New Bike: KTM 390 ಅಥವಾ ಡಾಮಿನಾರ್ 400 – ಇವುಗಳಲ್ಲಿ ಬೆಸ್ಟ್ ಆಯ್ಕೆ ಯಾವುದು ಗೊತ್ತೇ? ಯಾರಿಗೆ ಯಾವುದು ಸೂಕ್ತ ಗೊತ್ತೇ?

New Bike: KTM 390 Duke ಬೈಕ್ ಭಾರತದಲ್ಲಿ ಲಾಂಚ್ ಆದಾಗಿನಿಂದಲು ಅದ್ಭುತವಾದ ಪರ್ಫಾರ್ಮೆನ್ಸ್ ಇಂದಾಗಿ ಬೈಕ್ ಪ್ರಿಯರಿಗೆ ಬಹಳ ಇಷ್ಟವಾಗಿದೆ. ಡ್ಯುಕ್ ಈಗ ಬಜಾಜ್ ಸಂಸ್ಥೆಯ ಜೊತೆಗೆ ಪಾರ್ಟ್ನರ್ಶಿಪ್ ನಲ್ಲಿದೆ, ಅದಕ್ಕೆ ಕಾರಣ ಬಜಾಜ್ ಸಂಸ್ಥೆಯು ಕೆಟಿಎಂ ಡ್ಯುಕ್ ಬೈಕ್ ನ ಇಂಜಿನ್ ತೆಗೆದುಕೊಂಡು, ಬಜಾಜ್ ಸಂಸ್ಥೆಯ ಹೊಸ ಬೈಕ್ ಗೆ ಅದನ್ನು ಸೇರಿಸಲಾಯಿತು, ಅದು Bajaj Dominar 400 ಬೈಕ್ ಆಗಿದೆ. ಈ ಎರಡು ಬೈಕ್ ಗಳಲ್ಲಿ ಇರುವುದು ಒಂದೇ ಇಂಜಿನ್ ಆಗಿದ್ದರು ಸಹ, ಇವೆರಡರಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇದನ್ನೂ ಓದಿ: Kannada Serial: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ’ಸೆಂಟರ್ ಆಫ್ ಅಟ್ರಾಕ್ಷನ್’ ಸ್ನೇಹಾ ನಿಜಕ್ಕೂ ಹೀಗಿದ್ದಾರಾ? ನಂಬೋದಕ್ಕೇ ಸಾಧ್ಯವಿಲ್ಲ ನೋಡಿ!

ಈ ಎರಡು ಬೈಕ್ ಗಳ ನಡುವೆ ಉತ್ತಮ ಆಯ್ಕೆ ಯಾವುದು ಎಂದು ತಿಳಿಸುತ್ತೇವೆ ನೋಡಿ.. ಕೇಸರಿ ಬಣ್ಣದ KTM ಡ್ಯುಕ್ ಬೈಕ್ ಅನ್ನು ನೋಡಿದ ತಕ್ಷಣವೇ ಎಲ್ಲರೂ ಕಂಡುಹಿಡಿಯುತ್ತಾರೆ, ಈ ಬೈಕ್ ಎಲ್ಲರನ್ನು ಆಕರ್ಷಿಸುತ್ತದೆ. ಆದರೆ ಬಜಾಜ್ ಡೊಮಿನರ್ 400 ಬೈಕ್ ನೋಡಲು ಡೀಸೆಂಟ್ ಆಗಿ ಕಾಣಿಸುತ್ತದೆ, ಈ ಬೈಕ್ ನಲ್ಲಿ ಹೆಡ್ ಲ್ಯಾಮ್ಪ್ ಕೆಳಗಡೆ ಇದೆ, ಜೊತೆಗೆ ಫ್ಯುಲ್ ಟ್ಯಾಂಕ್ ಸಹ ಬೇರೆ ರೀತಿ ಕಾಣಿಸುತ್ತದೆ. ಈ ಎರಡು ಬೈಕ್ ಗಳಲ್ಲಿ ಒಂದೇ ಥರದ 373cc, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಇಂಜಿನ್ ಬಳಸಲಾಗುತ್ತದೆ.

ಎರಡರಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಇರುತ್ತದೆ, ಹಾಗೆಯೇ ಅಸಿಸ್ಟ್ ಕ್ಲಚ್ ಇರುತ್ತದೆ. KTM ಬೈಕ್ ನಲ್ಲಿ 42.90 bhp 9000rpm, 37nm ನಲ್ಲಿ 7000 rpm ಟಾರ್ಕ್ ಔಟ್ ಪುಟ್ ನೀಡುತ್ತದೆ. ಇನ್ನು ಡೊಮಿನರ್ ಬೈಕ್ 8,800 rpm ನಲ್ಲಿ 39.45 bhp, 6500rpm ನಲ್ಲಿ 35nm ಪೀಕ್ ಟಾರ್ಕ್ ಉತ್ಪಾದನೆ ಮಾಡುತ್ತದೆ. KTM ಡ್ಯುಕ್ ಬೈಕ್ ನಲ್ಲಿ ಇಂಜಿನ್ ಬಹಳ ಸ್ಟ್ರಾಂಗ್ ಆಗಿ, ಟಾಪ್ ಎಂಡ್ ಪರ್ಫಾರ್ಮೆನ್ಸ್ ನೀಡುವ ಮೂಲಕ ಪವರ್ ಫುಲ್ ಆಗಿರುತ್ತದೆ. ಇದನ್ನೂ ಓದಿ: Personal Loan: ಪರ್ಸನಲ್ ಲೋನ್ ನಲ್ಲಿ EMI ಕಡಿಮೆ ಮಾಡಿಕೊಳ್ಳುವುದು ಹೇಗೆ ಗೊತ್ತೇ?? ಈ ಟ್ರಿಕ್ ಬಳಸಿ ಸಾಕು, EMI ತಾನಾಗಿಯೇ ಕಡಿಮೆಯಾಗುತ್ತದೆ

ಇತ್ತ ಡೊಮಿನರ್ 400 ಬೈಕ್ ನ ಇಂಜಿನ್ ಮಿಡ್ ರೇಂಜ್ ನಲ್ಲಿ ಇರುತ್ತದೆ. ಈ ಬೈಕ್ ನಲ್ಲಿ ಬಜಾಜ್ ಸಂಸ್ಥೆ ತಮ್ಮ ಟ್ರಿಪಲ್ ಪಾರ್ಕ್ ಟೆಕ್ನಾಲಜಿಯನ್ನು ಬಳಸುತ್ತಿದೆ. ಇನ್ನುಳಿದ ಫೀಚರ್ ಗಳ ಬಗ್ಗೆ ಹೇಳುವುದಾದರೆ, KTM ಡ್ಯುಕ್ ಬೈಕ್ ನಲ್ಲಿ ಸೂಪರ್ ಮೋಟೋ ಎಬಿಎಸ್, ಬ್ಲೂಟೂತ ಕನೆಕ್ಷನ್, TFT ಸ್ಕ್ರೀನ್, ಕ್ವಿಕ್ ಶಿಫ್ಟರ್ ಹಾಗೂ ಇನ್ನಿತರ ಆಧುನಿಕ ಫೀಚರ್ಸ್ ಗಳಿವೆ. ಇನ್ನು ಬಜಾಜ್ ಬೈಕ್ ಬಗ್ಗೆ ಹೇಳುವ್ಹದಾದರೆ, ಈ ಬೈಕ್ ನಲ್ಲಿ ಹ್ಯಾಂಡ್ ಗಾರ್ಡ್ ಗಳು ಜೊತೆಗೆ ಬರುತ್ತದೆ..

ವಿಂಡ್ ಶೀಲ್ಡ್, ಎರಡು ಡಿಜಿಟಲ್ ಕ್ಲಸ್ಟರ್ ಗಳು, USB ಪೋರ್ಟ್, ಬ್ಯಾಶ್ ಪ್ಲೇಟ್ ಇರುತ್ತದೆ. ಈ ಎರಡು ಬೈಕ್ ಗಳಲ್ಲಿ LED ಲೈಟಿಂಗ್ ಇರುತ್ತದೆ. ಕೊನೆಯದಾಗಿ ಈ ಬೈಕ್ ಗಳ ಬೆಲೆ ಬಗ್ಗೆ ತಿಳಿಯುವುದಾದರೆ,KTM ಡ್ಯುಕ್ 390 ಬೈಕ್ ಬೆಲೆ ₹2.97 ಲಕ್ಷ ರೂಪಾಯಿ ಆಗಿರುತ್ತದೆ, ಇನ್ನು Bajaj Dominar 400 ಬೈಕ್ ₹2.30 ಲಕ್ಷ ರೂಪಾಯಿಗೆ ಸಿಗುತ್ತದೆ. ಇದು ಎಕ್ಸ್ ಶೋರೂಮ್ ಬೆಲೆ ಆಗಿದ್ದು, ಬೆಸ್ಟ್ ಬೈಕ್ ಅನ್ನು ನೀವು ಆರಿಸಿಕೊಳ್ಳಿ.. ಇದನ್ನೂ ಓದಿ: Bajaj Pulsar NS160: ಜುಜುಬಿ 15 ಸಾವಿರಕ್ಕೆ ನಿಮ್ಮ ಮನೆಗೆ ತಗೊಂಡು ಬನ್ನಿ ಬಜಾಜ್ ಪಲ್ಸರ್- ಹೊಸದು – ಹೇಗೆ ಗೊತ್ತೇ?? ಇದಾದ ಬಳಿಕ ಏನು ಮಾಡಬೇಕು ಗೊತ್ತೇ?

Comments are closed.