Gold Rate: ಬೆಂಗಳೂರಿನಲ್ಲಿ ಆಷಾಡದ ಪ್ರಭಾವ ದಿಡೀರ್ ಕುಸಿದ ಬೆಳ್ಳಿ, ಚಿನ್ನದ ಬೆಲೆ- ನೋಡಿ ಖರೀದಿ ಮಾಡಿ, ಉತ್ತಮ ಆದಾಯ ಫಿಕ್ಸ್. ಎಷ್ಟಾಗಿದೆ ಗೊತ್ತೇ?

Gold Rate: ಚಿನ್ನ ಬೆಳ್ಳಿ ಖರೀದಿ ಮಾಡಲು ನಮ್ಮ ದೇಶದ ಹೆಣ್ಣುಮಕ್ಕಳು ಸದಾ ಸಿಧ್ಧವಾಗಿರುತ್ತಾರೆ. ಮದುವೆಗಳು, ಹಬ್ಬ ಹರಿದಿನಗಳ ಸಂಭ್ರಮ, ಇದೆಲ್ಲವೂ ಇದ್ದರೆ ಚಿನ್ನ ಖರೀದಿ ಮಾಡಿಯೇ ಮಾಡುತ್ತಾರೆ. ಕೆಲವು ತಿಂಗಳುಗಳ ಹಿಂದೆ ಚಿನ್ನದ ಬೆಲೆಯಲ್ಲಿ ತೀವ್ರವಾಗಿ ಏರಿಕೆಯಾಗಿತ್ತು. ಇದರಿಂದ ಮಧ್ಯಮವರ್ಗದ ಜನರು ಚಿನ್ನ ಕೊಂಡುಕೊಳ್ಳುವುದೇ ಕಷ್ಟ ಎನ್ನುವ ಹಾಗೆ ಆಗಿತ್ತು. ಆದರೆ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಲೇ ಇದೆ.

ಹೌದು, ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬರುತ್ತಲೇ ಇದ್ದು, ಈಗಲೂ ಕೂಡ ಮುಂದುವರೆದಿದೆ. ಹೀಗೆ ಸತತವಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುತ್ತಿರುವುದು ಚಿನ್ನ ಪ್ರಿಯರಿಗೆ ಬಹಳ ಒಳ್ಳೆಯ ಸುದ್ದಿ ಎಂದರೆ ತಪ್ಪಲ್ಲ. ಅಮೆರಿಕಾದಲ್ಲಿ ಬಡ್ಡಿ ದರ ಏರಿಕೆ ಆಗಬಹುದು ಎನ್ನಲಾಗುತ್ತಿದ್ದು, ಇದರಿಂದಾಗಿ ಭಾರತದಲ್ಲಿ ಚಿನ್ನದ ಬೆಲೆ ಕಡಿಮೆ ಆಗುತ್ತಿದೆ. ಒಂದು ವೇಳೆ ನೀವು ಚಿನ್ನ ಖರೀದಿ ಮಾಡಿಬೇಕು ಎಂದುಕೊಂಡಿದ್ದರೆ ಇದು ಸರಿಯಾದ ಸಮಯ.

ಈಗ ಜಾಗತಿಕವಾಗಿ ಬಂಗಾರದ ಬೆಲೆಯಲ್ಲಿ ತೀವ್ರವಾದ ಏರಿಳಿತ ಉಂಟಾಗುತ್ತಿದೆ. ಪ್ರಸ್ತುತ ಅಮೆರಿಕಾ ಹಾಗೂ ದುಬೈನಲ್ಲಿ ಚಿನ್ನದ ಬೆಲೆ 49,000 ಸಾವಿರಕ್ಕೆ ಇಳಿದಿದೆ. ಸಿಂಗಾಪುರ್, ಕುವೈತ್ ಇಲ್ಲಿ ಸಹ ಚಿನ್ನದ ಬೆಲೆ ಸುಮಾರು 49,000 ಕ್ಕೆ ಬಂದು ನಿಂತಿದೆ. ಇನ್ನು ಭಾರತದಲ್ಲಿ ಸಹ ಇದೇ ರೀತಿ ಇಳಿಕೆ ಆಗಿದೆ. ಹಾಗಿದ್ದರೆ ಪ್ರಸ್ತುತ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಸುತ್ತೇವೆ ತಪ್ಪದೇ ನೋಡಿ..

ಪ್ರಸ್ತುತ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ₹54,450 ರೂಪಾಯಿ ಆಗಿದೆ, 24 ಕ್ಯಾರೆಟ್ ಚಿನ್ನದ ಬೆಲೆ ₹59,450 ರೂಪಾಯಿ ಆಗಿದೆ. ಇನ್ನು ಬೆಳ್ಳಿಯ ಬೆಲೆ ಎಷ್ಟಿದೆ ಎಂದರೆ 100ಗ್ರಾಮ್ ಬೆಳ್ಳಿಗೆ ₹7,200 ರೂಪಾಯಿ ಆಗಿದ್ದು, 1ಕೆಜಿ ಬೆಳ್ಳಿಗೆ ₹72,000 ರೂಪಾಯಿ ಆಗಿದೆ. ಈಗ ಇಷ್ಟು ಕಡಿಮೆ ಆಗಿದ್ದು, ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ₹7000 ತಲುಪಬಹುದು ಎನ್ನಲಾಗುತ್ತಿದೆ.

Comments are closed.