Political News: ಬೇರೆ ಕಾಂಗ್ರೆಸ್ ನಾಯಕರು, ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂದರೆ – ರಾಮಲಿಂಗ ರೆಡ್ಡಿ ಆರೋಪ ಹೊರಿಸಿದ್ದು ಯಾರ ಮೇಲೆ ಗೊತ್ತೇ?

Political News: 2023ರ ವಿಧಾನಸಭೆ ಎಲೆಕ್ಷನ್ ಗೆದ್ದು ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿದೆ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೊಡುವುದಾಗಿ ಹೇಳಿರುವ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದು. ಈ ಯೋಜನೆಯ ಅಡಿಯಲ್ಲಿ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ, ಅವರ ಮನೆಯಲ್ಲಿರುವ ಅಷ್ಟು ಜನಕ್ಕೆ ತಲಾ 10 ಕೆಜಿ ಅಕ್ಕಿ ವಿತರಿಸುವುದಾಗಿ ಕಾಂಗ್ರೆಸ್ ಸರ್ಕಾರ್ ಭರವಸೆ ನೀಡಿದೆ. ಇದನ್ನೂ ಓದಿ: Bajaj Pulsar NS160: ಜುಜುಬಿ 15 ಸಾವಿರಕ್ಕೆ ನಿಮ್ಮ ಮನೆಗೆ ತಗೊಂಡು ಬನ್ನಿ ಬಜಾಜ್ ಪಲ್ಸರ್- ಹೊಸದು – ಹೇಗೆ ಗೊತ್ತೇ?? ಇದಾದ ಬಳಿಕ ಏನು ಮಾಡಬೇಕು ಗೊತ್ತೇ?

ಆದರೆ ಕೇಂದ್ರ ಸರ್ಕಾರ 10ಕೆಜಿ ಕೊಡುವುದಕ್ಕೆ ಒಪ್ಪುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಮೊದಲು ಬಿಜೆಪಿ ಸರ್ಕಾರ ತಲಾ 4 ಕೆಜಿ ಅಕ್ಕಿ ನೀಡುತ್ತಿದ್ದು, ಆದರೆ ಈಗ 10ಕೆಜಿ ನೀಡಬೇಕಿದ್ದು, ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಮುಖಂಡರು ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎನ್ನುತ್ತಿರುವಾಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೇರವಾಗಿ ಯಾರನ್ನು ದೂರುತ್ತಿದ್ದಾರೆ ಗೊತ್ತಾ?

ರಾಮಲಿಂಗಾರೆಡ್ಡಿ ಅವರು ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಇರುವುದಕ್ಕೆ ನಮ್ಮ ರಾಜ್ಯದ ಬಿಜೆಪಿ ಪಕ್ಷದ ಮುಖಂಡರೇ ಕಾರಣ ಎಂದು ಹೇಳುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ರಾಮಲಿಂಗಾರೆಡ್ಡಿ ಅವರು ಮಾಧ್ಯಮದ ಎದುರು ಮಾತನಾಡಿದರು, ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಇರುವುದಕ್ಕೆ ನಮ್ಮ ರಾಜ್ಯದ ಬಿಜೆಪಿ ನಾಯಕರೇ ಕಾರಣ, ಕೇಂದ್ರ ಸರ್ಕಾರ ಈಗ ಮಲತಾಯಿ ಧೋರಣೆ ಮಾಡುತ್ತಿದೆ.. ಇದನ್ನೂ ಓದಿ: Gold Rate: ಬೆಂಗಳೂರಿನಲ್ಲಿ ಆಷಾಡದ ಪ್ರಭಾವ ದಿಡೀರ್ ಕುಸಿದ ಬೆಳ್ಳಿ, ಚಿನ್ನದ ಬೆಲೆ- ನೋಡಿ ಖರೀದಿ ಮಾಡಿ, ಉತ್ತಮ ಆದಾಯ ಫಿಕ್ಸ್. ಎಷ್ಟಾಗಿದೆ ಗೊತ್ತೇ?

ಅಗತ್ಯವಿರುವಷ್ಟು ಅಕ್ಕಿಯನ್ನು ಉಚಿತವಾಗಿ ಕೊಡಿ ಎಂದು ನಾವು ಕೇಳುತ್ತಿಲ್ಲ, ಇಲ್ಲಿನ ಬಿಜೆಪಿ ಅಧಿಕಾರಿಗಳು ಹೇಳಿಕೊಟ್ಟಿರುವುದರಿಂದಲೇ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ. ಇದಕ್ಕೆ ಬಿಜೆಪಿಯೇ ನೇರ ಕಾರಣ ಎಂದು ರಾಮಲಿಂಗಾರೆಡ್ಡಿ ಅವರು ಆರೋಪ ಮಾಡಿದ್ದಾರೆ. ಹಾಗೆಯೇ ಅಗಸ್ಟ್ 15ರ ಒಳಗೆ ಕಾಂಗ್ರೆಸ್ ಸರ್ಕಾರ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಪೂರ್ತಿ ಮಾಡುತ್ತದೆ ಎಂದು ಭರವಸೆ ನೀಡಿದ್ದಾರೆ. ಬಿಜೆಪಿ ನಾಯಕರು ನಾವು ಹೋರಾಟ ಮಾಡ್ತೀವಿ ಅಂತ ಹೇಳ್ತಾರೆ, ಅದಕ್ಕೆಲ್ಲಾ ನಾವು ಅವಕಾಶ ಕೊಡೋದಿಲ್ಲ.

ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತರ್ತೀವಿ. ಸಾರಿಗೆ ಇಲಾಖೆ ದುರ್ಬಲವಾಗಿಲ್ಲ, ಶಕ್ತಿ ಯೋಜನೆ ಇಂದ ನಮಗೆ ನಷ್ಟವಾಗಿಲ್ಲ, ಇಲ್ಲಿ ಸಣ್ಣ ಪುಟ್ಟ ತೊಂದರೆ ಇದೆ ಅಷ್ಟೇ, ಈಗ ಹೊಸತರಲ್ಲಿ ಮಹಿಳೆಯರು ಹೆಚ್ಚು ಓಡಾಟ ಮಾಡುತ್ತಿದ್ದಾರೆ. ತೀರ್ಥಕ್ಷೇತ್ರಗಳಿಗೆ ಹೋಗಿಬರುತ್ತಿದ್ದಾರೆ. ಒಂದು ಸಾರಿ ಹೋಗಿಬಂದವರು ಮತ್ತೆ ಹೋಗೋದಿಲ್ಲ. ಅವುಗಳನ್ನೆಲ್ಲ ನಾವು ಸರಿ ಮಾಡುತ್ತೇವೆ, ಸಾರಿಗೆ ಇಲಾಖೆ ಇರೋದು ಜನರಿಗಾಗಿ..ಎಂದು ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ. ಇದನ್ನೂ ಓದಿ: Maruti Suzuki: ಬೈಕ್ ನಂತೆ ಮೈಲೇಜ್ ನೀಡುವ ಕಾರ್ ಬಿಡುಗಡೆ ಮಾಡುತ್ತಿರುವ ಮಾರುತಿ- ಎಷ್ಟು ಮೈಲೇಜ್ ಗೊತ್ತೇ? ಏನೆಲ್ಲಾ ಇರುತ್ತೆ ಅಂತೇ ಗೊತ್ತೆ?

Comments are closed.