Film News: ’ಆದಿ ಪುರುಷ್’ ಥಿಯೇಟರ್ ನಲ್ಲೂ ಮೊಳಗಿದ’ ಜೈಶ್ರಿರಾಮ್’ ಘೋಷಣೆ, ಗಳಿಕೆ ಹೆಚ್ಚಳಕ್ಕೂ ಕಾರಣವಾಯ್ತಾ? ಒಟ್ಟೂ ಗಳಿಕೆ ಇಷ್ಟೋಂದಾ?

Film News: ತೆಲುಗು ಚಿತ್ರರಂಗದ ಡಾರ್ಲಿಂಗ್ ನಟ ಪ್ರಭಾಸ್ (Prabhas) ಅವರ ಆದಿಪುರುಷ್ ಸಿನಿಮಾ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಇದು ರಾಮಾಯಣದ ದೃಶ್ಯಕಾವ್ಯವನ್ನು ತೆರೆಮೇಲೆ ತಂದಿರುವ ಸಿನಿಮಾ. ನಟ ಪ್ರಭಾಸ್ ಅವರು ರಾಮನಾಗಿ, ನಟಿ ಕೃತಿ ಸನೊನ್ ಅವರು ಸೀತೆಯ ಪಾತ್ರದಲ್ಲಿ, ನಟ ಸೈಫ್ ಅಲಿ ಖಾನ್ ಅವರು ರಾವಣನ ಪಾತ್ರದಲ್ಲಿ, ದೇವದತ್ತ ಅವರು ಹನುಮಂತನ ಪಾತ್ರದಲ್ಲಿ ನಟಿಸಿರುವ ಸಿನಿಮಾ.

JOSH 2 | Live Kannada News
Film News: ’ಆದಿ ಪುರುಷ್’ ಥಿಯೇಟರ್ ನಲ್ಲೂ ಮೊಳಗಿದ’ ಜೈಶ್ರಿರಾಮ್’ ಘೋಷಣೆ, ಗಳಿಕೆ ಹೆಚ್ಚಳಕ್ಕೂ ಕಾರಣವಾಯ್ತಾ? ಒಟ್ಟೂ ಗಳಿಕೆ ಇಷ್ಟೋಂದಾ? https://sihikahinews.com/2023/06/18/film-news-adipurush-collection/

ಬಾಲಿವುಡ್ ನ ಓಂ ರಾವತ್ ಅವರು ಸಿನಿಮಾ ನಿರ್ದೇಶನ ಮಾಡಿದ್ದು, ಬರೋಬ್ಬರಿ 550 ಕೋಟಿ ಬಜೆಟ್ ನಲ್ಲಿ ತಯಾರಾಗಿರುವ ಆದಿಪುರುಷ್ ಸಿನಿಮಾ ನಿನ್ನೆ ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿದೆ. ಇಂಥ ದೊಡ್ಡ ಸಿನಿಮಾ ಎಂದಮೇಲೆ, ಅದರಲ್ಲು ಪ್ರಭಾಸ್ ಅವರ ಸಿನಿಮಾ ಎಂದಮೇಲೆ ಫಸ್ಟ್ ಡೇ ಕಲೆಕ್ಷನ್ ಎಷ್ಟಿದೆ ಎಂದು ತಿಳಿಯುವ ಕುತೂಹಲ ಎಲ್ಲರಲ್ಲೂ ಇರುತ್ತದೆ..

ಪ್ರಭಾಸ್ ಅವರ ಅಭಿಮಾನಿಗಳ ಕಡೆಯಿಂದ ಸಿನಿಮಾಗೆ ಬಿಗ್ ಓಪನಿಂಗ್ ಸಿಕ್ಕಿದೆ, ಎಲ್ಲೆಡೆ ಜೈ ಶ್ರೀರಾಮ್ ಕೂಗು ಕೇಳಿಬರುತ್ತಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭರ್ಜರಿ ಓಪನಿಂಗ್ ಪಡೆದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆದರೆ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮೊದಲ ದಿನದ ಕಲೆಕ್ಷನ್ ಸುಮಾರು 85 ಕೋಟಿ ತಲುಪಬಹುದು ಎಂದು ಹೇಳಲಾಗುತ್ತಿದೆ.

ಪ್ರಭಾಸ್ ಅವರ ಹಿಂದಿನ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಹೋಲಿಸಿದರೆ ಇದು ಕಡಿಮೆ ಆಗಿದೆ. ಆದಿಪುರುಷ್ ಸಿನಿಮಾ ಮೊದಲ ದಿನವೇ ಆನ್ಲೈನ್ ನಲ್ಲಿ ಲೀಕ್ ಆಗಿದ್ದು, ಇದು ಕೂಡ ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಹೇಗಿರುತ್ತದೆ, ಬಾಕ್ಸ್ ಆಫೀಸ್ ನಲ್ಲಿ 550 ಕೋಟಿ ಗಳಿಕೆ ಮಾಡುತ್ತಾ ಎಂದು ಕಾದು ನೋಡಬೇಕಿದೆ.

Comments are closed.