Technology: ಕೇವಲ 1,500ರೂ. ಗಳಿಗೆ EMI ಹಾಕಿಕೊಂಡು ಬ್ರ್ಯಾಂಡೆಡ್ ಲಾಪ್ ಟಾಪ್ ಖರೀದಿ ಮಾಡಿ; ಕೆಲವೇ ದಿನದ ಆಫರ್ ಮಾತ್ರ!

Technology: ಪ್ರಪಂಚದಲ್ಲಿ ಕೋವಿಡ್ ಶುರುವಾಗಿ ಜನರ ಜೀವನ, ಜೀವನಶೈಲಿ ಬದಲಾಗಿ ಹೋಗಿದೆ. ಈಗಲೂ ಕೂಡ ಕೆಲವು ಕಡೆ ಆನ್ಲೈನ್ ಕ್ಲಾಸ್ ಗಳು ನಡೆಯುತ್ತಿದೆ. ಈ ಥರ ಆನ್ಲೈನ್ ಕ್ಲಾಸ್ ಗಳು, ಮಕ್ಕಳ ಓದು ಇದಕ್ಕೆಲ್ಲ ನಮ್ಮ ಬಳಿ ಒಂದು ಲ್ಯಾಪ್ ಟಾಪ್ ಇದ್ದರೆ ಉತ್ತಮ ಎಂದು ಅನ್ನಿಸುವುದು ಖಂಡಿತ. ಹೀಗೆ ನಿಮ್ಮ ಮಕ್ಕಳ ಓದಿಗೋಸ್ಕರ ಲ್ಯಾಪ್ ಟಾಪ್ ಖರೀದಿ ಮಾಡಬೇಕು ಎಂದು ನೀವು ಅಂದುಕೊಂಡಿದ್ದರೆ ಕಡಿಮೆ ಬೆಲೆಯಲ್ಲಿ ಸಿಗುವ ಉತ್ತಮ ಲ್ಯಾಪ್ ಟಾಪ್ ಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಸಾಮಾನ್ಯವಾಗಿ ಲ್ಯಾಪ್ ಟಾಪ್ ಖರೀದಿ ಮಾಡಬೇಕು ಎಂದರೆ ಅದರಲ್ಲಿ ಪ್ರೊಸೆಸರ್ ಹೇಗಿದೆ, RAM ಎಷ್ಟಿದೆ, ಸ್ಟೋರೇಜ್ ಹೇಗಿದೆ, ಬ್ಯಾಟರಿ ಹೇಗಿದೆ ಇಂಥ ವಿಷಯಗಳನ್ನು ತಿಳಿದುಕೊಳ್ಳಬೇಕು. ಇಂದು ನಾವು ನಿಮಗೆ ತಿಳಿಸುವ ಲ್ಯಾಪ್ ಟಾಪ್ ಬೆಲೆ ಕಡಿಮೆ ಎನ್ನುವುದರ ಜೊತೆಗೆ ಉತ್ತಮವಾದ ಫೀಚರ್ಸ್ ಗಳನ್ನು ಸಹ ಹೊಂದಿದೆ. ಜನರು ಸುಲಭವಾಗಿ ಈ ಲ್ಯಾಪ್ ಟಾಪ್ ಖರೀದಿ ಮಾಡಬಹುದು. ಇದು ಮತ್ಯಾವುದು ಅಲ್ಲ, RedmiBook Pro ಲ್ಯಾಪ್ ಟಾಪ್ ಆಗಿದೆ..

ಈ ಲ್ಯಾಪ್ ಟಾಪ್ ಇಂಟೆಲ್ ಕೋರ್ ನ iಸೀರೀಸ್ ನ ಲ್ಯಾಪ್ ಟಾಪ್ ಆಗಿದೆ. ಇದು 11ನೇ ಜೆನೆರೇಷನ್ H ಸೀರೀಸ್ ಲ್ಯಾಪ್ ಟಾಪ್ ಆಗಿದ್ದು, ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಓದುವ ಮಕ್ಕಳಿಗೂ ಉಪಯೋಗ ಆಗುವ ಲ್ಯಾಪ್ ಟಾಪ್ ಇದಾಗಿದೆ. ಆದರೆ ಯೂಟ್ಯೂಬ್ ವಿಡಿಯೋ ಎಡಿಟ್ ಮಾಡುವುದಕ್ಕೆ ತಕ್ಕ ಲ್ಯಾಪ್ ಟಾಪ್ ಇದಲ್ಲ. ಇದು 15.6 ಇಂಚ್, 39.62cm ವಿಸ್ತೀರ್ಣವಿದೆ. ಇದು ಪುಟ್ಟ ಲ್ಯಾಪ್ ಟಾಪ್ ಆಗಿದ್ದು, 1.8ಕೆಜಿ ತೂಕ ಇರುತ್ತದೆ. ಇದರಲ್ಲಿ 8GB RAM ಮತ್ತು 512 ಸ್ಟೋರೇಜ್ ಸ್ಪೇಸ್ ಹೊಂದಿದೆ.

