The Kerala story: ದೇಶದ ಬಹುತೇಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಕೇರಳ ಸ್ಟೋರಿ ಸಿನೆಮಾಗೆ ಬಿಗ್ ಶಾಕ್- ಇಷ್ಟು ದಿನ ಆದ್ಮೇಲೆ ಆಗಿದ್ದೇನು.

The Kerala story: ಈ ವರ್ಷ ಭಾರತ ಚಿತ್ರರಂಗದಲ್ಲಿ ಸದ್ದು ಮಾಡಿದ ಸಿನಿಮಾಗಳಲ್ಲಿ ಒಂದು ದಿ ಕೇರಳ ಸ್ಟೋರಿ. ಕೇರಳ ರಾಜ್ಯದಲ್ಲಿ ನಡೆದಿರುವ ನೈಜ ಘಟನೆಗಳ ಆಧಾರದ ಮೇಲೆ ತಯಾರಾದ ಸಿನಿಮಾ ಇದು. ಬಾಲಿವುಡ್ ನ ಸುದೀಪ್ತೋ ಸೇನ್ ಅವರು ಸಿನಿಮಾ ನಿರ್ದೇಶಿಸಿ, ಅದಾ ಶರ್ಮ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೇ 5ರಂದು ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ತೆರೆಕಂಡಿತು. ಇದನ್ನೂ ಓದಿ: Free Bus Service: ಫ್ರೀ ಬಸ್ ಯೋಜನೆ ಒಂದೇ ತಿಂಗಳು ಅವಕಾಶ ಇರುವುದು ಎನ್ನುವಂತೆ ನೂಗು ನುಗ್ಗಲು ಮಾಡಿ ಇತರರಿಗೆ ತೊಂದರೆ ಮಡುವ ಮಹಿಳೆಯರಿಗೆ ಸಾರಿಗೆ ಸಚಿವರ ಸ್ಕ್ರೀಕ್ಟ್ ವಾರ್ನಿಂಗ್!

ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲಿನಿಂದಲೇ ಈ ಸಿನಿಮಾ ವಿವಾದಗಳಿಗೆ ಸಿಲುಕಿಕೊಂಡಿತು, ಸಿನಿಮಾ ಬಿಡುಗಡೆ ಆಗಬಾರದು ಸ್ಟೇ ತರಬೇಕು ಎನ್ನುವ ಪ್ರಯತ್ನಗಳು ಕೂಡ ನಡೆದವು. ಇದೆಲ್ಲದರ ನಡುವೆ ತೆರೆಕಂಡ ದಿ ಕೇರಳ ಸ್ಟೋರಿ ಸಿನಿಮಾ, ಬ್ಲಾಕ್ ಬಸ್ಟರ್ ಹಿಟ್ ಎನ್ನಿಸಿಕೊಂಡಿದೆ. ಬಿಡುಗಡೆಯಾಗಿ 6 ವಾರಕ್ಕಿಂತ ಹೆಚ್ಚಿನ ಸಮಯ ಆಗಿದ್ದರು, ಈಗಲೂ ಕೆಲವು ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಸಿನಿಪ್ರಿಯರು ದಿ ಕೇರಳ ಸ್ಟೋರಿ ಸಿನಿಮಾ ನೋಡಿ ನಮ್ಮ ದೇಶದ ಪ್ರತಿಯೊಬ್ಬ ಹೆಣ್ಣುಮಗಳು ಈ ಸಿನಿಮಾ ನೋಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಕೇರಳ ಸಿನಿಮಾ ಗೆ ಈಗ ಒಂದು ಬಿಗ್ ಶಾಕ್ ಸಿಕ್ಕಿದೆ. ಈಗೆಲ್ಲಾ ಒಂದು ಸಿನಿಮಾ ಬಿಡುಯಡೆಯಾಗಿ, 6 ವಾರಗಳ ಒಳಗೆ ಓಟಿಟಿಗೆ ಬರುತ್ತದೆ, ಆದರೆ ಕೇರಳ ಸ್ಟೋರಿ ಸಿನಿಮಾ ಇನ್ನು ಓಟಿಟಿಗೆ ಬಂದಿಲ್ಲ, ಇದಕ್ಕೆ ಕಾರಣ ಏನು ಎಂದರೆ, ಯಾವ ಓಟಿಟಿ ಪ್ಲಾಟ್ ಫಾರ್ಮ್ ಸಹ ಈ ಸಿನಿಮಾವನ್ನು ಖರೀದಿ ಮಾಡಿಲ್ಲ. ಇದನ್ನೂ ಓದಿ: Kannada Serial: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ’ಸೆಂಟರ್ ಆಫ್ ಅಟ್ರಾಕ್ಷನ್’ ಸ್ನೇಹಾ ನಿಜಕ್ಕೂ ಹೀಗಿದ್ದಾರಾ? ನಂಬೋದಕ್ಕೇ ಸಾಧ್ಯವಿಲ್ಲ ನೋಡಿ!

