರಿದರೆ ,ಯೂಟ್ಯೂಬ್ ಇಂದಲೇ ನಿಮಗೆ ಜಾಹೀರಾತುಗಳು ಸಿಗುತ್ತದೆ, ಅವುಗಳ ಮೂಲಕ, ಚಾನೆಲ್ subscription, ಸೂಪರ್ ಚಾಟ್, ಸೂಪರ್ ಸ್ಟಿಕರ್, ಹಾಗೂ ಇನ್ನಿತರ ರೀತಿಯಲ್ಲಿ ಹಣ ಗಳಿಸಬಹುದು. ಶಾರ್ಟ್ಸ್ ಮಾಡುವವರಿಗೂ ಸಹ ಯೂಟ್ಯೂಬ್ ಇಂದ ಗುಡ್ ನ್ಯೂಸ್ ಸಿಕ್ಕಿದ್ದು, ಶಾರ್ಟ್ಸ್ ಇಂದ ಹಣ ಪಡೆಯಲು ಇನ್ನುಮುಂದೆ 10ಮಿಲಿಯನ್ ವೀಕ್ಷಣೆ ಅಗತ್ಯವಿಲ್ಲ, 3 ಮಿಲಿಯನ್ ವೀಕ್ಷಣೆ ಇದ್ದರು ಸಾಕು. ಹಣ ಗಳಿಸಬಹುದು.

ಈ ಹೊಸ ನಿಯಮಗಳನ್ನು US, UK, ಕೆನಡಾ, ಸೌತ್ ಕೊರಿಯಾ ಇಲ್ಲೆಲ್ಲಾ ಶುರು ಮಾಡಲಾಗಿದೆ. ಬೇರೆ ದೇಶಗಳಿಗೂ ಈ ನೀತಿ ಬರಲಿದೆ. YPP ಪ್ರೋಗ್ರಾಮ್ ಗೆ ಸೇರಲು, ನಿಮ್ಮ ಯೂಟ್ಯೂಬ್ ಚಾನೆಲ್ ಮಿನಿಮಮ್ 500 ಚಂದಾದಾರರನ್ನು ಹೊಂದಿರಬೇಕು, 3 ತಿಂಗಳ ಒಳಗೆ ಕನಿಷ್ಠ 3 ವಿಡಿಯೋ ಅಪ್ಲೋಡ್ ಆಗಿರಬೇಕು. ಒಂದು ವರ್ಷದಲ್ಲಿ 3000 ಗಂಟೆಗಳ ವೀಕ್ಷಣೆ ಆಗಿರಬೇಕು. ಶಾರ್ಟ್ಸ್ ಅಥವಾ ಶಾರ್ಟ್ ವಿಡಿಯೋ ಆಗಿದ್ದರೆ 90 ಡೇಸ್ ಒಳಗೆ 3 ಮಿಲಿಯನ್ ವೀಕ್ಷಣೆ ಆಗಿರಬೇಕು. ಇದೆಲ್ಲವನ್ನು ನೆನಪಿಟ್ಟು, ಯೂಟ್ಯೂಬ್ ಮೂಲಕ ನೀವು ಕೂಡ ಹಣ ಗಳಿಸಲು ಶುರು ಮಾಡಿ.

Comments are closed.