ಈ ಲ್ಯಾಪ್ ಟಾಪ್ ನಲ್ಲಿ Windows11 install ಆಗಿರುತ್ತದೆ. ಇದರ ಸ್ಪೀಡ್ 3.2GHz ಇರಲಿದೆ, ಇದರಲ್ಲಿ Intel UHD Graphics ಇದ್ದು, ಗ್ರಾಫಿಕ್ ಕಾರ್ಡ್ ಕೂಡ ಹೊಂದಿದೆ. ಇದರ display FHD resolution (1920*1080) ಆಗಿದ್ದು, ಇದರಲ್ಲಿ ಆಂಟಿ ಗ್ಲೇರ್ ಇರುವುದರಿಂದ ನಿಮ್ಮ ಕಣ್ಣಿಗೂ ತೊಂದರೆ ಆಗುವುದಿಲ್ಲ. ಈ ಲ್ಯಾಪ್ ಗ್ಯಾಪ್ ನಲ್ಲಿ 2 USB ಪೋರ್ಟ್ ಇದೆ, ಜೊತೆಗೆ RJ 45 ಪೋರ್ಟ್, 1 HDM1 ಪೋರ್ಟ್, 1 SD ಕಾರ್ಡ್ ರೀಡರ್, 1 ಹೆಡ್ ಫೋನ್/ಮೈಕ್ರೋ ಫೋನ್ ಕಾಂಬೋ, ಜೊತೆಗೆ 3.5mm ಆಡಿಯೋ ಜ್ಯಾಕ್ ಕೂಡ ಇದೆ.

i5 ಪ್ರೊಸೆಸರ್ ಇರುವುದರಿಂದ ಇದರ ಸ್ಪೀಡ್ ಚೆನ್ನಾಗಿರುತ್ತದೆ. ಇದರಲ್ಲಿ 1 ಲೀಥಿಯಂ ಐಯಾನ್ ಬ್ಯಾಟರಿ ಇದ್ದು, 10 ಗಂಟೆಗಳ ವರೆಗು ಬ್ಯಾಟರಿ ಬರುತ್ತದೆ ಎನ್ನಲಾಗಿದೆ. ಆದರೆ ಬೇರೆ ಲ್ಯಾಪ್ ಟಾಪ್ ಗಳ ಹಾಗೆ ಇದು ಕೂಡ 4 ರಿಂದ 6 ಗಂಟೆ ಬ್ಯಾಕಪ್ ಬರಬಹುದು. ಈ ಹೊಸ ಲ್ಯಾಪ್ ಟಾಪ್ ನ ಮೂಲ ಬೆಲೆ ₹59,999 ರೂಪಾಯಿ ಆಗಿದ್ದು, ಅಮೆಜಾನ್ ನಲ್ಲಿ ನಿಮಗೆ ₹40,990 ರೂಪಾಯಿಗೆ ಸಿಗುತ್ತದೆ. 32% ನಿಮಗೆ ಡಿಸ್ಕೌಂಟ್ ಸಿಗುತ್ತಿದೆ. ಇದನ್ನು ನೀವು EMI ನಲ್ಲಿ ₹1,958 ರೂಪಾಯಿಗೆ ಖರೀದಿ ಮಾಡಬಹುದು, ಇದರಲ್ಲಿ No Cost EMI ಸಿಗಲಿದ್ದು, ಕ್ಯಾಶ್ ಬ್ಯಾಕ್ ಆಫರ್ ಸಹ ಸಿಗುತ್ತದೆ.

Comments are closed.