ನಂಬುವುದಕ್ಕೆ ಇದು ಕಷ್ಟ ಅನ್ನಿಸುತ್ತದೆ, ಫ್ಲಾಪ್ ಸಿನಿಮಾಗಳು ಓಟಿಟಿಯಲ್ಲಿ ಬರುವಾಗ, ಕೇರಳ ಸ್ಟೋರಿ ಸಿನಿಮಾವನ್ನು ಯಾವುದೇ ಸಂಸ್ಥೆ ಖರೀದಿ ಮಾಡಿಲ್ಲ. ಈ ಬಗ್ಗೆ ನಿರ್ದೇಶಕ ಸುದೀಪ್ತೋ ಸೇನ್ ಅವರು ಮಾತನಾಡಿ, “ದಿ ಕೇರಳ ಸ್ಟೋರಿ ಸಿನಿಮಾಗೆ ಸೂಕ್ತ ಎನ್ನಿಸುವಂಥ ಯಾವುದೇ ಬೇಡಿಕೆ ಇನ್ನು ಬಂದಿಲ್ಲ..”ಎಂದಿದ್ದಾರೆ. ಖ್ಯಾತ ಓಟಿಟಿ ಪ್ಲಾಟ್ ಫಾರ್ಮ್ ಒಂದರಲ್ಲಿ ಸಿನಿಮಾ ಸ್ಟ್ರೀಮ್ ಆಗುತ್ತೆ ಎನ್ನಲಾಗಿತ್ತು, ಈ ಬಗ್ಗೆ ಕೂಡ ಸುದೀಪ್ತೋ ಸೇನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.. “ಅದೆಲ್ಲ ಸುಳ್ಳು ಸುದ್ದಿಗಳು.

ಒಳ್ಳೆಯ ಓಟಿಟಿ ಪ್ಲಾಟ್ ಫಾರ್ಮ್ ಇಂದ ಅಫರ್ ಬರಲಿ ಎಂದು ನಾವು ಕೂಡ ಕಾಯುತ್ತಿದ್ದೇವೆ, ನಾವು ಗಣನೆಗೆ ತೆಗೆದುಕೊಳ್ಳಬಹುದಾದ ಆಫರ್ ಇನ್ನು ಬಂದಿಲ್ಲ. ನಮಗೆ ಶಿಕ್ಷೆ ಕೊಡಬೇಕು ಎಂದು ಚಿತ್ರರಂಗವೇ ತೀರ್ಮಾನ ಮಾಡಿದ ಹಾಗೆ ಕಾಣುತ್ತಿದೆ. ನಮ್ಮ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿರುವುದು ಹಲವರಿಗೆ ಇಷ್ಟವಾಗಿಲ್ಲ, ಇದರಿಂದ ಯಶಸ್ಸಿಗೆ ಶಿಕ್ಷೆ ಕೊಡಬೇಕು ಎಂದು ಗುಂಪು ಮಾಡಿಕೊಂಡಿರುವ ಹಾಗೆ ಕಾಣುತ್ತಿದೆ..”ಎಂದು ಹೇಳಿದ್ದಾರೆ ಸುದೀಪ್ತೋ ಸೇನ್.

Comments are closed.